ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವೋಲ್ವೊ ಬಸ್‌ಗಳು ಬಿಳಿಯಾನೆಯಾಗಿವೆ. 300 ಹವಾನಿಯಂತ್ರಿತ ಎಸಿ ಬಸ್‌ಗಳನ್ನು ಸಂಸ್ಥೆ ಬದಲಾವಣೆ ಮಾಡಲು ಮುಂದಾಗಿದೆ. ಎಲೆಕ್ಟ್ರಿಕ್ ಬಸ್‌ಗಳು ವೋಲ್ವೊ ಬಸ್‌ಗಳ ಸ್ಥಾನ ತುಂಬಲಿವೆ.

ವಜ್ರ, ವಾಯುವಜ್ರ ಸೇರಿದಂತೆ ಬಿಎಂಟಿಸಿಯಲ್ಲಿ 825 ವೊಲ್ವೋ ಬಸ್‌ಗಳಿವೆ. ಒಂದು ಬಸ್‌ ಬೆಲೆ ಸುಮಾರು 1 ಕೋಟಿ ರೂ.ಗಳು. ಈ ಬಸ್‌ಗಳಿಂದ ಬರುವ ಆದಾಯಕ್ಕಿಂತ ಅದರ ನಿರ್ವಹಣಾ ವೆಚ್ಚವೇ ಸಂಸ್ಥೆಗೆ ಹೊರೆಯಾಗಿದೆ.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

ನಗರ ಸಾರಿಗೆಗೆ ಹವಾನಿಯಂತ್ರಿತ ವೊಲ್ವೋ ಬಸ್ ಬಳಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಗೆ 2006ರಲ್ಲಿ ಬಿಎಂಟಿಸಿಗೆ ಸಿಕ್ಕಿತ್ತು. ಆದರೆ, ಕೆಂಪು ವೋಲ್ವೊ ಬಸ್‌ಗಳ ನಿರ್ವಹಣೆ ವರ್ಷದಿಂದ ವರ್ಷಕ್ಕೆ ಸಂಸ್ಥೆಗೆ ಹೊರೆಯಾಗುತ್ತಿದೆ.

ಬೆಂ-ಹೈದರಾಬಾದ್‌ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್‌ಟಿಸಿ ಬೆಂ-ಹೈದರಾಬಾದ್‌ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್‌ಟಿಸಿ

BMTC To Replace Volvo Bus With Electric Buses

ಈಗ ಎಲೆಕ್ಟ್ರಿಕ್ ಬಸ್ ಸಂಸ್ಥೆಗೆ ಸೇರುವುದರಿಂದ ವೋಲ್ವೊ ಬಸ್ ಬದಲಾವಣೆ ಮಾಡಲು ಸಂಸ್ಥೆ ಮುಂದಾಗಿದೆ. ಮೊದಲ ಹಂತದಲ್ಲಿ 300 ಎಸಿ ಬಸ್‌ ಬದಲಾಗಲಿದೆ. 1089 ಹವಾನಿಯಂತ್ರಿತ ವಲ್ಲದ ಬಸ್‌ಗಳನ್ನು ಬದಲಾವಣೆ ಮಾಡಲಿದ್ದು, 357 ಡೀಸೆಲ್ ಬಸ್‌ಗಳು ಸೇರ್ಪಡೆಯಾಗಲಿವೆ.

 ಮಳೆ ಬಂದರೆ ಶವರ್ ಆಗುತ್ತದೆ ಗುಡೇನಕಟ್ಟಿ ಮಾರ್ಗದ ಈ ಏಕೈಕ ಬಸ್! ಮಳೆ ಬಂದರೆ ಶವರ್ ಆಗುತ್ತದೆ ಗುಡೇನಕಟ್ಟಿ ಮಾರ್ಗದ ಈ ಏಕೈಕ ಬಸ್!

ಜನವರಿ 2020ಕ್ಕೆ ಎಲೆಕ್ಟ್ರಿಕ್ ಬಸ್ ಮತ್ತು 41 ಸೀಟುಗಳ ಡೀಸೆಲ್ ಬಸ್ ಬಿಎಂಟಿಸಿಗೆ ಸೇರುವ ನಿರೀಕ್ಷೆ ಇದೆ. ಹಿಂದೆ ಸಾರಿಗೆ ಸಚಿವರಾಗಿದ್ದ ಡಿ. ಸಿ. ತಮ್ಮಣ್ಣ ವೋಲ್ವೊ ಬಸ್‌ಗಳನ್ನು ಅಕ್ಕಪಕ್ಕದ ನಗರಗಳ ನಗರ ಸಾರಿಗೆಗೆ ಬಳಸಲು ಚಿಂತನೆ ನಡೆಸಿದ್ದರು. ಆದರೆ, ಸಾರಿಗೆ ನಿಗಮಗಳು ಈ ಬಸ್‌ ಬೇಡ ಎಂದು ಹೇಳಿದ್ದವು.

ಎಲೆಕ್ಟ್ರಿಕ್ ಬಸ್‌ಗಳು ಸಂಪೂರ್ಣವಾಗಿ ಚಾರ್ಜ್ ಆದರೆ 200 ಕಿ. ಮೀ. ಓಡಲಿವೆ. ವೋಲ್ವೊ ಬಸ್‌ಗಳ ಪ್ರಯಾಣದರವನ್ನೇ ಎಲೆಕ್ಟ್ರಿಕ್ ಬಸ್‌ಗಳಿಗೆ ವಿಧಿಸಲು ಬಿಎಂಟಿಸಿ ತೀರ್ಮಾನಿಸಿದೆ.

400 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಲು ಕೆಎಸ್ಆರ್‌ಟಿಸಿ ಟೆಂಡರ್ ಕರೆದಿದೆ. ಇವುಗಳಲ್ಲಿ 300 ಬಸ್ ಬಿಎಂಟಿಸಿಗೆ ಹಂಚಿಕೆಯಾಗಲಿವೆ.

English summary
Bangalore Metropolitan Transport Corporation (BMTC) all set to replace AC Volvo buses with electric buses. 300 electric buses may induct to corporation in January 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X