ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಚಾಲಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡೋದು ಇನ್ನು ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಬಿಎಂಟಿಸಿ ಬಸ್‌ ಚಾಲಕರೇ ಹುಷಾರ್‌ ! ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡ್ತಿದೀರ, ವಾಹನ ಚಲಾವಣೆ ಸಮಯದಲ್ಲಿ ಕಡ್ಡಾಯವಾಗಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ, ಇದು ನಾವು ಹೇಳುತ್ತಿರುವುದಲ್ಲ ಸ್ವತಃ ಬಿಎಂಟಿಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ.

ಬಸ್‌ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದರಿಂದ ಚಾಲಕರ ಗಮನ ಸಂಪೂರ್ಣವಾಗಿ ಫೋನಿನೆಡೆಗೆ ಇರುತ್ತದೆ ಅದರಿಂದ ಅಪಘಾತದ ಪ್ರಮಾಣವೂ ಹೆಚ್ಚುತ್ತಿದೆ. ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಾರೆ, ಪ್ರತಿಯೊಬ್ಬರಿಗೂ ಬಸ್‌ ಮೇಲೆ ವಿಶ್ವಾಸ ಕಳೆದುಕೊಳ್ಳುವ ಮುನ್ನ ತಪ್ಪನ್ನು ತಿದ್ದಿಕೊಳ್ಳಿ ಎಂದು ಅಧಿಕಾರಿಗಳು ತಿಳಿ ಹೇಳಿದ್ದಾರೆ.

ಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ದರ ಇಳಿಕೆಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ದರ ಇಳಿಕೆ

ಬಸ್‌ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ, ಸಾರ್ವಜನಿಕರ ಬಳಿ ಹರಟೆ ಹೊಡೆಯುವುದು ಎಲ್ಲವೂ ಸೇರಿದಂತೆ ದೂರುಗಳು ಬಿಎಂಟಿಸಿ ನಿಗಮಕ್ಕೆ ಬಂದಿದೆ. ಚಾಲನೆ ಮಾಡುವಾಗ ಕೇವಲ ರಸ್ತೆಯ ಮೇಲೆ ನಿಗಾ ಇಡಬೇಕು, ಬಿಎಂಟಿಸಿ ಬಸ್‌ ನಿಲ್ದಾಣಗಳು ಎಲ್ಲಿರುತ್ತವೆಯೋ ಅಲ್ಲೇ ಬಸ್‌ ನಿಲುಗಡೆ ಮಾಡಬೇಕು, ಎಷ್ಟೇ ಆತುರವಿದ್ದರೂ ಸಿಗ್ನಲ್‌ ಜಂಪ್‌ ಮಾಡಕೂಡದು ಎನ್ನುವ ನಿಯಮಗಳಿದ್ದರೂ ಸಾಕಷ್ಟು ಚಾಲಕರು ಅನುಸರಿಸುತ್ತಿಲ್ಲ.

BMTC to staff: Switch off mobiles while driving

ಹಾಗಾಗಿ ನಿಗಮ ಈ ಬಾರಿ ಕಟ್ಟುನಿಟ್ಟಿನ ನಿರ್ಧಾರ ಘೋಷಿಸಿದೆ ಪ್ರತಿಯೊಬ್ಬ ಚಾಲಕನೂ ಬಸ್‌ ಚಾಲನೆ ವೇಳೆ ಕಡ್ಡಾಯವಾಗಿ ಮೊಬೈಲ್ ಸ್ವಿಚ್ಡ್‌ ಮಾಡಿಕೊಳ್ಳಲೇ ಬೇಕು, ಒಂದೊಮ್ಮೆ ಮಾತನಾಡುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕರು ದೂರು ನೀಡಿದ ಪಕ್ಷದಲ್ಲಿ ಆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿ

ಈ ಕುರಿತು ಜಾಗೃತಿ ಅಭಿಯಾನ ಈಗಾಗಲೇ ಶಾಂತಿನಗರದಲ್ಲಿ ಆರಂಭವಾಗಿದೆ, ಬಸ್‌ ನಿಲ್ದಾಣದ ಬಳಿ ಹಿರಿಯ ಬಸ್‌ ಚಾಲಕ ದೀನದಯಾಳು ಅವರು ಕೈನಲ್ಲಿ ಲೌಡ್‌ ಸ್ಪೀಕರ್‌ ಹಿಡಿದು ಮೊಬೈಲ್‌ ಬಳಕೆ ನಿರ್ಬಂಧ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಶೀಘ್ರದಲ್ಲಿ ಉಳಿದ ಬಸ್‌ ನಿಲ್ದಾಣಗಳಲ್ಲೂ ಅಭಿಯಾನ ಕೈಗೊಳ್ಳಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದರೆ 100 ರೂ. ದಂಡ ವಿಧಿಸಲಾಗುತ್ತದೆ.

English summary
Switch off your cellphone while driving. Negligent driving. Negligence driving can endanger your life announsed Deendayalu through a loudspeacker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X