ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಹೈಕೋರ್ಟ್ ಸ್ಪೋಟಿಸುವುದಾಗಿ ಉಗ್ರರಿಂದ ಬೆದರಿಕೆ ಪತ್ರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ಹೈಕೋರ್ಟ್‌ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಉಗ್ರರು ಬೆದರಿಕೆ ಪತ್ರ ರವಾನಿಸಿದ್ದಾರೆ.

ಕೇವಲ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.

ಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವುಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವು

ಇದೀಗ ಕರ್ನಾಟಕ ಹೈಕೋರ್ಟ್‌ಗೆ ಬಾಂಬ್ ಇಡುವುದಾಗಿ ಉಗ್ರರು ಬೆದರಿಕೆ ಪತ್ರವೊಂದನ್ನು ರವಾನಿಸಿದ್ದಾರೆ.

 Bomb Threat To Karnataka High Court

ಹೈಕೋರ್ಟ್ ರಿಜಿಸ್ಟ್ರಾರ್​ಗೆ ಇತ್ತೀಚೆಗೆ ಪತ್ರ ಒಂದು ಬಂದಿತ್ತು. ಪತ್ರದಲ್ಲಿ 'ಹೈಕೋರ್ಟ್ ಕಟ್ಟಡ ಸೇರಿ ಬೆಂಗಳೂರಿನ ಹಲವು ಕಡೆಗಳಲ್ಲಿ ಬಾಂಬ್ ಸ್ಫೋಟ ಮಾಡುತ್ತೇವೆ. ನಾನು ಅಂತಾರಾಷ್ಟ್ರೀಯ ಖಲಿಸ್ತಾನ್ ಗುಂಪಿಗೆ ಸೇರಿದ ವ್ಯಕ್ತಿ. ನಾನು ಹಾಗೂ ನನ್ನ ಮಗ ಸೇರಿ ಈ ದಾಳಿ ನಡೆಸುತ್ತೇವೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ 6 ಜನ ಉಗ್ರರು ಈಗಾಗಲೇ ಕೇರಳದ ಕಾಸರಗೋಡಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇತ್ತು.

ಇವರು ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ದೇಶವನ್ನು ಪ್ರವೇಶಿಸಿದ್ದು, ಬೆಂಗಳೂರು, ಅಹಮದಾಬಾದ್ ಹಾಗೂ ದೆಹಲಿ ಉಗ್ರರ ಮೇನ್ ಟಾರ್ಗೆಟ್ ಎಂದು ಹೇಳಲಾಗಿತ್ತು. ಕೋಯಮತ್ತೂರು, ಊಟಿ ಹಾಗೂ ಮೈಸೂರು ಮಾರ್ಗವಾಗಿ ಉಗ್ರರು ರಾಜ್ಯವನ್ನು ಪ್ರವೇಶಿಸಲಿದ್ದು, ಈ ರಸ್ತೆಗಳಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿತ್ತು.

ಹದರ್ಶನ ಸಿಂಗ್ ನಾಗಪಾಲ್ ಎಂಬಾತ ಪತ್ರ ಬರೆದಿದ್ದಾನೆ. ದೆಹಲಿಯ ಮೋತಿ ನಗರ ವಿಳಾಸದಿಂದ ಪತ್ರ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಾಕಿಸ್ತಾನ ಮೂಲಕ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಆರು ಜನ ಉಗ್ರರು ಭಾರತ ಪ್ರವೇಶಿಸಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

English summary
Unknown Person Send Threatening Letter To High Court Registrar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X