ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?

|
Google Oneindia Kannada News

ಬೆಂಗಳೂರು, ಮೇ 17: ಬೆಂಗಳೂರಿನ ಬಿಎಂಟಿಸಿ ಬಸ್‌ ನಿಲ್ದಾಣಗಳು ಇನ್ನುಮುಂದೆ ಸ್ಮಾರ್ಟ್‌ ಆಗಲಿವೆ. ಬಸ್‌ ನಿಲ್ದಾಣಗಳಲ್ಲಿ ದೊಡ್ಡ ಎಲ್‌ಇಡಿ ಪರದೆ, ಡಸ್ಟ್‌ಬಿನ್‌ಗಳು ಇರಲಿವೆ.

ನಗರದ ಒಟ್ಟು 12 ಕಡೆಗಳಲ್ಲಿ ಡಿಜಿಟಲ್ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ಸೈನ್‌ಪೋಸ್ಟ್ ಜೊತೆಗೆ ಬಿಬಿಎಂಪಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಈಗಿರುವ ಬಸ್‌ ನಿಲ್ದಾಣವನ್ನು ಸ್ಮಾರ್ಟ್ ನಿಲ್ದಾಣವನ್ನಾಗಿ ಬದಲಾಯಿಸಲು ಹೊರಟಿದೆ. ಖಾಸಗಿ ಸಹಭಾಗಿತ್ವದಲ್ಲಿ ಒಟ್ಟು 12 ಬಸ್‌ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದೆ.

BMTC smart shelter project will start soon

ಮೊದಲ ಬಸ್‌ ನಿಲ್ದಾಣವು ವಿಧಾನಸೌಧದ ಮುಂಭಾಗ ನಿರ್ಮಾಣಗೊಳ್ಳುತ್ತಿದೆ. ಹಾಗೆಯೇ ಇನ್ನೂ ಎರಡು ನಿಲ್ದಾಣಗಳು ಕೂಡ ಅಲ್ಲಿಯೇ ನಿರ್ಮಾಣವಾಗಲಿವೆ.

ನಿಲ್ದಾಣದಲ್ಲಿ 25/5 ಎಲ್‌ಇಡಿ ಪರದೆಗಳು, ಕಂಬಿಗಳು, ಡಸ್ಟ್ಬನ್‌ಗಳು, ಸ್ಟೀಲ್ ಶೀಟ್‌ಗಳು, ವಿಕಲಾಂಗಚೇತನರಿಗೆ ಸುಲಭವಾಗಿ ನಿಲ್ದಾಣಕ್ಕೆ ಬರಲು ರಾಂಪ್ ವ್ಯವಸ್ಥೆಯೂ ಕೂಡ ಇರಲಿದೆ.

ಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ

ಈ ನಿಲ್ದಾಣಗಳು ಪರಮುಖವಾಗಿ ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ ಇನ್ನಿತರೆ ಟೆಂಡರ್ ಶ್ಯೂರ್ ರಸ್ತೆಯಲ್ಲಿ ನಿರ್ಮಿಸಲಾಗುತ್ತದೆ.
ಒಟ್ಟು 12 ಕಡೆ ನಿಲ್ದಾಣ ಎಲ್ಲೆಲ್ಲಿ?
-ವಿಧಾನಸೌಧ
-ವಿಟ್ಟಲ್ ಮಲ್ಯ ರಸ್ತೆ
-ಬಸವ ವೃತ್ತ, ಚಾಲುಕ್ಯ ವೃತ್ತ
-ರೆಸಿಡೆನ್ಸಿ ವೃತ್ತ
- ಸೇಂಟ್‌ ಮಾರ್ಕ್ಸ ರಸ್ತೆ, ಬೌರಿಂಗ್ ಕ್ಲಬ್ ಹತ್ತಿರ
-ಇಂದಿರಾನಗರ 100 ಅಡಿ ರಸ್ತೆ
-ಕೋರಮಂಗಲ 1ನೇ ಬ್ಲಾಕ್
-ಎಚ್‌ಎಸ್‌ಆರ್ ಲೇಔಟ್‌, ನಂದಿನಿ ಬೂತ್
-ಕನ್ನಿಂಗ್‌ಹ್ಯಾಮ್ ರಸ್ತೆ
-ಮೌಂಟ್ ಕಾರ್ಮೆಲ್ ಕಾಲೇಜು
-ಮಲ್ಲೇಶ್ವರಂ ವೃತ್ತ, ಕೆಸಿ ಜನರಲ್ ಆಸ್ಪತ್ರೆ ಬಳಿ ನಿರ್ಮಾಣವಾಗಲಿದೆ.

English summary
City’s bus shelters are going to get smarter. Under its agreement with signpost , the agency that is building bus shelters, BBMP change has change the design and make them Smart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X