ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡುಗೋಡಿಯಿಂದ ಬಿಡದಿಗೆ, ಬಾಷ್ ಹೊಸ ಘಟಕ ಉದ್ಘಾಟನೆ

|
Google Oneindia Kannada News

ಬೆಂಗಳೂರು, ಜುಲೈ 17: ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ ಬಾಷ್, ಬಿಡದಿಯಲ್ಲಿ ತನ್ನ ಸ್ಮಾರ್ಟ್ ಫ್ಯಾಕ್ಟರಿಯ ವಿಸ್ತರಣೆಯ ಎರಡನೇ ಹಂತದ ಘಟಕವನ್ನು ಇಂದು ಉದ್ಘಾಟಿಸಿದೆ. ಬೆಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಈ ವಿಸ್ತೃತ ಘಟಕವು ಇತ್ತೀಚಿನ ಇಂಡಸ್ಟ್ರಿ 4.0 ಪರಿಹಾರಗಳು ಮತ್ತು ಕಾರ್ಬನ್-ನ್ಯೂಟ್ರಲ್ ಟೆಕ್ನಾಲಜಿಯ ವೈಶಿಷ್ಟ್ಯತೆಯನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿದ ರಾಬರ್ಟ್ ಬಾಷ್ ಜಿಎಂಬಿಎಚ್‍ನ ಆಡಳಿತ ಮಂಡಳಿಯ ಅಧ್ಯಕ್ಷ ವೋಕ್ಮರ್ ಡೆನ್ನರ್ ಅವರು, "ಬಾಷ್ ಭಾರತದಲ್ಲಿ ಹೆಚ್ಚು ಕಾರ್ಯಕ್ಷಮತೆ, ಹೆಚ್ಚು ಹೊಂದಿಕೊಳ್ಳುವ ಮತ್ತು ಸುಸ್ಥಿರ ಉತ್ಪಾದನೆಯತ್ತ ಹೆಜ್ಜೆ ಇಟ್ಟಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಬೇಡಿಕೆಯನ್ನು ಈಡೇರಿಸಲು ಮತ್ತು ಸ್ಪರ್ಧಾತ್ಮಕತೆಯ ಮಟ್ಟವನ್ನು ಹೆಚ್ಚಿಸಲು ಇದು ಪೂರಕ ಹೆಜ್ಜೆಯಾಗಿದೆ" ಎಂದು ಅಭಿಪ್ರಾಯಪಟ್ಟರು.

ಬಿಡದಿಯ ಈ ಘಟಕವು ಬಾಷ್ ಗ್ರೂಪಿನ ಜಾಗತಿಕ ಜಾಲದಲ್ಲಿ ಭಾರತದ ಬಲವಾದ ಪಾತ್ರವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಹೊಸ ಘಟಕಕ್ಕೆ ಕಂಪನಿಯು 31 ಮಿಲಿಯನ್ ಯೂರೋಗಳಷ್ಟು ಬಂಡವಾಳವನ್ನು ತೊಡಗಿಸಿದ್ದು, 2019 ರ ಅಂತ್ಯದ ವೇಳೆಗೆ ಇಲ್ಲಿ 2,500 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ.

ಈ ಬಿಡದಿ ಘಟಕವು ಬಾಷ್‍ನ ಪವರ್ ಟ್ರೇನ್ ಪರಿಹಾರಗಳ ಅಭಿವೃದ್ಧಿ ಮತ್ತು ಕಾಮನ್ ರೇಲ್ ಸಿಂಗಲ್-ಸಿಲಿಂಡರ್ ಪಂಪ್‍ಗಳು ಮತ್ತು ಹೈ-ಪ್ರೆಶರ್ ರೇಲ್‍ಗಳಂತಹ ಆಟೋಮೋಟಿವ್ ಉತ್ಪನ್ನಗಳ ತಯಾರಿಕೆಯ ಹಬ್ ಆಗಲಿದೆ.

ಆಡುಗೋಡಿಯಿಂದ ಬಿಡದಿಗೆ

ಆಡುಗೋಡಿಯಿಂದ ಬಿಡದಿಗೆ

ಆಡುಗೋಡಿಯಿಂದ ಬಿಡದಿಗೆ: ಬಾಷ್‍ನ ಅತಿದೊಡ್ಡ ಸ್ಥಳಾಂತರ ಯೋಜನೆಗಳಲ್ಲಿ ಒಂದು:

ಬಿಡದಿಯ ಮೊದಲ ಹಂತದಲ್ಲಿ ಆಡುಗೋಡಿಯ ತಯಾರಿಕಾ ಸೌಲಭ್ಯದಿಂದ ಬಿಡದಿಗೆ ಸುಮಾರು 500 ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಇದರೊಂದಿಗೆ ಹೊಸ-ಪೀಳಿಗೆಯ ಪವರ್ ಟ್ರೇನ್ ಪರಿಹಾರಗಳ ಉತ್ಪನ್ನಗಳ ತಯಾರಿಕಾ ಕಾರ್ಯಾಚರಣೆಯನ್ನೂ ಆರಂಭಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಸುಮಾರು 2,000 ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದೆ. ಇದರೊಂದಿಗೆ ಮಶಿನರಿ ಮತ್ತು ಉಪಕರಣಗಳ 760 ಘಟಕಗಳನ್ನೂ ಸ್ಥಳಾಂತರ ಮಾಡಲಾಗಿದೆ. ಇದು ಬಾಷ್‍ನ ಅತಿದೊಡ್ಡ ಸ್ಥಳಾಂತರ ಯೋಜನೆಗಳ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಆಡುಗೋಡಿಯ ತಯಾರಿಕಾ ಘಟಕ ಇದ್ದ ಸ್ಥಳದಲ್ಲಿ ಹೈಟೆಕ್-ಇಂಜಿನಿಯರಿಂಗ್ ಸೆಂಟರ್ ಮತ್ತು ಜರ್ಮನಿಯಿಂದ ಹೊರಗೆ ಅತಿದೊಡ್ಡ ಬಾಷ್ ಟೆಕ್ನಾಲಜಿ ಕ್ಯಾಂಪಸ್ ಆರಂಭವಾಗಲಿದೆ.

ಸುಸ್ಥಿರ ತಯಾರಿಕೆ

ಸುಸ್ಥಿರ ತಯಾರಿಕೆ

ಸುಸ್ಥಿರ ತಯಾರಿಕೆ: 2020 ರ ವೇಳೆಗೆ ಬಿಡದಿ ಘಟಕ ಆಗಲಿದೆ ಕಾರ್ಬನ್ ನ್ಯೂಟ್ರಲ್ ಮುಕ್ತ ಘಟಕ:
ಮುಂದಿನ ವರ್ಷದ ಆರಂಭಕ್ಕೂ ಮುನ್ನ ಬಿಡದಿ ಘಟಕವನ್ನು ಹವಾಮಾನ ತಟಸ್ಥ ಘಟಕವನ್ನಾಗಿ ಮಾಡಲು ಬಾಷ್ ಯೋಜನೆಯನ್ನು ಹಾಕಿಕೊಂಡಿದೆ. ತಮ್ಮ ಇಂಜಿನಿಯರಿಂಗ್, ತಯಾರಿಕೆ ಮತ್ತು ಆಡಳಿತಾತ್ಮಕ ಸೌಲಭ್ಯಗಳೊಂದಿಗೆ ವಿಶ್ವದಾದ್ಯಂತ 400 ಸ್ಥಳಗಳನ್ನು ಕಾರ್ಬನ್ ಮುಕ್ತ ಮಾಡುವ ಯೋಜನೆಯನ್ನು ರೂಪಿಸಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಇಂತಹ ಸಾಧನೆ ಮಾಡುತ್ತಿರುವ ವಿಶ್ವದ ಮೊದಲ ಕೈಗಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಷ್ ಪಾತ್ರವಾಗಲಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಬಿಡದಿ ಘಟಕವನ್ನು ಸುಸ್ಥಿರ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿ ಪ್ರಕಾರ, ತಯಾರಿಕಾ ಅಥವಾ ಉತ್ಪಾದನಾ ಕ್ಷೇತ್ರವು ಜಾಗತಿಕವಾಗಿ ಸುಮಾರು ಶೇ.32 ರಷ್ಟು ಕಾರ್ಬನ್ ಡಯಾಕ್ಸೈಡ್ ಮಾಲಿನ್ಯವನ್ನು ಉಂಟು ಮಾಡುತ್ತಿದೆ.

ಡಾ.ವೋಕ್ಮರ್ ಡೆನ್ನರ್

ಡಾ.ವೋಕ್ಮರ್ ಡೆನ್ನರ್

ಈ ಬಗ್ಗೆ ಮಾತನಾಡಿದ ಡಾ.ವೋಕ್ಮರ್ ಡೆನ್ನರ್ ಅವರು,"ಪ್ರಸ್ತುತದ ಜಾಗತಿಕ ಪರಿಸರ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಕಾರ್ಬನ್ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಉದ್ಯಮಗಳಿಗೆ ಮನವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹವಾಮಾನ ಸುರಕ್ಷತೆಯ ಕ್ರಮವನ್ನು ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಈಗ ನಾವು ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದು ಅಗತ್ಯ ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಈ ದಿಸೆಯಲ್ಲಿ ಜಗತ್ತಿನಾದ್ಯಂತ ನಾವು ಪರಿಸರ ಸ್ನೇಹಿ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುವತ್ತ ಉಪಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಈ ಪ್ರಯತ್ನದ ಪ್ರಮುಖ ಹೆಜ್ಜೆಯಾಗಿ ಬಿಡದಿ ಘಟಕವನ್ನು ನಿರ್ಮಾಣ ಮಾಡಿದ್ದೇವೆ" ಎಂದು ತಿಳಿಸಿದರು.

2020 ರ ವೇಳೆಗೆ ಕಾರ್ಬನ್ ಮುಕ್ತ

2020 ರ ವೇಳೆಗೆ ಕಾರ್ಬನ್ ಮುಕ್ತ

"2020 ರ ವೇಳೆಗೆ ಕಾರ್ಬನ್ ಮುಕ್ತ" ಎಂಬ ನೀಲನಕ್ಷೆಯೊಂದಿಗೆ ಬಿಡದಿಯ ಈ ಹೊಸ ಸೌಲಭ್ಯವನ್ನು ಸಿದ್ಧಪಡಿಸಲಾಗಿದೆ. ಇಂಧನ ವಿಶ್ಲೇಷಣೆಗಳು, ಸಸಿಗಳನ್ನು ನೆಡುವುದು, ಬಿಸಿ ಮಾಡಲು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಮತ್ತು 8.7 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಸೇರಿದಂತೆ ಮತ್ತಿತರೆ ಪರಿಸರ ಕಾಳಜಿಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸೋಲಾರ್ ಪವರ್ ಸೌಲಭ್ಯದಿಂದ ಘಟಕದಲ್ಲಿ ಶೇ.30 ರಷ್ಟು ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಪರಿಸರಸ್ನೇಹಿ ಘಟಕವಾಗಿದ್ದು, ಭಾರತದಾದ್ಯಂತ ಅತ್ಯುತ್ತಮ ಉತ್ಪಾದನಾ ಪದ್ಧತಿಗೆ ಒಂದು ಮೈಲಿಗಲ್ಲಾಗಿದೆ.

English summary
Bosch India has inaugurated its new expanded smart factory for mobility solutions in Bidadi, near Bengaluru. The company has invested about 31 million Euros towards the expansion of its Bidadi factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X