ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹೊರವಲಯದಲ್ಲಿ ಬೋಯಿಂಗ್ ಘಟಕ ಸ್ಥಾಪನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಬೆಂಗಳೂರು ನಗರದ ಹೊರವಲಯದಲ್ಲಿ ಬೋಯಿಂಗ್ ಕಂಪನಿಯ ಘಟಕ ಸ್ಥಾಪನೆಯಾಗಲಿದೆ. ಸುಮಾರು 3 ಸಾವಿರ ಉದ್ಯೋಗ ಸೃಷ್ಟಿಯಾಗುವ ಹೊಸ ಘಟಕ ಸ್ಥಾಪನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.

ಏರೋಸ್ಪೆಸ್ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉತ್ಪಾದಿಸುವ ಬೋಯಿಂಗ್ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಕುರಿತು ಸರ್ಕಾರಕ್ಕೆ ಕಂಪನಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

ಅಮೆರಿಕ ಮೂಲದ ಬೋಯಿಂಗ್ ಕಂಪನಿ ಸೀಟಲ್ ನಗರದಲ್ಲಿ ದೊಡ್ಡ ಉತ್ಪಾದನಾ ಘಟಕ ಹೊಂದಿದೆ. ಸೀಟಲ್ ಹೊರತು ಪಡಿಸಿ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಘಟಕವೇ ದೊಡ್ಡದಾಗಿದೆ. ಸುಮಾರು 1,152 ಕೋಟಿ ಬಂಡವಾಳವನ್ನು ಕಂಪನಿ ಹೂಡಿಕೆ ಮಾಡಲಿದೆ.

Boeing new unit will set up near Yelahanka

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಕಂಪನಿಯ ಅಧಿಕಾರಿಗಳು ತಮ್ಮ ಬೇಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. 36 ಎಕರೆ ಜಾಗಕ್ಕಾಗಿ ಕಂಪನಿ ಬೇಡಿಕೆ ಇಟ್ಟಿದೆ. ಯಲಹಂಕ ಬಳಿ ಬೋಯಿಂಗ್ ನೂತನ ಘಟಕ ನಿರ್ಮಾಣವಾಗಲಿದೆ.

ಕರ್ನಾಟಕ ಸರ್ಕಾರದ ಜೊತೆಗಿನ ಒಪ್ಪಂದ ಪೂರ್ಣಗೊಂಡರೆ ಡಿಸೆಂಬರ್ ಅಂತ್ಯದಲ್ಲಿಯೇ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಘಟಕದಿಂದ ಸುಮಾರು 3 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

English summary
America based aerospace major Boeing's new unit will set up near Yelahanka, Bengaluru at the cost of 1,152 crore. The Karnataka government has approved for the project. Unit expected to generate 3000 jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X