ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋಗಿ- ಸಿಹಿಕಹಿ ಚಂದ್ರು ಭಿನ್ನ ಪಾತ್ರಗಳ ನಾಟಕ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 27: ಪ್ರಕಸಂ ಅರ್ಪಿಸುವ "ಬೋಗಿ - ನಮ್ಮ ಜೀವನದ ಪಯಣ: ನಾಟಕ ಆಗಸ್ಟ್ 28ರ ಶುಕ್ರವಾರ ಕೆಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಟ ಸಿಹಿಕಹಿ ಚಂದ್ರು ಅವರು 6 ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ವಿಶಿಷ್ಟಪ್ರಯೋಗ ನೋಡಿ ಆನಂದಿಸಿ.

ಬೋಗಿ - ನಮ್ಮ ಜೀವನದ ಪಯಣ: ಕಲಾರಸಿಕರ ಮನಸ್ಸು ಹಾಗು ಮನಸ್ಸಿನ ಪದರಗಳ ಜೊತೆಗೆ ಕೆಲಕಾಲ ಸ್ಪಂದಿಸುವ ನಾಟಕ ಇದಾಗಿದ್ದು ಈ ಬಾರಿಯು ಹೊಸತನ ಹಾಗು ವಿಭಿನ್ನತೆಯನ್ನು ಹೊರಹೊಮ್ಮಿಸುವ ತವಕದಲ್ಲಿದ್ದಾರೆ ಪ್ರ.ಕ.ಸಂ ತಂಡದವರು. ಪ್ರಕಸಂ ನಿಂದ ಹೊರಬಂದಿರುವ ಈವರೆಗಿನ ನಾಟಕಗಳು ಮನೋರಂಜನೆಯ ಅಡಿಪಾಯದ ಮೇಲೆ ಹೊರಬಂದವಾದರು.

ಈ ಎಲ್ಲಾ ನಾಟಕಗಳಲ್ಲೂ ಹೊಸತನವನ್ನು ಹಾಗು ಹೊಸಬರನ್ನು ಕನ್ನಡ ರಂಗಭೂಮಿಗೆ ಪರಿಚಯಿಸುತ್ತ ಬಂದಿರುವುದು ಹೆಮ್ಮಯ ವಿಶಯ. ಬೋಗೀ ಕೂಡ ಈ ಪ್ರತೀತಿಯನ್ನು ಉಳಸಿಕೊಳ್ಳಲಿದ್ದು ರಂಗಾಸಕ್ತರ ಮನಸ್ಸನ್ನು ಮುಟ್ಟುವಲ್ಲಿ ಹಾಗು ತಟ್ಟುವಲ್ಲಿ ಯಶಸ್ವಿಯಾಗಲಿದೆ.

Bogie Kannada Play Sihikahi Chandru

ಸಿಹಿ ಕಹಿ ಚಂದ್ರು: ರಂಗಭೂಮಿ ನನ್ನ ಮೊದಲನೇ ಪ್ರೀತಿ. ನಾನು ಯಾವಾಗಲೂ ನಾಟಕಗಳಲ್ಲಿ ಅಭಿನಯಿಸುವ ಆಸೆ ಉಳ್ಳವನು. ಒಂದೇ ನಾಟಕದಲ್ಲಿ 6 ಪಾತ್ರಗಳನ್ನು ಅಭಿನಯಿಸಬೇಕು ಎಂದು ಪಿ.ಡಿ (ಸತೀಶ್) ಹೇಳಿದಾಗ ನನ್ನ ಆಸಕ್ತಿ ಹಚ್ಚಾಯಿತು. ನನ್ನ ನಟನೆಯನ್ನು ನೋಡುವವರು ಆನಂದಿಸುವಷ್ಟೇ ನಾನು ಕೂಡ ಆನಂದಿಸುತ್ತೇನೆ ಎಂದು ಸಿಹಿ ಕಹಿ ಚಂದ್ರು ಅವರು ನುಡಿದರು.

ನಾಟಕದ ವಿಶೇಷತೆ: ನಾಟಕದಲ್ಲಿ 6 ವಿಶೇಷ ಪಾತ್ರಗಳಿದ್ದು ಈ 6 ಪಾತ್ರಗಳನ್ನು, ರಂಗಭೂಮಿಯ ಹಿರಿಯ ಹಾಗು ಅನುಭವೀ ನಟ ಸಿಹಿ ಕಹಿ ಚಂದ್ರು ಅವರು ನಿರ್ವಹಿಸುತ್ತಿದ್ದಾರೆ. ಮೊದಲ ಬಾರಿಗೆ ಸ್ಟೇಜಿನ ಮೇಲೆ ಒಂದು ಟೈಮರ್ ಇರಿಸಲಾಗಿದ್ದು ನಡೆಯುವ ಎಲ್ಲಾ ದೃಶ್ಯಗಳು ನೇರ ಪ್ರಸಾರದಂತೆ ಮೂಡಿಬರುತ್ತದೆ. ಇದೊಂದು ನೈಜ ಅನುಭವ ನೀಡುವ ಹೊಸ ಪ್ರಯತ್ನ

ರಂಗಸಜ್ಜಿಕೆಗೆ ಸಾಕಷ್ಟು ಒತ್ತು ನೀಡಲಾಗಿದ್ದು ಇದರ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಿಜವಾದ ಬೋಗಿಯ ಅಳತೆಯನ್ನು ರಂಗದ ಮೇಲೆ ರೂಪಿಸುವ ತಂತ್ರ ಸಜ್ಜಾಗಿದೆ.

Bogie

ಪಿ.ಡಿ.ಸತೀಶ್ ಚಂದ್ರ: ಸತೀಶ್‍ರವರು ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಬೇಕೆಂದು ಬಯಕೆಯಿಂದ ಪ್ರ.ಕ.ಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ.

ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ದೇಶಕರಾಗಿ ಯುವ ಹಾಗು ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಇವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾಂಡುರಂಗ ವಿಠ್ಠಲ ಹಾಸ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರದರ್ಶನ ಕಲಾ ಸಂಸ್ಥೆ: ಪ್ರಕಸಂ ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.

English summary
Prakasam presents a Kannada play ' Bogie ' with Sihikahi Chandru in the lead role will be staged at KH Kalasoudh on Aug 28, 2015. The drama written by Chandan Shankar and directed by P.D.Satish Chandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X