ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಜೂನ್ 1ರಿಂದ 75 ಎಸಿ ವೋಲ್ವೊ ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ಮೇ 30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜೂನ್ 1ರಿಂದ ನಗರದಲ್ಲಿ ಹವಾನಿಯಂತ್ರಿತ ಬಸ್‌ಗಳ ಸಂಚಾರವನ್ನು ಆರಂಭಿಸಲಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆಯಾದ ಬಳಿಕ ಎಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಬಿಎಂಟಿಸಿ ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಈಗಾಗಲೇ ನಗರದಲ್ಲಿ ಕೆಲವು ಸಾಮಾನ್ಯ ಬಸ್‌ಗಳ ಸಂಚಾರ ಆರಂಭಿಸಲಾಗಿದ್ದು, ಕೆಲವು ಷರತ್ತುಗಳೊಂದಿಗೆ ಪ್ರಯಾಣಿಕರಿಗೆ ಸಂಚಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

BMTC To Run 75 AC Volvo Vajra Bus From June 1

ಮಾರ್ಚ್ 22ರ ಬಳಿಕ ಮೊದಲ ಬಾರಿಗೆ ನಗರದಲ್ಲಿ ಬಿಎಂಟಿಸಿಯ ಎಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಾಯೋಗಿಕವಾಗಿ 72 ಬಸ್‌ಗಳನ್ನು 8 ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಲಭ್ಯ: ದರ ತುಸು ಹೆಚ್ಚಳ ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಲಭ್ಯ: ದರ ತುಸು ಹೆಚ್ಚಳ

ಮಾರ್ಗಗಳ ವಿವರ

* ಕೆಂಪೇಗೌಡ ಬಸ್ ನಿಲ್ದಾಣ - ಹೊಸಕೋಟೆ

* ಕೆಂಪೇಗೌಡ ಬಸ್ ನಿಲ್ದಾಣ - ಕಾಡುಗೋಡಿ

* ಕೆಂಪೇಗೌಡ ಬಸ್ ನಿಲ್ದಾಣ - ಸರ್ಜಾಪುರ

* ಕೆಂಪೇಗೌಡ ಬಸ್ ನಿಲ್ದಾಣ - ಅತ್ತಿಬೆಲೆ

* ಹೆಬ್ಬಾಳ - ಬನಶಂಕರಿ

* ಹೆಬ್ಬಾಳ - ಸಿಲ್ಕ್ ಬೋರ್ಡ್‌

* ಬನಶಂಕರಿ - ಐಟಿಪಿಎಲ್

* ಎಲೆಕ್ಟ್ರಾನಿಕ್ ಸಿಟಿ - ಐಟಿಪಿಎಲ್

English summary
Bangalore Metropolitan Transport Corporation announced that it will run 75 AC Volvo Vajra bus from June 1, 2020 in 8 route of the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X