• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳ್ಳಂದೂರು ಕೆರೆ ಕೇಸ್: ಬಾಗಿಲು ಮುಚ್ಚಿದ ಬಾಷ್ ಕಂಪನಿ

By Mahesh
|

ಬೆಂಗಳೂರು, ಮೇ 07: ಬೆಳ್ಳಂದೂರು ಜಲಾನಯನ ಪ್ರದೇಶದ ಎಲ್ಲಾ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ (ಕೆಎಸ್ ಪಿಸಿಬಿ) ಮಂಡಳಿ ಆದೇಶ ಹೊರಡಿಸಿದ ಬೆನ್ನಲ್ಲೇ ಆಟೋ ಮೊಬೈಲ್ ಉತ್ಪನ್ನ ತಯಾರಕಾ ಸಂಸ್ಥೆ ಬಾಷ್ ತನ್ನ ಘಟಕವನ್ನು ಮುಚ್ಚಿದೆ.

ಜರ್ಮನ್ ಮೂಲದ ಬಾಷ್ ನ ಭಾರತೀಯ ಘಟಕ ಈ ಬಗ್ಗೆ ಬಿಎಸ್ಇ ಗೆ ಈಗಾಗಲೇ ಮಾಹಿತಿ ನೀಡಿದೆ. ಆಡುಗೋಡಿ, ನಾಗಾನಾಥಪುರಗಳಲ್ಲಿ ಕೂಡಾ ಬಾಷ್ ತನ್ನ ಘಟಕ ಹೊಂದಿದೆ.[ಬೆಳ್ಳಂದೂರು ಕೆರೆ ಸುತ್ತಲಿನ ಕೈಗಾರಿಕೆ ಮುಚ್ಚಿ: ಎನ್ ಜಿಟಿ]

Bosch shuts plant near polluted Belandur lake

ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿರುವ ರಾಸಾಯನಿಕ ಪದಾರ್ಥಗಳನ್ನು ಕೈಗಾರಿಕೆಗಳು ಹೊರ ಹಾಕುತ್ತಿರುವ ಕುರಿತು ಜಂಟಿ ಪರಿಶೀಲನಾ ಸಮಿತಿ ಪರೀಕ್ಷಿಸುವವರೆಗೂ ಜಲಾನಯನ ಪ್ರದೇಶದ ಯಾವುದೇ ಕೈಗಾರಿಕೆ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಎನ್ ಜಿಟಿ ಆದೇಶದ ಮೇರೆಗೆ ಕೆಎಸ್ ಪಿಸಿಬಿ ಮೇಲ್ಕಂಡ ನಿರ್ಣಯ ಕೈಗೊಂಡಿದೆ.

ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಧ್ಯಂತರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ಫೊಸಿಸ್, ವಿಪ್ರೊ, ಆದಿತ್ಯ ಬಿರ್ಲಾ ನೊವಾ ಲಿಮಿಟೆಡ್‌, ಹನಿವೆಲ್ ಟೆಕ್ನಾಲಜಿ ಸೊಲ್ಯೂಷನ್ಸ್, ಬಾಷ್, ಆಕ್ಸೆಂಚರ್, ಒರಾಕಲ್ ಸಂಸ್ಥೆಗಳು ಈ ಪಟ್ಟಿಯಲ್ಲಿರುವ ಪ್ರಮುಖ ಖಾಸಗಿ ಕಂಪೆನಿಗಳು ಇವೆ.

ನ್ಯಾಷನಲ್‌ ಏರೋಸ್ಪೇಸ್ ಲ್ಯಾಬೊರೇಟರಿ, ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಏಳು ಘಟಕಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ), ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕ ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೆ ಭೀತಿ ಎದುರಾಗಿದೆ.

English summary
Auto component maker Bosch Ltd on Saturday said it has shut down its manufacturing plant located in the catchment area of the polluted Bellandur lake here. The Board issued the notice following the April 19 order of the National Green Tribunal to shut down all industries in the lake's vicinity for saving and restoring it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more