ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯಿಂದ ವಿಶೇಷ ಬೆಂಗಳೂರು ದರ್ಶಿನಿ ಸೇವೆ ಆರಂಭ; ವಿಶೇಷತೆಯೇನು?

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ನಾಳೆಯಿಂದ (ಏಪ್ರಿಲ್ 24 ರಿಂದ ಮೇ 3 ರವರೆಗೆ) ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022ಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಕ್ರೀಡಾಪಟುಗಳು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 'ವಿಶೇಷ ಬೆಂಗಳೂರು ದರ್ಶಿನಿ' ಸೇವೆ ಆರಂಭಿಸಿದೆ.

ಹೊರ ರಾಜ್ಯಗಳಿಂದ ಬಂದಂತಹ ಕ್ರೀಡಾಪಟುಗಳಿಗೆ ಉದ್ಯಾನ ನಗರಿಯ ಸೊಬಗು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಸೂಪರ್ ಪ್ಲಾನ್ ಮಾಡಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ನೋಡಲು ಬಿಎಂಟಿಸಿ ಬೆಂಗಳೂರು ದರ್ಶಿನಿ ಸೇವೆಯನ್ನು ಒದಗಿಸುತ್ತಿದೆ. ಈ ಸೇವೆಯಲ್ಲಿ 8 ವಿವಿಧ ಸ್ಥಳಗಳನ್ನು ಜನರು ವೀಕ್ಷಿಸಬಹುದಾಗಿದೆ.

ವಿಶೇಷ ಬೆಂಗಳೂರು ದರ್ಶಿನಿ ದೃಶ್ಯವೀಕ್ಷಣೆಯ ಸ್ಥಳಗಳು, ಬಿಎಂಟಿಸಿ ಬಸ್ ದರ, ಮೆಜೆಸ್ಟಿಕ್‌ನಿಂದ ಪ್ರವಾಸದ ಪ್ಯಾಕೇಜ್‌ಗಳ ವಿವರಗಳು ಮತ್ತು ಶುಲ್ಕ. ಬೆಂಗಳೂರಿನ ಸುತ್ತಮುತ್ತಲಿನ ದೃಶ್ಯವೀಕ್ಷಣೆಗಾಗಿ ಬಸ್ ಲಭ್ಯತೆಯನ್ನು ಪರಿಶೀಲಿಸಿ.

BMTC To Launch Special Bengaluru Darshini Sight-seeing Service

ಬೆಂಗಳೂರು ದರ್ಶಿನಿ-01
ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡುವ ಬಿಎಂಟಿಸಿ ಬಸ್ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಲಾಲ್‌ಬಾಗ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್ ವೀಕ್ಷಿಸಬಹುದು. ನಂತರ ರಾತ್ರಿ 8 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹಿಂತಿರುಗುತ್ತದೆ. ಈ ಪ್ಯಾಕೇಜ್‌ನ ದರ 420 ರೂ. ಆಗಿದೆ.

ಬೆಂಗಳೂರು ದರ್ಶಿನಿ-02
ಬೆಳಗ್ಗೆ 08:40ಕ್ಕೆ ಆರ್ಟ್ ಆಫ್ ಲಿವಿಂಗ್ ರವಿಶಂಕರ ಆಶ್ರಮ, ಕನಕಪುರ ರಸ್ತೆಯಿಂದ ಆರಂಭವಾಗಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಲಾಲ್‌ಬಾಗ್, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ವೀಕ್ಷಿಸಬಹುದು. ನಂತರ ಸಂಜೆ 7:50ಕ್ಕೆ ಮರಳಿ ಆರ್ಟ್ ಆಫ್ ಲಿವಿಂಗ್ ರವಿಶಂಕರ ಆಶ್ರಮ, ಕನಕಪುರ ರಸ್ತೆ ಹಿಂದಿರುಗಲಿದೆ. ಈ ಪ್ಯಾಕೇಜ್‌ನ ದರ 500 ರೂ. ಆಗಿದೆ.

BMTC To Launch Special Bengaluru Darshini Sight-seeing Service


ಬೆಂಗಳೂರು ದರ್ಶಿನಿ-03
ಬೆಳಗ್ಗೆ 08:30ಕ್ಕೆ ಜೈನ್ ಕಾಲೇಜ್ ಕ್ಯಾಂಪಸ್, ಕನಕಪುರ ರಸ್ತೆಯಿಂದ ಹೊರಡುವ ಬಸ್, ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ವಿಧಾನಸೌಧ, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ವೀಕ್ಷಿಸಿ ನಂತರ ಸಂಜೆ 7:40ಕ್ಕೆ ಮರಳಿ ಜೈನ್ ಕಾಲೇಜ್ ಕ್ಯಾಂಪಸ್, ಕನಕಪುರ ರಸ್ತೆಗೆ ಹಿಂದಿರುಗಲಿದೆ. ಈ ಪ್ಯಾಕೇಜ್‌ನ ದರ 600 ರೂ. ಆಗಿದೆ.

BMTC To Launch Special Bengaluru Darshini Sight-seeing Service

ಬೆಂಗಳೂರು ದರ್ಶಿನಿ ವಿಶೇಷತೆಗಳು
ಬಿಎಂಟಿಸಿಯು ಕ್ಯುರಿಟೋಬಾ ಮಾದರಿಯ ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿದೆ, ಇದು "ಬೆಂಗಳೂರು ರೌಂಡ್ಸ್' ನಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಬಸ್ಸುಗಳು ಗಾಳಿಯ ಹರಿವಿಗಾಗಿ ದ್ವಾರಗಳೊಂದಿಗೆ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿವೆ ಮತ್ತು ಮೆತ್ತನೆಯ ಒರಗುವ ಆಸನಗಳನ್ನು ಹೊಂದಿವೆ.

ಈ ಬಸ್ಸುಗಳು 35 ಆಸನ ಸಾಮರ್ಥ್ಯವನ್ನು ಹೊಂದಿದ್ದು, 22 ಸೀಟ್ ಬ್ರಾಂಡ್ "ಸಿಲ್ವರ್ ಕ್ಲಾಸ್" ಹೊಂದಿದ್ದು, ಹವಾನಿಯಂತ್ರಿತ ರೈಲ್ವೇ ಕೋಚ್‌ಗಳಲ್ಲಿರುವಂತೆ ಉಪಹಾರಕ್ಕಾಗಿ ಪುಲ್‌ಔಟ್ ಟ್ರೇ ಅನ್ನು ಹೊಂದಿದೆ.

ಏರ್‌ಲೈನ್‌ಗಳಲ್ಲಿನ ಎಕ್ಸಿಕ್ಯೂಟಿವ್ ಕ್ಲಾಸ್‌ನಂತೆ, ಮೂರು ಗೋಲ್ಡ್ ಕ್ಲಾಸ್ ಸೀಟ್‌ಗಳು ದೊಡ್ಡದಾಗಿದೆ ಮತ್ತು ಕೋಚ್‌ನ ಹಿಂಭಾಗದಲ್ಲಿ ಹೆಚ್ಚು ಲೆಗ್‌ರೂಮ್‌ಗಳಿವೆ. ಎಲ್ಲಾ ಪ್ರಯಾಣಿಕರು ಸಂಗೀತ, ಮನರಂಜನೆ ಮತ್ತು ಇತ್ತೀಚಿನ ನಗರ ಸುದ್ದಿಗಳೊಂದಿಗೆ FM ರೇಡಿಯೋ ಚಾನಲ್ ಅನ್ನು ಕೇಳಬಹುದು.

Recommended Video

8 ನೇ ಪಂದ್ಯದಲ್ಲಿ ಸೋತು IPL ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ | Oneindia Kannada

English summary
Bengaluru Metropolitan Transport Corporation (BMTC) To Launch Special Bengaluru Darshani Sight-seeing Service connection with Khelo India University Games 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X