ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಬಿಎಂಟಿಸಿಯ ಬಿಎಸ್‌-6 ಬಸ್ ಮೊದಲ ನೋಟ

|
Google Oneindia Kannada News

ಬೆಂಗಳೂರು, ನವೆಂಬರ್ 14; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸಾರ್ವಜನಿಕ ಸೇವೆಗೆ ಬಿಎಸ್‌-6 ಬಸ್ ಅಳವಡಿಕೆ ಮಾಡಿಕೊಂಡ ಪ್ರಥಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಶೋಕ್ ಲೈಲ್ಯಾಂಡ್ ತಯಾರು ಮಾಡಿರುವ ಮೊದಲ ಹಂತದ ಬಿಎಸ್-6 ಬಸ್‌ಗಳು ಬೆಂಗಳೂರಿಗೆ ಆಗಮಿಸಿವೆ. ಬಿಎಂಟಿಸಿ ಅಧಿಕಾರಿಗಳು ಶನಿವಾರ ಬಸ್‌ಗಳ ಪರಿಶೀಲನೆ ನಡೆಸಿದರು. 565 ಬಸ್‌ಗಳನ್ನು ಬಿಎಂಟಿಸಿ ಖರೀದಿ ಮಾಡಲಿದೆ.

ನ.5 ರಿಂದ ಮೈಸೂರು To ಪಣಜಿಗೆ ವೇಗದೂತ ಬಸ್ ಸಂಚಾರ: ಇಲ್ಲಿದೆ ಸಂಪೂರ್ಣ ವಿವರ ನ.5 ರಿಂದ ಮೈಸೂರು To ಪಣಜಿಗೆ ವೇಗದೂತ ಬಸ್ ಸಂಚಾರ: ಇಲ್ಲಿದೆ ಸಂಪೂರ್ಣ ವಿವರ

2017-18ರ ಬಜೆಟ್‌ನಲ್ಲಿ ನೀಡಿದ್ದ ಅನುದಾನದಲ್ಲಿ 565 ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ 50 ಬಸ್‌ಗಳು ಬೆಂಗಳೂರು ನಗರಕ್ಕೆ ಆಗಮಿಸಿವೆ. ಬಸ್‌ಗಳ ಬಾಡಿ ನಿರ್ಮಾಣ ಕಾರ್ಯ, ಬಣ್ಣ ಬಳಿಯುವ ಕಾರ್ಯ ಚಾಲ್ತಿಯಲ್ಲಿದೆ.

ಬೆಂಗಳೂರು: ಬೇಡಿಕೆ ಹೆಚ್ಚಾದ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಸಂಚಾರ ಹೆಚ್ಚಳ ಬೆಂಗಳೂರು: ಬೇಡಿಕೆ ಹೆಚ್ಚಾದ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಸಂಚಾರ ಹೆಚ್ಚಳ

 BMTC To Induct 565 BS VI buses From Ashok Leyland

ಬಿಎಸ್-6 ಎಂಜಿನ್‌ಗಳನ್ನು ಹೊಂದಿರುವ ಬಸ್‌ಗಳು ಕಡಿಮೆ ಮಾಲಿನ್ಯ ಪ್ರಯಾಣವನ್ನು ಹೊಂದಿವೆ. ಉತ್ತಮ ಎಂಜಿನ್‌ಗಳನ್ನು ಇವು ಹೊಂದಿವೆ. ಈ ಬಸ್‌ಗಳಲ್ಲಿ ಬೆಂಕಿ ಹೊತ್ತಿಕೊಂಡರೆ ಎಚ್ಚರಿಸುವ ವ್ಯವಸ್ಥೆ ಸಹ ಇದೆ.

 ORR ಬಿಎಂಟಿಸಿ ಪಥದಲ್ಲಿ ಈ ವಾಹನಗಳಿಗೆ ಸಂಚರಿಸಲು ಅವಕಾಶ ORR ಬಿಎಂಟಿಸಿ ಪಥದಲ್ಲಿ ಈ ವಾಹನಗಳಿಗೆ ಸಂಚರಿಸಲು ಅವಕಾಶ

ಕರ್ನಾಟಕ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ 1500 ಬಸ್ ಖರೀದಿಗೆ ಬಿಎಂಟಿಸಿಗೆ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ 2017-18 ಮತ್ತು 2019-20ರ ತನಕ ಬಿಎಸ್‌ 4 ಮಾದರಿ 857 ಬಸ್ ಖರೀದಿ ಮಾಡಲಾಗಿತ್ತು.

ಆದರೆ ಕೋವಿಡ್ ಸಂದರ್ಭದಲ್ಲಿ ಯಾವುದೇ ಬಸ್ ಖರೀದಿ ನಡೆದಿರಲಿಲ್ಲ. ಈಗ ಬಿಎಂಟಿಸಿ ಅಶೋಕ್ ಲೈಲ್ಯಾಂಡ್ ಕಂಪನಿಯ ಬಿಎಸ್‌ 6 ಬಸ್ ಖರೀದಿ ಮಾಡುತ್ತಿದೆ. ಪ್ರತಿ ಬಸ್‌ಗೆ 33.82 ಲಕ್ಷ ರೂ. ವೆಚ್ಚಮಾಡುತ್ತಿದೆ. 2022ರ ಫೆಬ್ರವರಿಯೊಳಗೆ ಬಸ್‌ಗಳು ಆಗಮಿಸಲಿವೆ.

ಬಸ್ ಸಂಚಾರ ಪುನಃ ಆರಂಭ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 6 ಮಾರ್ಗದಲ್ಲಿ ಹವಾನಿಯಂತ್ರಿತ ವೊಲ್ವೊ ಬಸ್ ಸಂಚಾರವನ್ನು ಪುನಃ ಆರಂಭಿಸಿದೆ. ಬನಶಂಕರಿ, ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್‌ಗಳ ಸಂಖ್ಯೆಯನ್ನು ಸಹ ಹೆಚ್ಚಳ ಮಾಡಲಾಗಿದೆ.

6 ಮಾರ್ಗದ ಪೈಕಿ ಚಂದಾಪುರ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ (ಕೆಐಎ 8ಸಿ), ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ ನಿಂದ ವಿಮಾನ ನಿಲ್ದಾಣ (ಕೆಐಎ 8ಇ) ಬಸ್‌ಗಳು ಸೇರಿವೆ.

ಮೆಜೆಸ್ಟಿಕ್-ದೊಡ್ಡಬಳ್ಳಾಪುರ (ವಿ-285 ಎಂ), ಮೆಜೆಸ್ಟಿಕ್-ಚನ್ನಸಂದ್ರ (ವಿ-305ಡಿ), ಮೆಜೆಸ್ಟಿಕ್-ಹೊಸಕೋಟೆ (ವಿ-317ಎ) ಮತ್ತು ಮೆಜೆಸ್ಟಿಕ್-ಸರ್ಜಾಪುರ (ವಿ-342 ಎಫ್) ಮಾರ್ಗಗಳು ಸೇರಿವೆ.

ಬಿಎಂಟಿಸಿ ಪಾಸ್‌ ವಿತರಣೆ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌ಗಳನ್ನು ನವೆಂಬರ 14ರಿಂದ ವಿತರಿಸಲಿದೆ. ಪಾಸು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿಪಡಿಸಿದ ಪಾಸ್‌ ವಿತರಣಾ (ಬೆಂಗಳೂರು ಒನ್‌) ಕೇಂದ್ರದಲ್ಲಿ ಬೆಳಗ್ಗೆ 8ರಿಂದ ಸಂಜೆ 6.30ರವರೆಗೆ ಪಾಸ್‌ಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಶಾಲಾ/ ಕಾಲೇಜಿನ ಗುರುತಿನ ಚೀಟಿ/ ಶುಲ್ಕ ರಸೀದಿ ಅಥವಾ ಶಾಲಾ ಮುಖ್ಯಸ್ಥರು ದೃಢೀಕರಿಸಿದ ಪತ್ರ ಸಲ್ಲಿಸಬೇಕು.

ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿಯಾಗದ (1-10ನೇ ತರಗತಿ ಹೊರತುಪಡಿಸಿ) ವಿದ್ಯಾರ್ಥಿಗಳು ಪಾಸ್‌ಗಾಗಿ ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

5 ಮಾರ್ಗದಲ್ಲಿ ಎಸಿ ವೊಲ್ವೋ ಬಸ್; ಬಿಎಂಟಿಸಿ ಸೆಪ್ಟೆಂಬರ್‌ನಲ್ಲಿ 5 ಹೊಸ ಮಾರ್ಗದಲ್ಲಿ 44 ಎಸಿ ವೊಲ್ವೋ ಬಸ್‌ಗಳನ್ನು ಪರಿಚಯಿಸಿತ್ತು. ಈ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಚಾರ ನಡೆಸುತ್ತಿವೆ.

ವೊಲ್ವೋ ಬಸ್‌ಗಳನ್ನು ಮೆಜೆಸ್ಟಿಕ್-ಕಾಡುಗೋಡಿ (ವಿ-360ಬಿ), ಮೆಜೆಸ್ಟಿಕ್-ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ (ವಿ-365), ಮೆಜೆಸ್ಟಿಕ್-ಬನಶಂಕರಿ ಟಿಟಿಎಂಸಿ-ಐಟಿಪಿಎಲ್ (ವಿ-500ಸಿವಿ) ಮತ್ತು ಮೆಜೆಸ್ಟಿಕ್ ಸೆಂಟ್ರಲ್ ಸಿಲ್ಕ್ ಬೋರ್ಡ್-ಹೆಬ್ಬಾಳ (ವಿ-500ಡಿ) ಮಾರ್ಗಗಳು ಸೇರಿದ್ದವು.

English summary
BMTC India's first state transport utility to have inducted BS VI buses. Vehicles procured from Ashok Leyland 50 chassis now in Bengaluru. The corporation gave the work order to purchase 565 buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X