ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯಿಂದ 5 ವರ್ಷಗಳಲ್ಲಿ 1500 ಎಲೆಕ್ಟ್ರಿಕ್ ಬಸ್‌ ಖರೀದಿ

|
Google Oneindia Kannada News

ಬೆಂಗಳೂರು, ಮಾರ್ಚ್ 14: ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಪಡೆಯುವ ನಿರ್ಧಾರವನ್ನು ಬಿಎಂಟಿಸಿ ಕೈಬಿಟ್ಟಿದ್ದು ಖರೀದಿಮಾಡಲು ಚಿಂತನೆ ನಡೆಸಿತ್ತು. ಇದೀಗ ಐದು ವರ್ಷಗಳಲ್ಲಿ 1500 ಬಸ್‌ಗಳನ್ನು ಖರೀದಿ ಮಾಡುವುದಾಗಿ ತಿಳಿಸಿದೆ.

ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ

ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್ ತಂತ್ರಜ್ಞಾನ, ಚಾರ್ಜಿಂಗ್ ಘಟಕ ಸ್ಥಾಪನೆ ಕುರಿತಂತೆ ಮಾಹಿತಿ ಪಡೆಯಲು ಆಸಕ್ತ ಕಂಪನಿಗಳಿಂದ ಪ್ರಸ್ತಾವನೆ ಆಹ್ವಾನಿಸಿದ್ದು, ಏಪ್ರಿಲ್ 15ರ ಒಳಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಆಸಕ್ತ ಕಂಪನಿಗಳು ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಕೆಲವು ಷರತ್ತುಗಳನ್ನು ವಿಧಿಸಿದೆ. ಕಂಪನಿ ಎಲೆಕ್ಟ್ರಿಕ್ ಬಸ್‌ ಉತ್ಪಾದನೆ ಆರಂಭಿಸಿದ ಬಳಿಕ ಸತತ ಮೂರು ವರ್ಷ ವಾರ್ಷಿಕ ಕನಿಷ್ಠ 50 ಕೋಟಿ ರೂ ವಹಿವಾಟು ನಡೆಸಿರಬೇಕು. ವಾರ್ಷಿಕ 50ಕ್ಕಿಂತ ಹೆಚ್ಚು ಎಲೆಕ್ಟ್ರಿಕ್ಬಸ್ ಉತ್ಪಾದನೆ, 40ಕ್ಕಿಂತ ಹೆಚ್ಚು ಇ ಬಸ್ ವಾರ್ಷಿಕ ನಿರ್ವಹಣೆ ಗುತ್ತಿಗೆ ನಿರ್ವಹಿಸಿದ ಅನುಭವವಿರುವ ಕಂಪನಿಗಳಿಗೆ ಉತ್ಪಾದನಾ ಆದ್ಯತೆ ನೀಡಲಾಗುತ್ತದೆ.

BMTC will buy 1500 electric bus for next 5 years

ಬಿಎಂಟಿಸಿ ಮೊದಲು ಗುತ್ತಿಗೆ ಆದಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆಯಲು ಕರೆಯಲಾಗಿದ್ದ ಟೆಂಡರ್‌ನ್ನು ಕಳೆದ ಫೆಬ್ರವರಿಯಲ್ಲಿ ರದ್ದುಗೊಳಿಸಿತ್ತು.

English summary
BMTC is buying 1500 Electric bus for next five years. Tender has been invited from interested companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X