ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯಲ್ಲಿ ಗರ್ಭಿಣಿ ಕಂಡಕ್ಟರ್‌ಗಳನ್ನು ಕಚೇರಿ ಕೆಲಸಕ್ಕೆ ನಿಯೋಜಿಸಲು ನಿರ್ದೇಶನ

|
Google Oneindia Kannada News

ಬೆಂಗಳೂರು, ಏ.10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗರ್ಭಿಣಿ ಕಂಡಕ್ಟರ್‌ಅನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿ ಗರ್ಭಿಣಿ ಹಾಗೂ ಅವರ ಭ್ರೂಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬಿಎಂಟಿಸಿಗೆ ನಿರ್ದೇಶಿಸಿದೆ.

ಮಹಿಳಾ ನಿರ್ವಾಹಕರಿಗೆ ಹೆಚ್ಚಿನ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗುತ್ತಿರುವ ಸಂಬಂಧ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ್ ಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

BMTC told to provide better working conditions for pregnant conductors

ದರ್ಶಿನಿಗೆ ಉತ್ತಮ ಸ್ಪಂದನೆ: ಹೆಚ್ಚುವರಿ ಬಸ್‌ಗಳನ್ನು ಆರಂಭಿಸಲಿದೆ ಬಿಎಂಟಿಸಿ ದರ್ಶಿನಿಗೆ ಉತ್ತಮ ಸ್ಪಂದನೆ: ಹೆಚ್ಚುವರಿ ಬಸ್‌ಗಳನ್ನು ಆರಂಭಿಸಲಿದೆ ಬಿಎಂಟಿಸಿ

ಅವರನ್ನು ಹೆರಿಗೆಯ ಮೊದಲು ಹಾಗೂ ಹೆರಿಗೆ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮ 135ರ ಅನ್ವಯ ಆರು ತಿಂಗಳವರೆಗೆ ಕಚೇರಿ ಕೆಲಸಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಗರ್ಭಿಣಿಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಆಸನ ದೊರಕಿಸಿಕೊಡಬೇಕು. ಆದರೆ ಬಿಎಂಟಿಸಿಯಲ್ಲಿ ಲೇಡಿ ಕಂಡಕ್ಟರ್‌ಗಳು ಟ್ರಿಪ್ ಕ್ಯಾರಿ ಮಾಡಬೇಕಾಗುತ್ತದೆ.

ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಗರ್ಭಧರಿಸಿದ ನಂತರ ಏಳು ತಿಂಗಳು ಹಾಗೂ ಮಗು ಜನನದ ನಂತರ ಮೂರು ತಿಂಗಳು ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ.

English summary
The Karnataka State Legal Services Authority has asked the Bangalore Metropolitan Transport Corporation (BMTC) to protect the interests of pregnant conductors in the workplace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X