ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌರಶಕ್ತಿ ಮೊರೆ ಹೋದ ಬಿಎಂಟಿಸಿ; 4.32 ಕೋಟಿ ವಿದ್ಯುತ್ ಬಿಲ್ ಉಳಿತಾಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾರ್ಷಿಕ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದೆ. ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡಲಿದೆ.

2020ರ ವೇಳೆಗೆ 45 ಬಸ್ ಡಿಪೋ, 9 ಟಿಟಿಎಂಸಿ ನಿಲ್ದಾಣಗಳಲ್ಲಿ ಸೌರವಿದ್ಯುತ್ ಉತ್ಪಾದನೆಯಾಗಲಿದೆ. ಈ ಮೂಲಕ ವಾರ್ಷಿಕ 4.32 ಕೋಟಿ ವಿದ್ಯುತ್ ಬಿಲ್ ಉಳಿಸಲು ಬಿಎಂಟಿಸಿ ಯೋಜನೆ ತಯಾರಿಸಿದೆ. ಸೌರಫಲಕಗಳ ಅಳವಡಿಕೆ ಕಾರ್ಯಕ್ಕೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ.

ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ; ಬಂತು ಸುತ್ತೋಲೆಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ; ಬಂತು ಸುತ್ತೋಲೆ

5 ಸಾವಿರ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲು ಸೌರಫಲಕ ಅಳವಡಿಸಲು ಬಿಎಂಟಿಸಿ ಟೆಂಡರ್ ಆಹ್ವಾನಿಸಿದೆ. ಪ್ರತಿ ತಿಂಗಳು 4.50 ಲಕ್ಷ ಯೂನಿಟ್‌ ಉತ್ಪಾದನೆಯಾಗಲಿದ್ದು, ಪ್ರತಿ ಯೂನಿಟ್‌ಗೆ ಸುಮಾರು 8 ರೂ. ಖರ್ಚಾಗುವ ನಿರೀಕ್ಷೆ ಇದೆ.

ಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶ

ನಷ್ಟದಲ್ಲಿರುವ ಬಿಎಂಟಿಸಿಗೆ ವಿದ್ಯುತ್ ಖರ್ಚು ಉಳಿದರೆ ಅದು ಅನುಕೂಲವಾಗಲಿದೆ. 2018-19ನೇ ಸಾಲಿನಲ್ಲಿ ಸಂಸ್ಥೆ 300 ಕೋಟಿ ನಷ್ಟದಲ್ಲಿದೆ. ಬಿಎಂಟಿಸಿಗೆ ಶೀಘ್ರದಲ್ಲೇ 300 ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಯಾಗಲಿವೆ.

ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?

ಎಲ್ಲೆಲ್ಲಿ ಸೋಲಾರ್ ಫಲಕ ಅಳವಡಿಕೆ

ಎಲ್ಲೆಲ್ಲಿ ಸೋಲಾರ್ ಫಲಕ ಅಳವಡಿಕೆ

45 ಬಸ್ ಡಿಪೋ, 3 ಸೆಂಟ್ರಲ್ ವರ್ಕ್ ಶಾಪ್‌ನಲ್ಲಿ ಸೌರಫಲಕ ಆಳವಡಿಸಲಾಗುತ್ತದೆ. ಯಶವಂತಪುರ, ಕೆಂಗೇರಿ, ದೊಮ್ಮಲೂರು, ಐಟಿಪಿಎಲ್, ಜಯನಗರ, ಕೋರಮಂಗಲ, ಬನಶಂಕರಿ, ಬನ್ನೇರುಘಟ್ಟ, ವಿಜಯನಗರ, ಶಿವಾಜಿನಗರ, ಕೆಂಪೇಗೌಡ ಬಸ್ ನಿಲ್ದಾಣದಲ್ಲಿಯೂ ಸೌರಫಲಕ ಅಳವಡಿಕೆ ಮಾಡಲಾಗುತ್ತದೆ.

22.05 ಕೋಟಿ ವೆಚ್ಚ

22.05 ಕೋಟಿ ವೆಚ್ಚ

45 ಡಿಪೋ, 3 ಸೆಂಟ್ರಲ್ ವರ್ಕ್ ಶಾಪ್, 9 ಟಿಟಿಎಂಸಿಗಳಲ್ಲಿ ಸೌರಫಲಕ ಅಳವಡಿಕೆ ಮಾಡಲು ಈ ತಿಂಗಳ ಅಂತ್ಯದಲ್ಲಿ ಟೆಂಡರ್ ಕರೆಯಲಾಗುತ್ತದೆ. ಇದಕ್ಕೆ ಸುಮಾರು 22.05 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2020ರಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.

4.32 ಕೋಟಿ ವಿದ್ಯುತ್ ಬಿಲ್

4.32 ಕೋಟಿ ವಿದ್ಯುತ್ ಬಿಲ್

ಸೌರ ವಿದ್ಯುತ್ ಉತ್ಪಾದನೆಯಿಂದ ಬಿಎಂಟಿಸಿಗೆ ಸಾಕಷ್ಟು ಉಳಿತಾಯವಾಗಲಿದೆ. ವಾರ್ಷಿಕ ಸಂಸ್ಥೆ 4.32 ಕೋಟಿ ವಿದ್ಯುತ್ ಬಿಲ್ ಪಾವತಿ ಮಾಡಲಿದೆ. ನಷ್ಟದಲ್ಲಿರುವ ಸಂಸ್ಥೆಗೆ ವಾರ್ಷಿಕ 4 ಕೋಟಿ ಉಳಿತಾಯ ಅನುಕೂಲಕರವಾಗಲಿದೆ.

ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್

ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್

ಬಿಎಂಟಿಸಿಗೆ ಶೀಘ್ರದಲ್ಲಿಯೇ 300 ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಗೊಳ್ಳಲಿವೆ. ಎಲೆಕ್ಟ್ರಿಕ್ ಬಸ್ ಸೇರ್ಪಡೆಗೊಳ್ಳುತ್ತಿದ್ದಂತೆ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಿದೆ. ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಬೇಕಿದೆ.

English summary
Bangalore Metropolitan Transport Corporation (BMTC) will generating solar energy by 2020 and save Rs 4.32 crore electricity bill every month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X