• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಿ ಐಟಿಐನಲ್ಲಿ ಬಾಷ್ ನಿಂದ ಕೌಶಲ್ಯ ಕೇಂದ್ರ ಆರಂಭ

|

ಬೆಂಗಳೂರು, ಮೇ 27: ಭಾರತೀಯ ಉದ್ಯಮಗಳು ವಿಕಸನಗೊಂಡಿವೆ; ಕಾರ್ಮಿಕರು ತಮ್ಮ ತಾಂತ್ರಿಕ ಜ್ಞಾನವನ್ನು ಸುಧಾರಣೆ ಮಾಡಿಕೊಳ್ಳಲು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಾಷ್ ಲಿಮಿಟೆಡ್ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ) ನಲ್ಲಿ 'ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್' ಅನ್ನು ಆರಂಭಿಸುವ ಮೂಲಕ ಕಾರ್ಮಿಕರಿಗೆ ಬೆಂಬಲವಾಗಿ ನಿಲ್ಲಲು ಮುಂದಡಿ ಇಟ್ಟಿದೆ.

ಈ ಕೇಂದ್ರಕ್ಕೆ ಮಾಡೆಲ್-ಬ್ಲಾಕ್1 ಎಂದು ಹೆಸರಿಡಲಾಗಿದ್ದು, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ & ಉದ್ಯಮಶೀಲತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಫ್ ಟ್ರೇನಿಂಗ್(ಡಿಜಿಟಿ), ಅಡಿಶನಲ್ ಸೆಕ್ರೆಟರಿ ರಾಜೇಶ್ ಅಗರ್ ವಾಲ್ ಮತ್ತು ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಉದ್ಘಾಟಿಸಿದರು.

ಬಾಷ್ ಇಂಡಿಯಾ ಲಿಮಿಟೆಡ್‍ಗೆ 1,598 ಕೋಟಿ ನಿವ್ವಳ ಲಾಭ!

ಈ ಕೇಂದ್ರವು ಪ್ರಸ್ತುತದ ಮತ್ತು ಭವಿಷ್ಯದ ಐ.ಟಿ.ಐ ವಿದ್ಯಾರ್ಥಿಗಳಿಗೆ ಕೈಗಾರಿಕೆ ಸಂಬಂಧಿತ ಕೌಶಲ್ಯಗಳನ್ನು ಕಲಿಸಿಕೊಡುವ ಭಾರತದ ಅತಿದೊಡ್ಡ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಒಂದು ಭಾಗವಾಗಲಿದೆ.

ಬಾಷ್‍ನ ಈ ಮಾಡೆಲ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಮೆಕ್ಯಾಟ್ರೊನಿಕಲ್ ಲ್ಯಾಬ್, ಮಾಡರ್ನ್ ಮ್ಯಾನ್ಯುಫ್ಯಾಕ್ಚರಿಂಗ್ ಲ್ಯಾಬ್, ಮಾಡರ್ನ್ ಕಾರ್ಪೆಂಟರಿ ಲ್ಯಾಬ್ ಮತ್ತು ಮಾಹಿತಿ & ಸಂಹವನ ತಂತ್ರಜ್ಞಾನ (ಐಸಿಟಿ) ಲ್ಯಾಬ್ ಸೇರಿದಂತೆ ಏಳು ಕಲಿಕಾ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಸ್ಯಾಮ್‍ಸಂಗ್‍ನೊಂದಿಗಿನ ಸಹಭಾಗಿತ್ವದ ಹ್ಯಾಂಡ್-ಹೆಲ್ಡ್ ಫೋನ್ ಮತ್ತು ಆಡಿಯೋ-ವಿಶ್ಯುವಲ್ ಲ್ಯಾಬ್ & ಹೋಂ ಅಪ್ಲೈಯನ್ಸಸ್ ಲ್ಯಾಬ್ ಸಹ ಇರಲಿದೆ.

ಡಿಜಿಟಿ ಅಡಿಷನಲ್ ಸೆಕ್ರೆಟರಿ ರಾಜೇಶ್

ಡಿಜಿಟಿ ಅಡಿಷನಲ್ ಸೆಕ್ರೆಟರಿ ರಾಜೇಶ್

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜೇಶ್ ಅಗರ್ವಾಲ್ ಅವರು, "ಭಾರತಾದ್ಯಂತ ಐಟಿಐಗಳಲ್ಲಿ ಆಗುತ್ತಿರುವ ರೂಪಾಂತರಗಳನ್ನು ನೋಡಲು ನಮಗೆ ಸಂತಸವೆನಿಸುತ್ತಿದೆ. ಈ ಸಂಸ್ಥೆಗಳ ಪ್ರಮುಖ ಅಂಶವೆಂದರೆ ಕೈಗಾರಿಕೆಗಳಿಗೆ ಸಂಪರ್ಕ ಹೊಂದಿರುವುದಾಗಿದೆ ಮತ್ತು ಇದಕ್ಕೆ ಈ ಐಟಿಐ ಸಾಕ್ಷಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಮುಂಬರುವ ದಿನಗಳಲ್ಲಿ ಇಂತಹ ಅಭಿವೃದ್ಧಿ ಕೇಂದ್ರಗಳಿಗೆ ಸಾಕಷ್ಟು ಹೂಡಿಕೆ ಮತ್ತು ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ನಮಗಿದೆ'' ಎಂದರು.

ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭಟ್ಟಾಚಾರ್ಯ

ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭಟ್ಟಾಚಾರ್ಯ

ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭಟ್ಟಾಚಾರ್ಯ ಅವರು ಮಾತನಾಡಿ, "ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿರುವ ವಿಕಸನವು ಕೇವಲ ಪ್ರಸ್ತುತದ್ದಲ್ಲದೇ ಭವಿಷ್ಯದ ಟ್ರೆಂಡ್‍ಗಳನ್ನೂ ಅಳವಡಿಸಿಕೊಳ್ಳುವ ಮೂಲಕ ಕಾರ್ಮಿಕರನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಐಟಿಐ ಇಂತಹ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಾಷ್‍ನ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಅನ್ನು ಆರಂಭಿಸಲಾಗಿದ್ದು, ಈ ಪ್ರಯತ್ನದಲ್ಲಿ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ದೇಶದ ಭವಿಷ್ಯದ ಕಾರ್ಮಿಕ ಶಕ್ತಿಯನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವಾಗುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ'' ಎಂದು ತಿಳಿಸಿದರು.

ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?

ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಹೊಸ ಸೇರ್ಪಡೆ

ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಹೊಸ ಸೇರ್ಪಡೆ

ಬಾಷ್‍ನ ಕೌಶಲ್ಯಾಭಿವೃದ್ಧಿ ಪ್ರಯತ್ನಕ್ಕೆ ಈ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಹೊಸ ಸೇರ್ಪಡೆಯಾಗಿದೆ. ಇದರ ಮೂಲಕ ಕಾರ್ಮಿಕ ಶಕ್ತಿಯನ್ನು ಸುಧಾರಣೆ ಮಾಡಿ ಕೈಗಾರಿಕೆಗೆ ಬೆಂಬಲ ನೀಡಿದಂತಾಗುತ್ತದೆ. ಈ ಉದ್ಘಾಟನಾ ಸಮಾರಂಭದ ನಂತರ ಪಾಲ್ಗೊಂಡಿದ್ದ ಗಣ್ಯರು ತರಬೇತಿ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಾಷ್ ಲಿಮಿಟೆಡ್‍ಗೆ ಶಾಲೆಯಿಂದ ಹೊರಗುಳಿದ ಯುವಪೀಳಿಗೆಗೆ ಉದ್ಯೋಗ ಕಲ್ಪಿಸುವ ತುಡಿತವಿದೆ. ಈ ಹಿನ್ನೆಲೆಯಲ್ಲಿ ಬ್ರಿಡ್ಜ್ ಎಂಬ ಕಾರ್ಯಕ್ರಮದ ಮೂಲಕ ಇಂತಹ ಯುವ ಸಮುದಾಯಕ್ಕೆ ಸೂಕ್ತರೀತಿಯ ಅಲ್ಪಾವಧಿಯ ತರಬೇತಿ ಕೋರ್ಸ್‍ಗಳನ್ನು ನೀಡಿ ಅವರನ್ನು ಉದ್ಯೋಗವಂತರನ್ನಾಗಿ ಮಾಡುತ್ತಿದೆ.

1,396 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ

1,396 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ

ಭಾರತ ಸರ್ಕಾರದೊಂದಿಗೆ ಬಾಷ್‍ನ ಸಹಭಾಗಿತ್ವದಡಿ 1,396 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಅತಿದೊಡ್ಡ ಯೋಜನೆಯಾಗಿದೆ. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ಕರ್ನಾಟಕದಲ್ಲಿ 28 ಐಟಿಐಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 10 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಈ ಕಾರ್ಯಕ್ರಮದಡಿ "ಮಾದರಿ ಐಟಿಐ"ಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ.

English summary
Bosch Limited has come forward to support the development of such a workforce through the creation of a new ‘Skill Development Center’ at the Government Industrial Training Institute (ITI) at Dairy Circle in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X