ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3500 ರೂಪಾಯಿಗಾಗಿ ಮಹಿಳೆ ಹತ್ಯೆ-ಆಕೆಯನ್ನು ಕೊಂದಿದ್ದೇಕೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಹಣಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ದನಾಗಿ ಬಿಡುತ್ತಾನೆ. ಹಣಕ್ಕಾಗಿ ಹೆಣವನ್ನು ಬೀಳಿಸುವುದು ನೀರು ಕುಡಿದಷ್ಟೇ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಕೇವಲ 3500 ರೂಪಾಯಿ ಆಸೆಗೆ ಇಲ್ಲೊಬ್ಬ ಮಹಿಳೆಯನ್ನು ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಹಣ ಮನುಷ್ಯನ ಹತ್ತಿರ ಎಂಥಾ ಕೆಲಸವನ್ನು ಬೇಕಾದರೂ ಮಾಡಿಸುತ್ತೆ, ಆದರೆ ಹಣಕ್ಕಾಗಿ ಏನು ಕೆಲಸ ಮಾಡಬೇಕು ಅನ್ನೊದು ತುಂಬ ಮುಖ್ಯವಾಗುತ್ತೆ. ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸಂಸಾರವನ್ನೆ ಹಾಳುಮಾಡುತ್ತದೆ. ಕಳೆದ ವಾರ ಬೊಮ್ಮನಹಳ್ಳಿ‌ ಕೆರೆ ಬಳಿ ಮಹಿಳೆ ಕೊಲೆ ಪ್ರಕರಣ ಬೆನ್ನತ್ತಿದ ಬೊಮ್ಮನಹಳ್ಳಿ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸುತ್ತಾರೆ. ಕೊಲೆಯಾಗಿದ್ದು ಯಾರೂ ಅಂತಾ ಗುರುತು ಸಹ ಇಲ್ಲದ ಕೇಸ್ ಪೊಲೀಸರು ಪತ್ತೆ ಮಾಡಿದ್ದಾರೆ.

ಹೊಸ ಸ್ನೇಹಿತನನ್ನೇ ಆಗಲಿ ಹಳೇಯ ಸ್ನೇಹಿತನನ್ನೇ ಆಗಲಿ ಅಷ್ಟು ಸುಲಭಕ್ಕೆ ನಂಬಲೇಬಾರದು. ಹಣಕಾಸಿನ ವ್ಯವಹಾರದ ಮುಂದೆ ಸ್ನೇಹ ಗೌಣವಾಗಿ ವ್ಯಾಮೋಹ ಹೆಚ್ಚಾಗಿ ಅಹಿತಕರ ಘಟನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಸ್ನೇಹದ ಸಲುಗೆಯಲ್ಲಿ ಮಹಿಳೆಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕೆರದುಕೊಂಡು ಹೋದ ದುಷ್ಟನೊಬ್ಬ ಮಹಿಳೆಯ ತಲೆಯ ಮೇಲೆ ಕಲ್ಲನ್ನು ಹಾಕಿ ಬರ್ಬರವಾಗಿ ಕೊಲೆಯನ್ನು ಮಾಡಿದ್ದಾನೆ.

3500 ಹಣಕ್ಕಾಗಿ ನಡೆಯಿತು ಹೇಯ ಕೃತ್ಯ

3500 ಹಣಕ್ಕಾಗಿ ನಡೆಯಿತು ಹೇಯ ಕೃತ್ಯ

ಹಸೀನಾ ಎಂಬಾಕೆ ಜೀವನಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಳು. ಹಸೀನಾ ಕೊಲೆಗೂ ಮೂರು ದಿನಗಳ ಮುನ್ನ ವಾಸೀಮ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದಳು. ಆಟೋ ಡ್ರೈವರ್ ಆಗಿದ್ದ ವಾಸೀಮ್ ಹಸಿನಾಳನ್ನು ಪಿಕ್ ಮಾಡಿಕೊಂಡು ಬೊಮ್ಮನಹಳ್ಳಿ ಕೆರೆ ಹತ್ತಿರ ಬಂದಿದ್ದ. ಕೆರೆ ಬಳಿ ಸ್ವಲ್ಪ ಸಮಯ ಏಕಾಂತದಲ್ಲಿ‌ ಕಾಲ ಕಳೆದು ನಂತರ ಹಸೀನಾಳ‌ ಬಳಿ ಹಣಕ್ಕೆ ವಾಸೀಮ್ ಡಿಮ್ಯಾಂಡ್ ಮಾಡಿದ್ದ. ಇದಕ್ಕೆ ಹಸೀನಾ ಒಪ್ಪದಿದ್ದಾಗ ತಲೆ ಮೇಲೆ ಕಲ್ಲು ಹಾಕಿ ಆಕೆಯನ್ನು ಕೊಲೆ ಮಾಡಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 3500 ಹಣದೊಂದಿಗೆ ಪರಾರಿಯಾಗಿದ್ದ.

4+2 ಮಕ್ಕಳು ಅನಾಥ, ರೇಷನ್ ಗೂ ಪರದಾಟ

4+2 ಮಕ್ಕಳು ಅನಾಥ, ರೇಷನ್ ಗೂ ಪರದಾಟ

ಹಸೀನಾಳನ್ನು ಕೊಂದಿದ್ದ ವಾಸಿಮ್. ಈ ಇಬ್ಬರ ಕುಟುಂಬದ್ದೂ ಕಣ್ಣೀರ ಕತೆಯೇ. ಕೊಲೆಯಾದ ಹಸೀನಾಳ ಎರಡು ಮಕ್ಕಳು ಅನಾಥರನ್ನಾಗಿ ಮಾಡಿದ್ದಾನೆ ವಾಸೀಮ್. ವಾಸಿಂಗೂ ನಾಲ್ಕು ಮಕ್ಕಳು ಬಿಟ್ಟು ಜೈಲು ಸೇರಿದ್ದಾನೆ. ಇನ್ನೂ ವಾಸೀಮ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು ಆರೋಪಿಯನ್ನ ಹಿಡಿಯಲು ಹೋದಾಗ ಮನೆಯಲ್ಲಿ ರೇಷನ್ ಕೂಡ ಇರಲಿಲ್ಲವಂತೆ. ಇದನ್ನು ಕಂಡ ಬೊಮ್ಮನಹಳ್ಳಿ ಪೊಲೀಸರೇ ಮಕ್ಕಳು ಹಸಿವು ನೋಡಲಾರದೆ ಮನೆಗೆ ಒಂದಷ್ಟು ರೇಷನ್ ಕೊಡಿಸಿ ಹೆಲ್ಪ್ ಮಾಡಿದ್ದಾರೆ. ಮಕ್ಕಳ ಹಸಿವನ್ನು ನೀಗಿಸಲು ಕೊಲೆ ಮಾಡಿದ್ದಾಗಿ ಪಾಪಿ ವಾಸಿಂ ಸಹ ಪೊಲೀಸರ ಬಳಿ ಅವಲತ್ತುಕೊಂಡಿದ್ದಾನೆ.

ಆಟೋ ಪತ್ತೆ ಬಳಿಕ ಸತ್ಯಾಂಶ ಬಯಲು

ಆಟೋ ಪತ್ತೆ ಬಳಿಕ ಸತ್ಯಾಂಶ ಬಯಲು

ಬೊಮ್ಮನಹಳ್ಳಿ ಪೊಲೀಸರು ಮಹಿಳೆ ಹೋಗಿದ್ದ ಸಮಯವನ್ನು ಆಧಾರವಾಗಿಟ್ಟುಕೊಂಡಿ 85 ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದ್ದಾರೆ. ವಾಸೀಮ್ ಜಯನಗರದಿಂದ ಆಟೋದಲ್ಲಿ ಹಸೀನಾಳನ್ನು ಪಿಕ್ ಅಪ್ ಮಾಡಿಕೊಂಡು ಹೋಗಿರುವುದು ಗೋತ್ತಾಗಿದೆ. ಆ ಬಳಿಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆಟೋವನ್ನು ಪೊಲೀಸರು ಪತ್ತೆ ಹಚ್ಚಿದ್ದಾಕೆ. ವಾಸೀಂ ಮೊದಲು ತನಗೂ ಘಟನೆಗೂ ಸಂಬಂಧವಿಲ್ಲ ಎಂದಿದ್ದಾನೆ. ಆದರೆ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆಯ ವೃತ್ತಾಂತ ಬಯಲಾಗಿದೆ.

ತನಿಖೆಯ ವೇಳೆಯಲ್ಲಿ ಕೊಲೆಯ ರಹಸ್ಯ ಬಯಲು

ತನಿಖೆಯ ವೇಳೆಯಲ್ಲಿ ಕೊಲೆಯ ರಹಸ್ಯ ಬಯಲು

"ಆಗಸ್ಟ್ 11 ರಂದು ಮಹಿಳೆಯ ಮೃತದೇಹ ಸಿಕ್ಕಿತ್ತು. ತಲೆಯಲ್ಲಿ ಗಾಯವಾಗಿತ್ತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸು ದಾಖಲು ಮಾಡ್ಕೊಂಡು ತನಿಖೆಯನ್ನು ಮಾಡಲು ಪ್ರಾರಂಭಿಸಿದಾಗ ಅಲ್ಲಿ ಯಾವುದೇ ರೀತಿಯ ಸುಳಿವು ಇರಲಿಲ್ಲ. ಒಂದೂವರೆ ದಿನದಲ್ಲಿ ಮಹಿಳೆಯ ಚಹರೆ ಪತ್ತೆಯಾಗಿತ್ತು. ರಾತ್ರಿ ವೇಳೆ ಕೆಲಸ ಮಾಡ್ತಿದ್ದರು ಅವರು ಬಂದಿರಲಿಲ್ಲ ಎಂದು ಹೇಳಿದ್ದರು. ನಂತರ ಅವರ ಮನೆಯಲ್ಲಿ ಅವರ ಪೋಟೋಗಳನನು ನೋಡಿದಾಗ ಮೃತ ಮಹಿಳೆಯ ಗುರುತು ನಿಖರವಾಗಿತ್ತು. ನಂತರ ಆ ಏರಿಯಾದಲ್ಲಿ ಯಾರ್ಯಾರು ಬಂದಿದ್ದಾರೆಂದು ಪರಿಶೀಲನೆ ನಡೆಸಿದಾಗ ಮಹಿಳೆ ಓಡಾಡಿರೋದು ಪತ್ತೆಯಾಗಿದೆ. 85 ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದ್ದೆವು. ಜಯನಗರದಿಂದ ಆಟೋದಲ್ಲಿ ಪಿಕ್ ಅಪ್ ಮಾಡಿಕೊಂಡು ಬರ್ತಾನೆ. ಆ ಸಿಸಿಟಿವಿಯಲ್ಲಿ ದಾಖಲಾದ ಆಟೋವನ್ನು ಪತ್ತೆ ಮಾಡಿದ್ದೆವು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ. ಮೂರು ದಿನಗಳ ಹಿಂದೆ ಪರಿಚಯವಾಗಿದ್ದಳು ,ಪಿಕಪ್ ಡ್ರಾಪ್ ಮಾಡುತ್ತಿದ್ದ ಆರೋಪಿ ನಂತರ ಅವಳ ಬಳಿ ಹಣ ಕೇಳಿದ್ದ ಆಕೆ ನಿರಾಕರಿಸಿದ ಹಿನ್ನಲೆ ಆಕೆಯನ್ನ ಕೊಲೆ ಮಾಡಿ ಪರ್ಸ್ ನ್ನು ತೆಗೆದುಕೊಂಡು ಹೋಗಿದ್ದ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಹೇಳಿದ್ದಾರೆ.

English summary
Bommanahalli police nabbed a murdered who killed a lady for Rs 3500,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X