ಬಿಎಂಟಿಸಿ ವೋಲ್ವೊ ಬಸ್ ಪ್ರಯಾಣ ದರ ಇಳಿಕೆ: ಪರಿಷ್ಕೃತ ದರ ಪಟ್ಟಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 16: ವೋಲ್ವೊ ಬಸ್ ಪ್ರಯಾಣ ದರ ಇಳಿಕೆ ಮಾಡಿ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಿಹಿ ಸುದ್ದಿ ನೀಡಿದೆ.
ಇನ್ಮುಂದೆ ವೋಲ್ವೊ ಬಸ್ ಪ್ರಯಾಣದ ಟಿಕೆಟ್ ದರ ಶೇ.34ರಷ್ಟು ಕಡಿತ ಆಗಲಿದ್ದು, ವಜ್ರ ಸಾರಿಗೆಗಳ ಪ್ರಯಾಣ ದರ ಶೇಕಡಾ 34ರಷ್ಟು ಕಡಿತಗೊಳಿಸಿ ಆದೇಶ ನೀಡಲಾಗಿದೆ. ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರವನ್ನೂ ಪರಿಷ್ಕರಣೆ ಮಾಡಲಾಗಿದೆ.
ಇದೇ ಡಿಸೆಂಬರ್ 17ರಿಂದ ಜಾರಿಗೆ ಬರುವಂತೆ ಬಿಎಂಟಿಸಿಯಿಂದ ಆದೇಶ ಮಾಡಲಾಗಿದೆ. 120 ರೂ. ಇದ್ದ ದಿನದ ಪಾಸ್ ಇನ್ಮುಂದೆ 100 ರೂ.ಗೆ ಲಭ್ಯವಾಗಲಿದೆ. 2,000 ರೂಪಾಯಿ ಇದ್ದ ಮಾಸಿಕ ಪಾಸ್ ದರ ಡಿಸೆಂಬರ್ 17ರಿಂದ 1,500 ರೂಪಾಯಿಗೆ ಇಳಿಕೆಯಾಗಲಿದೆ. 50 ಕಿ.ಮೀಗೆ 90 ರೂಪಾಯಿ ಇದ್ದ ಟಿಕೆಟ್ ದರ 50 ರೂ.ಗೆ ಇಳಿಕೆ ಮಾಡಲಾಗಿದೆ.
ಈಗಾಗಲೇ 9 ಮಾರ್ಗಗಳಲ್ಲಿ 83 ಎಸಿ ವೋಲ್ವೊ ಬಸ್ ಕಾರ್ಯನಿರ್ವಹಿಸುತ್ತಿವೆ. ಡಿಸೆಂಬರ್ 17ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡಲಾಗುವುದು ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ದೂರದ ಅಂತರ, ಪ್ರಸ್ತುತ ದರ ಮತ್ತು ಪರಿಷ್ಕೃತ ದರ ಪಟ್ಟಿ ಇಲ್ಲಿದೆ.
2.0 ಕಿ.ಮೀ ದೂರ ಪ್ರಯಾಣಕ್ಕೆ 10 ರೂ. ಇದ್ದು, 10 ರೂ. ಮುಂದುವರೆಯಲಿದೆ.
4.0 ಕಿ.ಮೀ ದೂರ ಪ್ರಯಾಣಕ್ಕೆ 15 ರೂ. ಇದ್ದು, 15 ರೂ. ಮುಂದುವರೆಯಲಿದೆ.
6.0 ಕಿ.ಮೀ ದೂರ ಪ್ರಯಾಣಕ್ಕೆ 20 ರೂ. ಇದ್ದು, 20 ರೂ. ಮುಂದುವರೆಯಲಿದೆ.
8.0 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 30 ರೂ. ಇದ್ದು, 25 ರೂ.ಗೆ ಇಳಿಕೆಯಾಗಲಿದೆ.
10 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 35 ರೂ. ಇದ್ದು, 25 ರೂ.ಗೆ ಇಳಿಕೆಯಾಗಲಿದೆ.
12 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 35 ರೂ. ಇದ್ದು, 30 ರೂ.ಗೆ ಇಳಿಕೆಯಾಗಲಿದೆ.
14 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 45 ರೂ. ಇದ್ದು, 30 ರೂ.ಗೆ ಇಳಿಕೆಯಾಗಲಿದೆ.
16 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 45 ರೂ. ಇದ್ದು, 35 ರೂ.ಗೆ ಇಳಿಕೆಯಾಗಲಿದೆ.
18 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 50 ರೂ. ಇದ್ದು, 35 ರೂ.ಗೆ ಇಳಿಕೆಯಾಗಲಿದೆ.

20 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 55 ರೂ. ಇದ್ದು, 35 ರೂ.ಗೆ ಇಳಿಕೆಯಾಗಲಿದೆ.
22 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 55.00 ರೂ. ಇದ್ದು, 35 ರೂ.ಗೆ ಇಳಿಕೆಯಾಗಲಿದೆ.
24 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 60 ರೂ. ಇದ್ದು, 40 ರೂ.ಗೆ ಇಳಿಕೆಯಾಗಲಿದೆ.
26 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 60 ರೂ. ಇದ್ದು, 40 ರೂ.ಗೆ ಇಳಿಕೆಯಾಗಲಿದೆ.
28 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 65 ರೂ. ಇದ್ದು, 40 ರೂ.ಗೆ ಇಳಿಕೆಯಾಗಲಿದೆ.
30 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 65 ರೂ. ಇದ್ದು, 40 ರೂ.ಗೆ ಇಳಿಕೆಯಾಗಲಿದೆ.
32 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 65 ರೂ. ಇದ್ದು, 45 ರೂ.ಗೆ ಇಳಿಕೆಯಾಗಲಿದೆ.
34 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 70 ರೂ. ಇದ್ದು, 45 ರೂ.ಗೆ ಇಳಿಕೆಯಾಗಲಿದೆ.
36 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 70 ರೂ. ಇದ್ದು, 45 ರೂ.ಗೆ ಇಳಿಕೆಯಾಗಲಿದೆ.
38 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 70 ರೂ. ಇದ್ದು, 45 ರೂ.ಗೆ ಇಳಿಕೆಯಾಗಲಿದೆ.
40 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 70 ರೂ. ಇದ್ದು, 45 ರೂ.ಗೆ ಇಳಿಕೆಯಾಗಲಿದೆ.
42 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 75 ರೂ. ಇದ್ದು, 50 ರೂ.ಗೆ ಇಳಿಕೆಯಾಗಲಿದೆ.
44 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 80 ರೂ. ಇದ್ದು, 50 ರೂ.ಗೆ ಇಳಿಕೆಯಾಗಲಿದೆ.
46 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 80 ರೂ. ಇದ್ದು, 50 ರೂ.ಗೆ ಇಳಿಕೆಯಾಗಲಿದೆ.
48 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 90 ರೂ. ಇದ್ದು, 50 ರೂ.ಗೆ ಇಳಿಕೆಯಾಗಲಿದೆ.
50 ಕಿ.ಮೀ ದೂರ ಪ್ರಯಾಣಕ್ಕೆ ಪ್ರಸ್ತುತ 90 ರೂ. ಇದ್ದು, 50 ರೂ.ಗೆ ಇಳಿಕೆಯಾಗಲಿದೆ.