ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೊಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್

By Mahesh
|
Google Oneindia Kannada News

ಬೆಂಗಳೂರು, ಜನವರಿ 15: ಮೆಟ್ರೋ ಕಾಮಗಾರಿಗೆಂದು ಕತ್ತರಿಸಲಾಗುತ್ತಿದ್ದ ಮರಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರಿಸಿ ಪೋಷಿಸಲಾಗುವುದು ಎಂದು ಕೇಂದ್ರ ಸರ್ಕಾರದ ರಾಸಾಯನಿಕ, ರಸಗೊಬ್ಬರಗಳ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಟಿಎಂ ಲೇಔಟ್‍ನ 4 ನೇ ಸ್ಟೇಜ್‍ನಲ್ಲಿರುವ ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಟ್ಟಡದಲ್ಲಿ ನಗರದ ಅತಿ ದೊಡ್ಡ ಬೆಂಗಳೂರು ಒನ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಸಿರು ಗಿಡ ಮರ ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಹಸಿರು ವಾತಾವರಣ ಕಡಿಮೆಯಾಗಿರುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ನಗರದಲ್ಲಿ ಪ್ರತಿ ಭಾನುವಾರ ಹಸಿರು ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾನುವಾರದಂದು 180 ಸಸಿಗಳನ್ನು ನೆಡಲಾಗಿದೆ. ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಪರಿಸರಕ್ಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಅವರು ಕರೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರದ ಹಲವಾರು ಮುಖಂಡರು, ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು.

ಮೆಟ್ರೋಗಾಗಿ ಹಲವಾರು ಮರಗಳ ತೆರವು

ಮೆಟ್ರೋಗಾಗಿ ಹಲವಾರು ಮರಗಳ ತೆರವು

ಮೆಟ್ರೋ ರೈಲು ಮಾರ್ಗದ ಕಾಮಗಾರಿಗಾಗಿ ಹಲವಾರು ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಮೆಟ್ರೋದ ಮುಂದುವರೆದ ಕಾಮಗಾರಿಗಾಗಿ 108 ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಆ ಮರಗಳನ್ನು ಕಡಿದು ಹಾಕದೇ ಬೇರು ಸಹಿತ ತೆಗೆದು ಅವುಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅನಂತಕುಮಾರ್ ಅವರು, ಈಗಾಗಲೇ ಬಿಳೇಕಹಳ್ಳಿ ವಾರ್ಡಿನ ವಿವಿಧೆಡೆ 56 ಮರಗಳನ್ನು ನೆಡುವ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೈಗೆಟುಕುವ ದರದಲ್ಲಿ ಔಷಧಿಗಳು

ಕೈಗೆಟುಕುವ ದರದಲ್ಲಿ ಔಷಧಿಗಳು

ಸಾರ್ವಜನಿಕರ ಅನುಕೂಲ ಮತ್ತು ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಗತ್ಯವಿರುವೆಡೆಯೆಲ್ಲಾ ಜನೌಷಧಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಕೇಂದ್ರದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಲವೇ ಕೆಲವು ಜನೌಷಧಿ ಕೇಂದ್ರಗಳಿದ್ದವು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ನಮ್ಮ ಸರ್ಕಾರ ಬಂದ ನಂತರ 3320 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅನಂತಕುಮಾರ್ ತಿಳಿಸಿದರು.

ಶಾಸಕ ಸತೀಶ್‍ರೆಡ್ಡಿ ಅವರು ಮಾತನಾಡಿ

ಶಾಸಕ ಸತೀಶ್‍ರೆಡ್ಡಿ ಅವರು ಮಾತನಾಡಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್‍ರೆಡ್ಡಿ ಅವರು ಮಾತನಾಡಿ, ಬೊಮ್ಮನಹಳ್ಳಿ ಕ್ಷೇತ್ರದ ಜನರ ಅನುಕೂಲಕ್ಕಾಗಿ ಇಡೀ ಬೆಂಗಳೂರಿನಲ್ಲಿಯೇ ಅತಿ ದೊಡ್ಡದಾದ ಬೆಂಗಳೂರು ಒನ್ ಕೇಂದ್ರವನ್ನು ಆರಂಭಿಸಲಾಗಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬ ನಾಗರಿಕನೂ ಬಳಸಿಕೊಳ್ಳಬೇಕು. ಇದಲ್ಲದೇ, ಕ್ಷೇತ್ರದ ಎಲ್ಲಾ 9 ವಾರ್ಡ್‍ಗಳಲ್ಲಿಯೂ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸದಸ್ಯರಾದ ರಾಮಮೋಹನ್ ರಾಜು

ಸದಸ್ಯರಾದ ರಾಮಮೋಹನ್ ರಾಜು

ಬಿಬಿಎಂಪಿ ಸದಸ್ಯರಾದ ರಾಮಮೋಹನ್ ರಾಜು ಅವರು, ನಮ್ಮ ವಾರ್ಡ್ ಮತ್ತು ಕ್ಷೇತ್ರದಲ್ಲಿನ ಜನರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಪ್ರತಿಯೊಂದು ಸೇವೆಗಳು ದೊರೆಯಬೇಕೆಂಬ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಅದೇರೀತಿ ಬೊಮ್ಮನಹಳ್ಳಿ ವಾರ್ಡ್ 175 ಕೂಡ ವೈಶಿಷ್ಟ್ಯತೆಗಳಿಗೆ ಹೆಸರುವಾಸಿಯಾಗಿದೆ.


ಇದೀಗ ಈ ಖ್ಯಾತಿಗೆ ಈ ಅತಿ ದೊಡ್ಡ ಬೆಂಗಳೂರು ಒನ್ ಕೇಂದ್ರವೂ ಸೇರ್ಪಡೆಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

English summary
More than 100 trees saved, Translocated in the Bommanahalli constituency. Union Minister Ananth Kumar said translocation was essential to save the green cover. He was speaking at the inauguration of the Bangalore One centre at BTM Layout 4th Stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X