ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಸೃಷ್ಟಿಸುತ್ತಿದ್ದ ಗ್ಯಾಂಗ್ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರಿನಲ್ಲಿ ನಕಲಿ ದಾಖಲೆ ದೃಷ್ಟಿಸಿ ನಕಲಿ ಪ್ರಕ್ರಿಯೆಗಳನ್ನು ನಡೆಸಿ ಆಧಾರ್ ಕಾರ್ಡ್ ಮಾಡಿಕೊಡು ದುರ್ಬಳಕೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ಠಾಣಾ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನಿಲ್.ಡಿ ರೂಪಂ ಭಟ್ಟಾಚಾರ್ಜಿ, ರವಿ ಬಂಧಿತರಾಗಿದ್ದಾರೆ. ಈ ಆರೋಪಿಗಳು ನಕಲಿ ವಿಳಾಸ, ಹೆಸರು, ಫೋಟೋ ನೀಡಿ ಆಧಾರ್ ಕಾರ್ಡ್ ಕೊಡಿಸುತ್ತಿದ್ದರು. ಆರು ಜನರ ಪೈಕಿ ಒಬ್ಬೊಬ್ಬರು ಒಂದು ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇದೊಂದು ವ್ಯವಸ್ಥಿತ ಜಾಲವನ್ನು ಬೊಮ್ಮನಹಳ್ಳಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಯಾರು? ಯಾವ ಕೆಲಸ ಮಾಡಿಕೊಡುತ್ತಿದ್ದರು
1 ಪ್ರವೀಣ್ - ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿ
*ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಟ್ಟುಕೊಳ್ಳುತ್ತಿದ್ದ ನಂತರ ಆಧಾರ್ ಬೇಕಿರುವವರ ಮಾಹಿತಿ‌ ಪಡೆದು ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುತ್ತಿದ್ದ
2 ರಮೇಶ್ - ಆಟೋ ಚಾಲಕ
*ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ‌ ಕರೆದೊಯ್ಯುತ್ತಿದ್ದ. ಸಹಿ ಹಾಕಿಸಲು ಸಹಾಯವನ್ನು ಮಾಡುತ್ತಿದ್ದ.
3 ಸುನಿಲ್.ಡಿ - ಪ್ರೈಮರಿ ಹೆಲ್ತ್ ಸೆಂಟರಿನ ನಿವೃತ್ತ ವೈದ್ಯ
*ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್ ಅನ್ನು ತನ್ನ ಬಳಿ‌ ಇಟ್ಟುಕೊಂಡಿದ್ದು.
ಪ್ರವೀಣ್ ಕಳಿಸುವವರ ಅಪ್ಲಿಕೇಶನ್ ಪಡೆದು ಸೀಲ್ ಸಹಿ‌ ಹಾಕಲು ಹಣವನ್ನು ಪಡೆಯುತ್ತಿದ್ದ.

Bommanahalli police have arrested a Fake Aadhar gang in Bengaluru

4- ನಾಗರಾಜ್ - ಖಾಸಗಿ ಬ್ಯಾಂಕ್ ಉದ್ಯೋಗಿ,
*ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಈ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ.ಈ ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ ಎನ್ನಲಾಗಿದೆ.
5 - ರೂಪಂ ಭಟ್ಟಾಚಾರ್ಜಿ - ಓರಿಸ್ಸಾ ಮೂಲದವನು
*ಗಾರ್ಮೆಂಟ್ಸ್ ನಲ್ಲಿ ಸೂಪರ್ವೈಸರ್ ಕೆಪಸ ಮಾಡಿಕೊಂಡಿದ್ದ ಆರೋಪಿ.‌ ಸ್ಯಾಲರಿ ಪಡೆಯಲು ಕಡ್ಡಾಯವಾಗಿರುವುದರಿಂದ ಆಧಾರ್ ಬೇಕಿರುವವರನ್ನ ಪ್ರವೀಣ್ ಗೆ ರೆಫರ್ ಮಾಡುತ್ತಿದ್ದ.
6 ರವಿ - ಸರ್ಕಾರಿ ಆಸ್ಪತ್ರೆಯ ಉದ್ಯೋಗಿ, ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡ್ತಿದ್ದ
*ಪ್ರತಿ ಹಂತದಲ್ಲಿ‌ ನೂರಿನ್ನೂರು ರೂಪಾಯಿ‌ ಪಡೆದು ಆಧಾರ್ ಪ್ರಕ್ರಿಯೆ ಕಂಪ್ಲೀಟ್ ಮಾಡಿಕೊಡ್ತಿದ್ದ ಆರೋಪಿಗಳು

ಬೊಮ್ಮನಹಳ್ಳಿ‌ ಪೊಲೀಸರು ಆರೋಪಿಗಳನ್ನ ಬಂಧಿಸಿ ಅವರಿಂದ ಸೀಲ್, ಕಂಪ್ಯೂಟರ್, ಪ್ರಿಂಟರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜಪ್ತಿ ಮಾಡಿದ್ದಾರೆ.

English summary
Bommanahalli police have arrested a gang in Bengaluru who were misusing Aadhaar cards by conducting fake processes in view of fake document, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X