• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ, ಲೀಸ್‌ಗೆ ಕೇಂದ್ರದ ತಕರಾರು

|

ಬೆಂಗಳೂರು, ಅಕ್ಟೋಬರ್ 22: ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಇಂದಿನಿಂದ ಆರಂಭಗೊಂಡಿದೆ.

ಆದರೆ ಲೀಸ್ ಪ್ರಕ್ರಿಯೆಗೆ ಕೇಂದ್ರ ತಕರಾರು ತೆಗೆದಿದೆ. ಕೇಂದ್ರ ಸರ್ಕಾರದ ಭಾರೀ ಕೈಗಾರಿಕಾ ಇಲಾಖೆ ಮೂಲಕ ಓಪೆಕ್ಸ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ರಾಜ್ಯ ಸರ್ಕಾರಕ್ಕೆಆರ್ಥಿಕ ಪ್ರೋತ್ಸಾಹ ಒದಗಿಸಲಿದೆ. ಫೇಮ್-2 ಯೋಜನೆ ಅಡಿಯಲ್ಲಿ ಬೃಹತ್ ಕೈಗಾರಿಕೆ ಇಲಾಖೆ ಪ್ರತಿ ಬಸ್‌ಗೆ 55 ಲಕ್ಷ ಪ್ರೋತ್ಸಾಹ ಧನವನ್ನು ನೀಡಲಿದೆ.

ಬೆಂಗಳೂರು ರಸ್ತೆಗಿಳಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್; ವಿಶೇಷತೆಗಳು

ಕೇಂದ್ರ ಸರ್ಕಾರ 300 ಎಲೆಕ್ಟ್ರಿಕ್ ಬಸ್‌ಗಳಿಗೆ ಫೇಮ್ 2 ಯೋಜನೆಯಡಿ ಮಂಜೂರಾತಿ ನೀಡಿದ್ದು, ಕರ್ನಾಟಕ ಸರ್ಕಾರ 2020-21 ನೇ ಸಾಲಿನ ಆಯವ್ಯಯದಲ್ಲಿ ಫೇಮ್ - 2 ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ಸಗಳನ್ನು ಜಿಸಿಸಿ ಆಧಾರದ ಮೇಲೆ 500 ಬಸ್ಸುಗಳ ಕಾರ್ಯಾಚರಣೆಗೆ 100 ಕೋಟಿ ಆರ್ಥಿಕ ಸಹಾಯ ನೀಡಲು ಅನುಮೋದನೆ ನೀಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಗುರುವಾರ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿದರು.

ಬಳಕೆಗೂ ಮುನ್ನ ಲಭ್ಯತೆ ಆಯ್ಕೆ ಮತ್ತು ತಂತ್ರಜ್ಞಾನದ ಅರಿವಿಗೆ ಅನುವಾಗುವಂತೆ ಹವಾನಿಯಂತ್ರಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಭಾರೀ ಕೈಗಾರಿಕೆ ಇಲಾಖೆಯ ಮೂಲಕ ಒಪೆಕ್ಸ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ನಿಯೋಜಿಸಲು ರಾಜ್ಯ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಒದಗಿಸಲು ಫೇಮ್-2 ಬೇಡಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಭಾರೀ ಕೈಗಾರಿಕಾ ಇಲಾಖೆಯು ಒಂದು ಬಸ್ಸಿಗೆ 55 ಲಕ್ಷ ರೂ.ಗಳಷ್ಟು ಪ್ರೋತ್ಸಾಹ ಧನ ನೀಡಲಿದೆ.

ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಇಲಾಖೆಯು ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ ಗಳನ್ನು ಕಾರ್ಯಾಚರಣೆ ವೆಚ್ಚದ ಆಧಾರದ ಮೇಲೆ ಫೇಮ್ -2ಯೋಜನೆಯಡಿಯಲ್ಲಿ ಮಂಜೂರಾತಿ ನೀಡಿದೆ. ರಾಜ್ಯ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಫೇಮ್ 2 ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು 500 ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ನೀಡಲು ಅನುಮೋದನೆ ನೀಡಿದೆ ಎಂದರು.

ಸಿಎಂವಿಆರ್ ನಿಬಂಧನೆಗಳಿಗೆ ಅನುಗುಣವಾಗಿ ನಿರ್ಮಾಣವಾಗಿರುವ ಓಲೆಕ್ಟಾ ಮೊಬೈಲ್‌ಗಳ ಚಾರ್ಜಿಂಗ್‌ಗೆ ಯೂಎಸ್‌ಬಿ ಚಾರ್ಜಿಂಗ್ ಅವಕಾಶ, ಎಮೆರ್ಜೆನ್ಸಿ ಅಲಾರಾಮ್, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜಿನ ಸುತ್ತಿಗೆಗಳು, ತುರ್ತು ನಿರ್ಗಮನಕ್ಕೆ ಅವಕಾಶ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆಯೊಂದಿಗಿನ ಹೈಟೆಕ್ ಬಸ್ ಆಗಿದೆ.

ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಬ್ಯಾಟರಿ ತಂತ್ರಜ್ಞಾನ ಹೊರತಾಗಿ ಸಂಪೂರ್ಣ ದೇಶಿಯವಾಗಿ ನಿರ್ಮಿತವಾಗಿರುವ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್ ಹೊಂದಿದೆ ಮತ್ತು ಟ್ರಾಕ್ಷನ್ ಬ್ಯಾಟರಿಯ ಕೂಲೆಂಟ್ ಮೆಕಾನಿಸಂ ಹೊಂದಿರುವ ಲಿ-ಅಯಾನ್‌ದಾಗಿದೆ. ಇದರಿಂದ ಬ್ಯಾಟರಿ ತಾಪಮಾನ ನಿಯಂತ್ರಿಸುವ ಮೂಲಕ ಹೆಚ್ಚಿನ ಮೈಲೇಜ್ ಸಾಧ್ಯವಾಗಲಿದೆ.

ಬಿಎಂಟಿಸಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿರುವ ಈ ಎಲೆಕ್ಟ್ರಿಕ್ ಬಸ್ ಪ್ರತಿ ಕಿಮೀಗೆ 1.2ರಿಂದ 1.4 ಕೆಡಬ್ಲ್ಯುಹೆಚ್ ವಿದ್ಯುತ್‌ಚ್ಛಕ್ತಿ ಬಳಸಿಕೊಳ್ಳಲಿದೆ, 2ರಿಂದ 3 ಗಂಟೆಯೊಳಗೆ ಫಾಸ್ಟ್ ಚಾರ್ಜಿಂಗ್ ಮೂಲಕ ಬಸ್ ನಿಗದಿತ ಕಿ.ಮೀ. ಸಂಚರಿಸಲಿದೆ.

ಈ ನಗರಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಿಗಾಗಿ 19 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಕಳೆದ ಎರಡು ವರ್ಷಗಳಿಂದ ಸತತ ಸಂಚರಿಸುತ್ತಿರುವ 300 ಓಲೆಕ್ಟಾ ಎಲೆಕ್ಟ್ರಿಕ್ ಬಸ್‌ಗಳು ಈವರೆಗೆ 3 ಕೋಟಿ ಕೀ.ಮೀ.ಗಳ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿರುವುದು ಓಲೆಕ್ಟ್ರಾದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

English summary
The Bangalore Metropolitan Transport Corporation (BMTC) has started trial runs for electric-bus for the second time after a gap of over six years. A Hyderabad-based company has provided a 12 meter long AC e-bus for the trial run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X