ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋರ್‌ವೆಲ್‌ಗಳ ಸಂಖ್ಯೆ ದುಪ್ಪಟ್ಟು,ದರವೂ ಹೆಚ್ಚು, ಹೊಸತಕ್ಕೆ ಅವಕಾಶ ಕೊಡ್ಬೇಕಾ?

|
Google Oneindia Kannada News

ಬೆಂಗಳೂರು, ಏ.27: ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕೊಳವೆ ಬಾವಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ಜಲಮಂಡಳಿ ನೀಡಿರುವ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಸಾರ್ವಜನಿಕ ಕೊಳವೆ ಬಾವಿಗಳು ಸೇರಿದಂತೆ 3.61 ಲಕ್ಷ ಕೊಳವೆ ಬಾವಿಗಳಿವೆ.

ಲೋಕಸಭಾ ಚುನಾವಣೆ ವಿಶೇಷ ಪುಟ

2012ರಲ್ಲಿ ಕೇವಲ 1.5 ಲಕ್ಷಗಳಿದ್ದ ಕೊಳವೆಬಾವಿ 2019ರಷ್ಟೊತ್ತಿಗೆ 3.5 ಲಕ್ಷ ದಾಟಿದೆ. ಕೊಳವೆ ಬಾವಿಗಳನ್ನು ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆಲ್ಲ ತೆರೆಯುವುದಲ್ಲ. ಒಂದು ಕೊಳವೆಬಾವಿಗಳಿಂದ ಮತ್ತೊಂದು ಕೊಳವೆ ಬಾವಿಗೆ ಇರುವ ಅಂತರವನ್ನು ನೋಡಿಕೊಳ್ಳಬೇಕಾಗುತ್ತದೆ.

Borewell number doubled, is this time to wrap up

ಇತ್ತೀಚೆಗೆ ಜಲಮಂಡಳಿಯಿಂದ ಅನುಮತಿ ಪಡೆಯದೆಯೇ ಎಷ್ಟೋ ಮಂದಿ ಕೊಳವೆಬಾವಿಗಳನ್ನು ನಿರ್ಮಿಸಿದ್ದಾರೆ ಇದರಿಂದ ಅಂತರ್ಜಲ ಬತ್ತುತ್ತಿದೆ. ಮನೆ ಬಳಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಯಾವುದೇ ನಿಯಮಾವಳಿಗಳ ಪಾಲನೆ ಆಗುತ್ತಿಲ್ಲ.

ಒಂದೆಡೆ ಕಾಂಕ್ರೀಟೀಕರಣದಿಂದ ಮಳೆ ನೀರು ಭೂಮಿಯನ್ನು ಸೇರುತ್ತಿಲ್ಲ. ಇನ್ನೊಂದೆಡೆ ಈ ಲಕ್ಷಾಂತರ ಕೊಳವೆ ಬಾವಿಗಳ ಮೂಲಕ ಅಂರ್ಜಲವನ್ನು ಯಾವುದೇ ಅಡೆತಡೆಗಳಿಲ್ಲದೆ ಹೀರಲಾಗುತ್ತಿದೆ ಎನ್ನುವುದು ವಾದ.

ಇದರಿಂದ ನಗರ ಕೇಂದ್ರ ಭಾಗದಲ್ಲಿ ವಿವಿಧೆಡೆ 1200 ಅಡಿ ಕೆ.ಆರ್‌ಪುರ ಸೇರಿದಂತೆ ಹೊರವಲಯದ ಕೆಲವೆಡೆ 1400 ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ. 2001-02ರಲ್ಲಿ 600-700 ಅಡಿ ಕೊರೆದೆರೆ ನೀರು ಲಭ್ಯವಾಗುತ್ತಿತ್ತು.

ಹೀಗಾಗಿ ಕಾವೇರಿ ನೀರು ಲಭ್ಯವಾಗುವಂತಹ ಪ್ರದೇಶದಲ್ಲಿ ಕೊಳವೆ ಬಾವಿಯನ್ನು ಕೊರೆಯುವುದನ್ನು ನಿಲ್ಲಿಸಬೇಕು, ಹೊಸ ಕೊಳವೆ ಬಾವಿಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪರಿಸರ ತಜ್ಞರು ಒತ್ತಾಯಿಸುತ್ತಿದ್ದಾರೆ.

English summary
Bengaluru City's Borewell number doubled in 5-6 years. So is the best time to put ban on New borewells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X