ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹುಸಿ' ಬೆದರಿಕೆ ಕರೆ ಮಾಡಿದ್ದವ ಹೇಳಿದ ಕೊಲೆ 'ಸತ್ಯ' ಕಥೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆ. 07: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಕರೆ ಮಾಡಿ ಬೆಚ್ಚು ಬೀಳಿಸಿದ ಪ್ರಕರಣ ಕುತೂಹಲಕಾರಿಯಾಗುತ್ತಿದೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಕೊಲೆ ಪ್ರಕರಣವೊಂದರ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಟೆಕ್ಕಿ ಎಂ. ಜಿ. ಗೋಕುಲ್‌ ತನ್ನ ಪತ್ನಿ ಕೊಂದಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಹುಸಿ ಬಾಂಬ್ ಬದರಿಕೆ ಕರೆ ಪ್ರಕರಣದ ಪ್ರಮುಖ ಅರೋಪಿ ಬೆಂಗಳೂರಿನ ಟೆಕ್ಕಿ ಎಂ. ಜಿ. ಗೋಕುಲ್‌ ಅವರು ಪೊಲೀಸ್ ವಿಚಾರಣೆ ವೇಳೆ ಪತ್ನಿಯನ್ನು ಕೊಂದಿದ್ದೇನೆ ಎಂದು ಬಾಯ್ಬಿಟ್ಟಿದ್ದಾರೆ. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬೆದರಿಕೆ ಕರೆ]

ಶನಿವಾರದಂದು ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದಲ್ಲದೆ, ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದ ಗೋಕಲ್, ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಕೆ ಹಾಕಿದ್ದರು.

Bomb hoax call probe turns murky, hoax call to kial, bengaluru police

ಸತ್ಯ ಹೇಳಿದ ಸಿಮ್: ಫೋನ್ ಕರೆ ಮೂಲ ಹುಡುಕಿದ ಪೊಲೀಸರಿಗೆ ಸಿಮ್ ಯಾರ ಹೆಸರಿನಲ್ಲಿದೆ ಎಂಬುದು ತಿಳಿದು ಬಂದಿದೆ. ಹುಡುಕಿಕೊಂಡು ಬಂದರೆ ಗೋಕುಲ್ ಪಕ್ಕದ ಮನೆ ನಿವಾಸಿಯ ಹೆಸರಿನಲ್ಲಿ ಸಿಮ್ ಖರೀದಿಸಲಾಗಿದೆ. ಪಕ್ಕದ ಮನೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದ ಸಾಫ್ಟ್ ವೇರ್ ಸಂಸ್ಥೆ ಉದ್ಯೋಗಿ ಗೋಕುಲ್ ಈ ಕುತಂತ್ರ ಹೆಣೆದಿದ್ದಾರೆ.

ನೆರಮನೆಯಾತನ ಸಿಮ್ ಬಳಸಿಕೊಂಡು ಬೆದರಿಕೆ ಕರೆ ಮಾಡುವುದು, ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದ ಮೇಲೆ ಆತನ ಪತ್ನಿ ಜೊತೆ ಸುಖವಾಗಿರುವುದು ಗೋಕುಲ್ ಉದ್ದೇಶವಾಗಿತ್ತು.

ಮುಚ್ಚಿ ಹೋಗಿದ್ದ ಪತ್ನಿ ಕೊಲೆ ಕೇಸ್: ಸುಮಾರು 7 ವರ್ಷಗಳ ಹಿಂದೆ ಪಶ್ಚಿಮ ಬಂಗಾಲದ ಯುವತಿಯನ್ನು ಮದುವೆಯಾಗಿದ್ದ. ದಿನನಿತ್ಯ ಜಗಳದಿಂದ ಬೇಸತ್ತ ಗೋಕುಲ್ ಜುಲೈ 28ರಂದು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ. ಆದರೆ, ಅತ್ಮಹತ್ಯೆ ಎಂದು ಕಥೆ ಕಟ್ಟಿದ್ದ. ಯಾರು ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಕೂಡಾ ಹೆಚ್ಚಿನ ತನಿಖೆ ಮುಂದುವರೆಸಿರಲಿಲ್ಲ. ಈಗ ಮಡಿವಾಳ ಪೊಲೀಸರು ಈಗ ಕೊಲೆ ಕೇಸಾಗಿರುವ ಈ ಪ್ರಕರಣದ ಮುಂದಿನ ತನಿಖೆಯನ್ನು ಸೆಂಟ್ರಲ್‌ ಕ್ರೈಂ ಬ್ರ್ಯಾಂಚಿಗೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ. (ಒನ್ ಇಂಡಿಯಾ ಸುದ್ದಿ)

English summary
The Bengaluru police have stumbled upon murky details of the person who is alleged to have made the hoax call to the airport as a result of which three flights had been delayed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X