ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ 12 ತಾಸು ಜನರಲ್ 'ಪಾಳಿ': ಕತ್ತೆಗಳಿಗಿಂತಲೂ ಕಡೆ ಈ ಸಾರಿಗೆ ಸಿಬ್ಬಂದಿ!

|
Google Oneindia Kannada News

ಬೆಂಗಳೂರು, ಜೂ. 29: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪರಿಚಯಿಸಿರುವ 'ಜನರಲ್ ಪಾಳಿ' ಯಲ್ಲಿ ಕೆಲಸ ಮಾಡಲಾಗದೆ ಚಾಲಕರು ಮತ್ತು ನಿರ್ವಾಹಕರು ರೋಗ ಪೀಡಿತರಾಗುತ್ತಿದ್ದಾರೆ. ಒಂದು ದಿನ ಕೆಲಸ ಮಾಡಿದ್ರೆ ಇನ್ನೆರಡು ದಿನ ರಜೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ದಿನ ಪೂರ್ತಿ ಬೆಂಗಳೂರು ಬೀದಿಗಳಲ್ಲೇ ಜೀವನ ಕಳೆದು ಹೈರಾಣ ಆಗುತ್ತಿದ್ದಾರೆ.

ಕೊರೊನಾವೈರಸ್ ಬಳಿಕ ಬಿಎಂಟಿಸಿ ನಷ್ಟ ಅನುಭವಿಸುತ್ತಿದೆ ಎಂಬ ನೆಪ ನೀಡಿ ಮೂರು ಪಾಳಿಯನ್ನು ರದ್ದು ಮಾಡಲಾಗಿದೆ. 12 ತಾಸು ನಿಂತು ಕೆಲಸ ಮಾಡುವ ಜನರಲ್ ಪಾಳಿ ಪರಿಚಯಿಸಿದೆ. ಅದರ ಪ್ರಕಾರ ಬೆಳಗ್ಗೆ 7 ಗಂಟೆಗೆ ಕೆಲಸ ಆರಂಭಿಸಿದ್ರೆ, ರಾತ್ರಿ ಏಳು ಗಂಟೆ ವರೆಗೂ ಕೆಲಸ ಮಾಡಬೇಕು. ಹನ್ನೆರಡು ತಾಸು ಕೆಲಸ ಮಾಡಿದ್ರೆ 35 ರೂ. ಭತ್ತ ನೀಡಲಾಗುತ್ತದೆ. ಒಂದು ವೇಳೆ ಟಿಕೆಟ್ ಕಲೆಕ್ಷನ್ ನಾಲ್ಕು ಸಾವಿರ ಆದ್ರೆ ಮೂರು ಪರ್ಸೆಂಟ್‌ನಂತೆ 120 ರೂ. ಭತ್ತ ನೀಡುತ್ತಾರೆ. ಇದರಲ್ಲಿ ಚಾಲಕ ನಿರ್ವಾಹಕ ಹದಿನಾರು ಗಂಟೆ ಬೀದಿಯಲ್ಲಿ ಜೀವನ ಸಾಗಿಸಬೇಕು.

 ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ

ಸಂಜೆ ಎಂಟು ಗಂಟೆ ಮೇಲೆಯೇ ಮನೆ ಸೇರಬೇಕು

ಸಂಜೆ ಎಂಟು ಗಂಟೆ ಮೇಲೆಯೇ ಮನೆ ಸೇರಬೇಕು

ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಾದ್ರೆ ಬಿಎಂಟಿಸಿ ಸಿಬ್ಬಂದಿ ಒಂದೂವರೆ ತಾಸು ಮೊದಲೇ ಮನೆ ಬಿಡಬೇಕು. ಅಂದರೆ ಬೆಳಗ್ಗೆ 5.30 ಕ್ಕೆ ಮನೆ ಬಿಡಬೇಕು. ಸಂಜೆ ಎಂಟು ಗಂಟೆ ಮೇಲೆಯೇ ಮನೆ ಸೇರಬೇಕು. ಎರಡು ಹೊತ್ತು ಊಟ ಮಾಡಲಿಕ್ಕೆ ಬಿಎಂಟಿಸಿ ಕೊಡುತ್ತಿರುವುದು ಕೇವಲ 35 ರೂ. ಭತ್ತ. ಹೆಚ್ಚುವರಿಯಾಗಿ ನಾಲ್ಕು ತಾಸು ದುಡಿಸಿಕೊಳ್ಳುತ್ತಿದ್ದರೂ ಅವರಿಗೆ ಕನಿಷ್ಠ ಊಟ, ನೀರಿನ ಸೌಲಭ್ಯ ಕೂಡ ಬಿಎಂಟಿಸಿ ಅಧಿಕಾರಿಗಳು ಕಲ್ಪಿಸಿಲ್ಲ.

ಹನ್ನೆರಡು ತಾಸು ಆನ್ ರೋಡ್ ಕೆಲಸ ಮಾಡಬೇಕು

ಹನ್ನೆರಡು ತಾಸು ಆನ್ ರೋಡ್ ಕೆಲಸ ಮಾಡಬೇಕು

ಇನ್ನು ಸರ್ಕಾರಿ ಕೆಲಸ ಎಂದು ಬ್ಯಾಗು ಹೆಗಲ ಮೇಲೆ ಹಾಕಿಕೊಂಡು ಬಂದ ಮಹಿಳಾ ನಿರ್ವಾಹಕರದ್ದು ಹೇಳತೀರದ ಪಾಡು. ಹನ್ನೆರಡು ತಾಸು ಆನ್ ರೋಡ್ ಕೆಲಸ ಮಾಡಬೇಕು. ಮಧ್ಯದಲ್ಲಿ ದೇಹಬಾಧೆ ತೀರಿಸಿಕೊಳ್ಳಲು ಆಗದ ಒದ್ದಾಟ. ಹನ್ನೆರಡು ತಾಸು ಕೆಲಸ, ಎರಡು ತಾಸು ಪ್ರಯಾಣ ಒಟ್ಟು ಹದಿನಾಲ್ಕು ಗಂಟೆಗಳನ್ನು ಬಿಎಂಟಿಸಿ ಸಿಬ್ಬಂದಿ ರೋಡಿನಲ್ಲಿ ಜೀವಿಸುವಂತಾಗಿದೆ.

ಅನಿವಾರ್ಯವಾಗಿ ರಜೆ ಹಾಕುವಂತಾಗಿದೆ

ಅನಿವಾರ್ಯವಾಗಿ ರಜೆ ಹಾಕುವಂತಾಗಿದೆ

ಮನೆ, ಮಕ್ಕಳು, ಕುಟುಂಬ, ಅರೋಗ್ಯ ಸದ್ಯದ ಮಟ್ಟಿಗೆ ಬಿಎಂಟಿಸಿ ಸಿಬ್ಬಂದಿಗೆ ಕೈಗೆಟುಕದ ಕುಸುಮವಾಗಿದೆ. ಸುದೀರ್ಘ ಅವಧಿ ಕೆಲಸ ಮಾಡಿ ನಾನಾ ರೋಗಗಳಿಗೆ ತುತ್ತಾಗುತ್ತಿರುವ ಬಿಎಂಟಿಸಿ ಸಿಬ್ಬಂದಿ ಅನಿವಾರ್ಯವಾಗಿ ರಜೆ ಹಾಕುವಂತಾಗಿದೆ.

ಈ ಮೊದಲು ಬಿಎಂಟಿಸಿಯಲ್ಲಿ ಎಂಟು ಗಂಟೆ ಕೆಲಸ. ಮೂರು ಪಾಳಿ ಇದ್ದವು. ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಬಿಎಂಟಿಸಿಗೆ ಲಾಭ ಬರುತ್ತಿತ್ತು. ಆದ್ರೆ ಅಧಿಕಾರಿಗಳ ಜನರಲ್ ಪಾಳಿ ಎಡವಟ್ಟಿನಿಂದ ಮಧ್ಯಾಹ್ನದ ವೇಳೆ ಖಾಸಗಿ ವಾಹನಗಳು ರಿಂಗ್ ರೋಡ್‌ಗಳಲ್ಲಿ ಕಾರ್ಯಾಚರಣೆಗೆ ಇಳದಿವೆ. ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ನಷ್ಟ ತಪ್ಪಿಸುವ ನೆಪವೊಡ್ಡಿ ಬಿಎಂಟಿಸಿ ಸಾರಿಗೆ ಸಿಬ್ಬಂದಿಗಳನ್ನು ಕತ್ತೆಗಳಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ.

ಜನರಲ್ ಪಾಳಿಯಿಂದ ಯಾವ ಲಾಭವೂ ಇಲ್ಲ

ಜನರಲ್ ಪಾಳಿಯಿಂದ ಯಾವ ಲಾಭವೂ ಇಲ್ಲ

ನಾವು ಮನುಷ್ಯರೇ ಎಂಬುದನ್ನು ಬಿಎಂಟಿಸಿ ಅಧಿಕಾರಿಗಳು ಮರೆತಿದ್ದಾರೆ. ಅವರು ಹನ್ನೆರಡು ತಾಸು ಕೆಲಸ ಮಾಡಲಿ. ಮಕ್ಕಳು, ತಂದೆ ತಾಯಿಗಳನ್ನು ಬಿಟ್ಟು ಹನ್ನೆರಡು ತಾಸು ಕೆಲಸ ಮಾಡಬೇಕಾಗಿದೆ. ಇದರಿಂದ ನಾನಾ ಕಾಯಿಲೆಗಳಿಗೆ ಒಳಗಾಗುವಂತಾಗಿದೆ. ಇವರ ಜನರಲ್ ಪಾಳಿಯಿಂದ ಯಾವ ಲಾಭವೂ ಇಲ್ಲ. ಯಾವುದೋ ಕಾರಣಕ್ಕೆ ಬಿಎಂಟಿಸಿ ಸಿಬ್ಬಂದಿಯನ್ನು ಶಿಕ್ಷಿಸಲಾಗುತ್ತಿದೆ.

ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಎಂಟು ತಾಸು ಕೆಲಸ ಮಾಡಬೇಕು ಎಂಬ ನಿಯಮವಿದ್ದರೂ ಹನ್ನೆರಡು ತಾಸು ದುಡಿಸಿಕೊಳ್ಳುತ್ತಿದ್ದಾರೆ. ಐದು ರೂಪಾಯಿ ಕೂಡ ಹೆಚ್ಚುವರಿ ವೇತನ ಕೊಡುತ್ತಿಲ್ಲ. ಇದರಿಂದ ಎಲ್ಲಾ ಸಿಬ್ಬಂದಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಎಂದು ಹೆಸರು ಹೇಳಲು ಇಚ್ಛಿಸದ ಬಿಎಂಟಿಸಿ ಸಿಬ್ಬಂದಿ ನೋವು ತೊಡಿಕೊಂಡಿದ್ದಾರೆ.

Recommended Video

ಮುಂಬೈನಲ್ಲಿ ಕಳ್ಳನ ಬರ್ತಡೇ ಸೆಲೆಬ್ರೇಶನ್ ಮಾಡಿದ್ಯಾಕೆ? ಸೆಲೆಬ್ರೇಶನ್ ಹಿಂದಿದೆ ಮನಕರಗೋ ಕಥೆ | Oneindia Kannada

English summary
The BMTC staff has objected to the 12 hours of work introduced by the BMTC know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X