ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜನವರಿ 22 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 2022ರ ತನಕ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಿಲ್ಲ. 2030ರ ವೇಳೆಗೆ ನಗರದ ರಸ್ತೆಗಳಲ್ಲಿ ಬಿಎಂಟಿಸಿಯ ವಿದ್ಯುತ್ ಚಾಲಿತ ಬಸ್‌ಗಳು ಮಾತ್ರ ಸಂಚಾರ ನಡೆಸಲಿವೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಕುರಿತು ಮಾತನಾಡಿದ್ದಾರೆ. "ಬಿಎಂಟಿಸಿ 2022ರಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಯನ್ನು ಆರಂಭಿಸಲಿದೆ. ಮೊದಲ ಹಂತದಲ್ಲಿ 300 ಬಸ್ ಖರೀದಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಎಲ್ಲಿಗೆ?; ವೇಳಾಪಟ್ಟಿರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಎಲ್ಲಿಗೆ?; ವೇಳಾಪಟ್ಟಿ

ಎಲೆಕ್ಟ್ರಿಕ್ ಬಸ್ ಖರೀದಿಗೂ ಮುನ್ನ ಬಿಎಂಟಿಸಿಯ ನಾಲ್ಕು ಬಸ್ ಡಿಪೋದಲ್ಲಿ ಚಾರ್ಜರ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 300, 2ನೇ ಹಂತದಲ್ಲಿ 500 ಮತ್ತು ಮೂರನೇ ಹಂತದಲ್ಲಿ 90 ವಿದ್ಯುತ್ ಚಾಲಿತ ಬಸ್‌ಗಳನ್ನು ಬಿಎಂಟಿಸಿ ಖರೀದಿ ಮಾಡಲಿದೆ.

ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್, ವೇಳಾಪಟ್ಟಿ ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್, ವೇಳಾಪಟ್ಟಿ

BMTC TO Procure Electric Buses In 2022

2030ರ ವೇಳೆಗೆ ಬಿಎಂಟಿಸಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳೇ ಇರಲಿವೆ. ಪ್ರಸ್ತುತ ಸುಮಾರು 600 ಬಸ್‌ಗಳು ಬಿಎಂಟಿಸಿಯಲ್ಲಿವೆ. ಪ್ರತಿದಿನ ನಾಲ್ಕು ಲಕ್ಷಕ್ಕೂ ಅಧಿಕ ಜನರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಬೆಸ್ಕಾಂ ನಗರದ 126 ಪ್ರದೇಶದಲ್ಲಿ ಚಾರ್ಜಿಂಗ್ ಪಾಯಿಂಟ್ ನಿರ್ಮಾಣ ಮಾಡುತ್ತಿದೆ. ಇವುಗಳಲ್ಲಿ 26 ಶೀಘ್ರವಾಗಿ ವಾಹನಗಳನ್ನು ಚಾರ್ಜ್ ಮಾಡುವ ಪಾಯಿಂಟ್‌ಗಳಾಗಿವೆ.

English summary
Bengaluru Metropolitan Transport Corporation (BMTC) will procure electric buses in 2022. BMTC looking run all electric buses in city by 2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X