ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿನದ ಪಾಸ್ ದರ ತಗ್ಗಿಸಲು ಬಿಎಂಟಿಸಿ ಚಿಂತನೆ: ಟಿಕೆಟ್ ಆರಂಭ ಯಾವಾಗ?

|
Google Oneindia Kannada News

ಬೆಂಗಳೂರು, ಮೇ 25: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನದ ಪಾಸ್ ದರವನ್ನು ತಗ್ಗಿಸಲು ಚಿಂತನೆ ನಡೆಸಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬಿಎಂಟಿಸಿ ಬಸ್ ಸಂಚಾರ ನಿಂತು ಹೋಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಪುನರಾರಂಭಗೊಂಡಿದೆ.

Recommended Video

ಈ ಏರಿಯಾಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಏರಿಯಾಗಳಲ್ಲೂ BMTC ಬಸ್ ಇರುತ್ತೆ | Oneindia Kannada

ಆದರೆ ಕೆಲ ದಿನಗಳ ಕಾಲ ಟಿಕೆಟ್ ನೀಡದಿರಲು ಬಿಎಂಟಿಸಿ ನಿರ್ಧರಿಸಿ, ಕೇವಲ ದಿನದ ಪಾಸು ಹಾಗೂ ವಾರದ ಪಾಸನ್ನು ನೀಡುತ್ತಿದೆ. ಹೀಗಾಗಿ ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಹತ್ತು ವರ್ಷದೊಳಗಿನ ಮಕ್ಕಳು ಹಾಗೂ ವೃದ್ಧರು ಬಸ್‌ನಲ್ಲಿ ಸಂಚರಿಸಬೇಡಿ ಎಂದು ಹೇಳಲಾಗಿತ್ತು.

ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು? ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?

ಈಗ ಬಸ್ ಹತ್ತಿ ಮುಂದಿನ ಸ್ಟಾಪ್‌ನಲ್ಲಿ ಇಳಿಯಬೇಕಾದರೂ 70 ರೂ. ಬಸ್ ಪಾಸ್ ಪಡೆಯುವುದು ಕಡ್ಡಾಯವಾಗಿರುವುದರಿಂದ ಪ್ರಯಾಣಿಕರು ಬಸ್ ಪ್ರಯಾಣಕ್ಕೆ ಅಷ್ಟು ಮನಸ್ಸು ಮಾಡುತ್ತಿಲ್ಲ.

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ನೀಡಲು ಪ್ರಸ್ತಾವನೆ ಸಲ್ಲಿಕೆ

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ನೀಡಲು ಪ್ರಸ್ತಾವನೆ ಸಲ್ಲಿಕೆ

ಮೇ 26ರಿಂದ BMTC ಬಸ್ ಗಳಲ್ಲಿ ಟಿಕೆಟ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಂಟಿಸಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಮಂಗಳವಾರದಿಂದ ಟಿಕೆಟ್ ನೀಡಲಿದೆ. ಪಾಸ್ ಬದಲು ಟಿಕೆಟ್ ನೀಡಲು ನಿರ್ಧಾರ ಮಾಡಿದೆ
ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ

ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ

ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ ಫಿಕ್ಸ್. 5 ರೂ, 10 ರೂ, 15, 20, 25 ರೂ ಮಾದರಿಯಲ್ಲಿ ಟಿಕೆಟ್ ನೀಡಲಿರುವ ಬಿಎಂಟಿಸಿ. ಚಿಲ್ಲರೆ ಸಮಸ್ಯೆ, ಪದೇ ಪದೇ ಕೈ ಬದಲಾವಣೆ ಮಾಡುವುದು ತಪ್ಪಿಸಲು ಸ್ಲಾಬ್ ಮಾದರಿ ಟಿಕೆಟ್ ನೀಡಲಿರುವ ಬಿಎಂಟಿಸಿ.

ಅವಕಾಶವಿದ್ದರೂ ತಂತ್ರಜ್ಞಾನ ಬಳಕೆ ಇಲ್ಲ

ಅವಕಾಶವಿದ್ದರೂ ತಂತ್ರಜ್ಞಾನ ಬಳಕೆ ಇಲ್ಲ

BMTC ನಿರ್ಲಕ್ಷ್ಯದಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಅವಕಾಶವಿದ್ದರೂ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ, ಡಿಜಿಟಲ್ ಟಿಕೇಟಿಂಗ್ ಸಿಸ್ಟಮ್ ಜಾರಿಗೆ ತರುತ್ತಿಲ್ಲ.

ಡಿಜಿಟಲ್ ಟಿಕೇಟಿಂಗ್, ಸ್ಮಾರ್ಟ್ ಕಾರ್ಡ್ ಮೂಲಕ ಶಾಶ್ವತ ಪರಿಹಾರ ದೊರೆಯಲಿದೆ. ಆದರೆ ಗೊತ್ತಿದ್ದೂ ಗೊತ್ತಿದ್ದೂ ಡಿಜಿಟಲ್ ಟಿಕೇಟಿಂಗ್, ಸ್ಮಾರ್ಟ್ ಕಾರ್ಡ್ ಬಳಕೆಗೆ ಪ್ರಯತ್ನಿಸುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ದಿನದ ಬಸ್‌ಪಾಸ್‌ಗೆ ಆಕ್ರೋಶ

ದಿನದ ಬಸ್‌ಪಾಸ್‌ಗೆ ಆಕ್ರೋಶ

70 ರೂಪಾಯಿ ದಿನದ ಪಾಸ್ ಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ., 1-2 ಸ್ಟಾಪ್ ಗೆ 10 ರೂಪಾಯಿ ಕೊಡುತ್ತಿದ್ದೆವು. ಈಗ ಟಿಕೆಟ್ ಕೊಡ್ತಿಲ್ಲ, ಪಾಸ್ ತಗೊಳ್ಳಿ ಅಂತಾರೆ. ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದಿರುವವರು ಸಾಕಷ್ಟು ಮಂದಿ ಇದ್ದಾರೆ ದಿನಕ್ಕೆ 70 ರೂ. ನೀಡುವುದು ಕಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

English summary
BMTC is contemplating to reduce the Daily Pass Rate From 70 Rs to 50 Rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X