ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಬಾಯ್ಲರ್ ಸ್ಫೋಟಗೊಂಡ ಎಂ ಎಂ ಫ್ಯಾಕ್ಟರಿಯಲ್ಲಿ ಹೇಗಿದೆ ಪರಿಸ್ಥಿತಿ?

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬೆಂಗಳೂರು ನಗರ ಮಧ್ಯಭಾಗದಲ್ಲಿರುವ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಮತ್ತು ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಕೂದಲೆಳೆಯಲ್ಲಿ ಮಹಾ ದುರಂತವೊಂದು ತಪ್ಪಿದೆ.

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಮಾಗಡಿ ರಸ್ತೆಯ 5ನೇ ಅಡ್ಡ ರಸ್ತೆಯ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಮತ್ತು ಸಿಲಿಂಡರ್ ಸ್ಫೋಟ ಸಂಭವಿಸಿದೆ. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಮೂರು ಅಗ್ನಿ ಶಾಮಕ ದಳ ವಾಹನಗಳು ದೌಡಾಯಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂ ಎಂ ಫುಡ್ ಫ್ಯಾಕ್ಟರಿ ಸ್ಫೋಟದಿಂದ ಕಾರ್ಖಾನೆಯ ಮೇಲ್ಫಾವಣಿ ಹಾರಿ ಹೋಗಿದ್ದು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಆಗಿವೆ.

Breaking News: ಬೆಂಗಳೂರು ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಇಬ್ಬರು ಸಜೀವ ದಹನ Breaking News: ಬೆಂಗಳೂರು ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಇಬ್ಬರು ಸಜೀವ ದಹನ

ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಸ್ಫೋಟದಿಂದ ಬೆಂಕಿ ತೀವ್ರತೆ ಸ್ವಲ್ಪ ಹೆಚ್ಚಾಗಿದ್ದರೂ ಮಹಾ ದುರಂತವೇ ನಡೆದು ಹೋಗುತ್ತಿತ್ತು. ಏಕೆಂದರೆ ಸ್ಫೋಟ ಸಂಭವಿಸಿದ ಕಾರ್ಖಾನೆಯಲ್ಲೇ ಇನ್ನೂ 10 ಸಿಲಿಂಡರ್ ಅನ್ನು ಇರಿಸಲಾಗಿತ್ತು. ಈ ಸಿಲಿಂಡರ್ ಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡಿದ್ದರು ದೊಡ್ಡ ದುರಂತವೇ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಎಂ ಎಂ ಫ್ಯಾಕ್ಟರಿಯಲ್ಲಿ ಸ್ಫೋಟದ ಘಟನೆ:

ಸೋಮವಾರ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಮಾಗಡಿ ರಸ್ತೆ 5ನೇ ಕ್ರಾಸ್ ಗೋಪಾಲಪುರದಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಮತ್ತು ಸಿಲಿಂಡರ್ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಮನೀಷ್ ಮತ್ತು 21 ವರ್ಷದ ಸೌರವ್ ಸಜೀವ ದಹನವಾಗಿದ್ದಾರೆ. ಈ ವೇಳೆ ಮೂವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಮಾಲೀಕ ಹಾಗೂ ಪಾರ್ಟನರ್ ಆಗಿದ್ದ ಸಚಿನ್ ಮತ್ತು ಅಕ್ಕಪಕ್ಕದ ಮನೆಯ ಶಾಂತಿ ಮತ್ತು ಧನಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Bengaluru: Boiler blast in Food products factory in Magadi Road; Fire officials doused the fire

ಅನಧಿಕೃತವಾಗಿದೆಯೇ ಎಂ ಎಂ ಫ್ಯಾಕ್ಟರಿ?

ಬೆಂಗಳೂರು ನಗರದ ಮಧ್ಯಭಾಗದಲ್ಲಿ ಫುಡ್ ಫ್ಯಾಕ್ಟರಿ ನಡೆಸುವುದಕ್ಕೆ ಅನುಮತಿ ನೀಡಲಾಗಿದೆಯೇ, ಹಾಗೊಂದು ವೇಳೆ ಅನುಮತಿ ಪಡೆದುಕೊಂಡದ್ದರೆ ಯಾವೆಲ್ಲ ಸುರಕ್ಷತಾ ಕ್ರಮ ಅನುಸರಿಸಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರದಲ್ಲಿ ತನಿಖೆ ಮುಂದುವರಿಸಲಾಗುವುದು. ಸದ್ಯ ಕಾರ್ಖಾನೆಯಲ್ಲಿ ಬಿಹಾರ ಮತ್ತು ತಮಿಳುನಾಡು ಮೂಲದ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

Recommended Video

ತಾಲಿಬಾನಿಗಳಿಗೆ ಹೆದರಿ ನಾವೇನು ಓಡಿ ಹೋಗಲ್ಲ ಅಂದ್ರು ಜೋ ಬೈಡನ್ | Oneindia Kannada

English summary
Bengaluru: Boiler blast in Food products factory in Magadi Road; Fire officials doused the fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X