ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ನೌಕರರ ಪ್ರತಿಭಟನೆ, ಬಿಎಂಟಿಸಿ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜೂನ್ 27: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದು, ಬಿಎಂಟಿಸಿ ಬಸ್‌ ಸೇವೆಯಲ್ಲಿ ವ್ಯತ್ಯಯವಾಗುವ ಎಲ್ಲಾ ಸಾಧ್ಯತೆಗಳಿವೆ.

ಸಾರಿಗೆ ನೌಕರರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ BMTC ನೌಕರರಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ನಾಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಿಗೋದು ಅನುಮಾನವಾಗಿದ್ದು, ಬೆಂಗಳೂರು ಚಲೋ ಹಿನ್ನೆಲೆ ನೌಕರರು ಚಲೋದಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು? ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?

ಗುರುವಾರ 11 ಗಂಟೆಗೆ, ಲಾಲ್‌ಬಾಗ್‌ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ‍್ಯಾಲಿ ನಡೆಯಲಿದೆ. ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

BMTC workers strike today may hit bmtc service

ಕರ್ತವ್ಯಕ್ಕೆ ಹಾಜರಾಗದೇ ರ‍್ಯಾಲಿಯಲ್ಲಿ ಪಾಲ್ಗೊಳ್ಳುವುದರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು.ಆದರೆ ಇಂದಿನ ರ‍್ಯಾಲಿಗೆ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಭಾಗವಹಿಸುವಂತೆ ಸೂಚಿಸಿಲ್ಲ. ಆದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಜನರಿಗೆ ತೊಂದರೆಯಾಗಲಿದೆ.

ಮೂರು ಸಾವಿರ ಜನ ಸೇರುವುದರಿಂದ ಶಾಂತಿನಗರ, ಲಾಲ್ ಬಾಗ್ ರಸ್ತೆ, ಜಯನಗರ ಅಸುಪಾಸು ಟ್ರಾಫಿಕ್ ಬಿಸಿ ತಟ್ಟಬಹುದು.

ಆರೋಪವೇನು?: ಸಾರಿಗೆ ನಿಗಮ ಕೋಟಿ ಕೋಟಿ ಲೆಕ್ಕದಲ್ಲಿ ನಷ್ಟದಲ್ಲಿದೆ. ಬೇಕಾಬಿಟ್ಟಿ ಸಾಲವನ್ನು ಕೂಡ ಮಾಡಲಾಗಿದೆ.

ವಿದ್ಯಾರ್ಥಿಗಳ ಪಾಸ್ ದುಡ್ಡನ್ನು ಸರ್ಕಾರ ನಿಗಮಕ್ಕೆ ನೀಡಿಲ್ಲ ಬಾಕಿ ಇಟ್ಟುಕೊಂಡಿದೆ.ಸಾರಿಗೆ ನಿಗಮ ನಷ್ಟದ ಹಾದಿಯಲ್ಲಿದೆ. ಇದು ಉದ್ದೇಶಪೂರ್ವಕ, ಸಾರಿಗೆ ನಿಗಮವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲಿದ್ದಾರೆ ಎನ್ನುವುದು ಪ್ರಮುಖ ಆರೋಪಗಳಾಗಿವೆ.

ಸಾರಿಗೆ ಸಚಿವ ಡಿಸಿ ತಮ್ಮಣ್ಣ ರಾಜೀನಾಮೆ ನೀಡಬೇಕು ಎಂಬುದು ಕೂಡ ಅವರ ಬೇಡಿಕೆಗಳಲ್ಲಿ ಒಂದಾಗಿದೆ.

English summary
BMTC workers strike today may hit bmtc service in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X