ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಯಲ್ಲಿ ಬೊಲ್ಲಾರ್ಡ್ ಕಾಣೆಯಾದ ಕಥೆ!

|
Google Oneindia Kannada News

ಬೆಂಗಳೂರು, ನವೆಂಬರ್ 07 : ಬೆಂಗಳೂರು ನಗರದ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಬೊಲ್ಲಾರ್ಡ್ ಕಾಣೆಯಾಗಿತ್ತು. ಬಿಬಿಎಂಪಿ ಈ ಕುರಿತು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈಗ ಬೊಲ್ಲಾರ್ಡ್ ಪತ್ತೆಯಾಗಿದ್ದು, ವಿವಾದ ಬಗೆಹರಿದಂತಾಗಿದೆ.

ಬೊಲ್ಲಾರ್ಡ್ ಕಾಣೆಯಾದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಫೇಸ್‌ ಬುಕ್‌ನಲ್ಲಿ ಬರೆದಿದ್ದರು. ಪೊಲೀಸರು ಬೊಲ್ಲಾರ್ಡ್ ಇರುವ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ತಾಜ್ ವೆಸ್ಟೆಂಡ್‌ ಹೋಟೆಲ್‌ಗೆ ದಂಡ ಹಾಕಿದ ಬಿಬಿಎಂಪಿ ತಾಜ್ ವೆಸ್ಟೆಂಡ್‌ ಹೋಟೆಲ್‌ಗೆ ದಂಡ ಹಾಕಿದ ಬಿಬಿಎಂಪಿ

ಬೆಂಗಳೂರು ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ 8 ಬೊಲ್ಲಾರ್ಡ್ ಕಾಣೆಯಾಗಿದೆ ಎಂಬುದು ಬಿಬಿಎಂಪಿ ದೂರಾಗಿತ್ತು. ಮಾರ್ಚ್ ತಿಂಗಳಿನಲ್ಲಿಯೂ ಮೂರು ಬೊಲ್ಲಾರ್ಡ್ ಕಾಣೆಯಾಗಿತ್ತು. ಆದ್ದರಿಂದ, ಬಿಬಿಎಂಪಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಿಂದ ಟ್ವೀಟ್ ಮಾಡಲಾಗಿದೆ. ಬೊಲ್ಲಾರ್ಡ್ ಕಾಣೆಯಾಗಿಲ್ಲ, ವಾಹನ ಅಪಘಾತದಿಂದ ಅದು ಜಖಂ ಆಗಿತ್ತು ಎಂದು ಫೋಟೋವನ್ನು ಟ್ವೀಟ್ ಮಾಡಿದೆ. ಇದರಿಂದಾಗಿ ಕಳುವು ವಿವಾದ ಬಗೆಹರಿದಿದೆ.

ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು

ಬಿಬಿಎಂಪಿ ಆಯುಕ್ತರ ಟ್ವೀಟ್

ಬಿಬಿಎಂಪಿ ಆಯುಕ್ತರ ಟ್ವೀಟ್

ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಫೇಸ್‌ ಬುಕ್‌ನಲ್ಲಿ ಬೊಲ್ಲಾರ್ಡ್ ನಾಪತ್ತೆಯಾದ ಬಗ್ಗೆ ಬರೆದಿದ್ದರು. 5/11/2019ರಂದು ತೆಗೆದ ಫೋಟೋವನ್ನು ಹಾಕಿದ್ದರು. ಇದು ವಿಷಾದಕರ ವಿಚಾರ ಬೊಲ್ಲಾರ್ಡ್ ಕಾಣೆಯಾದ ಬಗ್ಗೆ ಬಿಬಿಎಂಪಿ ಪೊಲೀಸರಿಗೆ ದೂರು ನೀಡಿದೆ ಎಂದು ಬರೆದಿದ್ದರು.

ಜನರ ಜವಾಬ್ದಾರಿ ಇದೆ

ಜನರ ಜವಾಬ್ದಾರಿ ಇದೆ

ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸಾರ್ವಜನಿಕ ಆಸ್ತಿ ಹಾಳು ಮಾಡಿದ್ದು ವಿಷಾದನೀಯ. ಬೆಂಗಳೂರು ನಗರದ ನಾಗರೀಕರು ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವ ಜನರು ಕಂಡುಬಂದರೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದರು.

ಎಲ್ಲರೂ ಒಂದಾಗಿ ಕೆಲಸ ಮಾಡಬೇಕು

ಎಲ್ಲರೂ ಒಂದಾಗಿ ಕೆಲಸ ಮಾಡಬೇಕು

ಬಿಬಿಎಂಪಿ ಆಯುಕ್ತರು ತಮ್ಮ ಫೇಸ್‌ ಬುಕ್ ಪೋಸ್ಟ್‌ನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಬೆಂಗಳೂರು ಪೊಲೀಸರು, ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಟ್ಯಾಗ್ ಮಾಡಿದ್ದರು.

ಪೊಲೀಸರ ಟ್ವೀಟ್

ಪೊಲೀಸರ ಟ್ವೀಟ್

ಕಬ್ಬನ್ ಪಾರ್ಕ್ ಪೊಲೀಸರು ಬೊಲ್ಲಾರ್ಡ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ 28/10/2019ರಂದು ರಾತ್ರಿ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು 8 ಬೊಲ್ಲಾರ್ಡ್ ಹಾನಿಯಾಗಿತ್ತು. ಎಸ್‌ಬಿಐ ಸರ್ಕಲ್ ಬಳಿಯ ಪ್ರೆಸ್ಟೀಜ್ ಗ್ರೂಪ್ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಅದನ್ನು ಪ್ರೆಸ್ಟೀಜ್ ಕಚೇರಿ ಆವರಣದಲ್ಲಿಟ್ಟೀವೆ ಎಂದು ಟ್ವೀಟ್ ಮಾಡಿದ್ದಾರೆ.

English summary
In a Facebook post BBMP commissioner said that Very sad that miscreants have stolen bollards from St Mark’s Road State Bank of India junction, Bengaluru. Bollards are damaged due to roac accident said Cubbon Park police in a tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X