ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೇಟ್ ದರ ಇಳಿಕೆ: ಬಿಎಂಟಿಸಿ ವೋಲ್ವೋಗೆ ನಿರೀಕ್ಷೆಗೂ ಮೀರಿ ಆದಾಯ

|
Google Oneindia Kannada News

ಬೆಂಗಳೂರು, ಜನವರಿ 16: ಬಿಎಂಟಿಸಿ ವೋಲ್ವೋ ಬಸ್ ಇದೀಗ ನಿಗಮಕ್ಕೆ ಆದಾಯ ಹೊತ್ತು ತರುತ್ತಿದೆ. ಜನವರಿ 1 ರಿಂದ ವೋಲ್ವೋ ಬಸ್ ಟಿಕೇಟ್ ದರ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ.

ಸುಮಾರು 25 ಲಕ್ಷ ರೂ ಹೆಚ್ಚುವರಿ ಆದಾಯ ಬಂದಿದೆ. ಟಿಕೇಟ್ ದರ ಇಳಿಕೆಯಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ, ಆದಾಯದಲ್ಲೂ ಹೆಚ್ಚಳವಾಗಿದೆ. ವಜ್ರ ಬಸ್ ಗಳಲ್ಲಿ ಕನಿಷ್ಠ 15 ರೂ ಯಿಂದ ಗರಿಷ್ಠ 45 ರೂ ವರೆಗೂ ಟಿಕೇಟ್ ದರ ಕಡಿತವಾಗಿದೆ.

ವೋಲ್ವೊ ಬಸ್ ಸಂಚಾರ ಇನ್ನು ಸುಗಮ: ಶೇ.37ರಷ್ಟು ದರ ಇಳಿಕೆವೋಲ್ವೊ ಬಸ್ ಸಂಚಾರ ಇನ್ನು ಸುಗಮ: ಶೇ.37ರಷ್ಟು ದರ ಇಳಿಕೆ

ಪ್ತಯಾಣಿಕರ ಸಂಖ್ಯೆ ಏರಿಕೆ: ಬಿಎಂಟಿಸಿ ನಗರದಲ್ಲಿ ನಿತ್ಯ 650 ವೋಲ್ವೋ ಬಸ್ ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಪೈಕಿ 110 ಬಸ್ ಗಳು ನಗರ ನಾನಾ ಭಾಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿದೆ.

BMTC Volvo service: Commuter increase to 85k

ಟಿಕೇಟ್ ದರ ಕಡಿತಕ್ಕೂ ಮುನ್ನ ವೋಲ್ವೋ ಬಸ್ ಗಳಲ್ಲಿ ನಿತ್ಯ 58 ಸಾವಿರ ಮಂದಿ ಪ್ರಯಾಣಿಕರು ಸಂಚರಸುತ್ತಿದ್ದರು. ದರ ಇಳಿಕೆ ಬಳಿಕ ಈ ಸಂಖ್ಯೆ 84 ಸಾವಿರಕ್ಕೆ ಏರಿಕೆಯಾಗಿದೆ. ಈ ಮೂಲಕ 25 ಸಾವಿರ ಮಂದಿ ಸಾರ್ವಜನಿಕರು ಹೊಸದಾಗಿ ವೋಲ್ವೋ ಬಸ್ ಪ್ರಯಾಣಿಕರಾಗಿ ಸೇರ್ಪಡೆಯಾಗಿದ್ದಾರೆ.

ಆದಾಯ ಹೆಚ್ಚಳ: ಟಿಖೇಟ್ ದರ ಇಳಿಕೆಗೂ ಹಿಂದಿನ ಎಂಟು ದಿನ 3.80 ಕೋಟಿ ಆದಾಯ ಬಂದಿತ್ತು. ಜನವರಿ 1 ರಿಂದ 8 ರವರೆಗೆ ಸುಮಾರು 4 ಕೋಟಿ ರೂ ಮಿಕ್ಕು ಆದಾಯ ಬಂದಿದೆ. ಈ ಮೂಲಕ ಆದಾಯದಲ್ಲಿ ಸುಮಾರು 25 ಲಕ್ಷ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಐಟಿಪಿಎಲ್, ಕೆಐಎಎಲ್ ಮಾರ್ಗದ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

English summary
After fare cutting up to 35 percent of Volvo bus service in BMTC, income of daily has been increased to 25 lakhs and commuters up to 85 thousand from 58 thousand per day earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X