ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಪ್ರತ್ಯೇಕ ಬಸ್ ಪಥ ವಿಳಂಬ, 15ರಿಂದ ಪ್ರಾಯೋಗಿಕ ಸಂಚಾರ

|
Google Oneindia Kannada News

ಬೆಂಗಳೂರು, ನವೆಂಬರ್ 1: ಬಿಎಂಟಿಸಿ ಪ್ರತ್ಯೇಕ ಬಸ್ ಪಥ ವಿಳಂಬವಾಗಿದ್ದು, ನವೆಂಬರ್ 15ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಕೆ.ಆರ್. ಪುರಂನ ಟಿನ್‌ಫ್ಯಾಕ್ಟರಿ -ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಪಥ ಕಾಮಗಾರಿ ವಿಳಂಬವಾಗಿರುವುದರಿಂದ ಪ್ರಾಯೋಗಿಕ ಕಾರ್ಯಾಚರಣೆ ನವೆಂಬರ್ ಒಂದರ ಬದಲು ನವೆಂಬರ್ 15ರಿಂದ ಆರಂಭಿಸಲು ನಿರ್ಧರಿಸಲಾಗಿದೆ.

ಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆ

ಕೆ.ಆರ್.ಪುರ ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 18 ಕಿ.ಮೀ ಗಳ ಪೈಕಿ ನವೆಂಬರ್ 1ರ ವೇಳೆಗೆ 10 ಕಿ.ಮೀ ಪ್ರತ್ಯೇಕ ಪಥ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಬುಲ್ಲಾರ್ಡ್ ಅಳವಡಿಕೆ ವಿಳಂಬವಾಗುತ್ತಿದೆ.

BMTC Separate Bus Lane Delay

ಹಾಗಾಗಿ ನಿಗದಿತ ಅವಧಿಯಲ್ಲಿ 10 ಕಿ.ಮೀ ಪ್ರತ್ಯೇಕ ಪಥ ನಿರ್ಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ. ನವೆಂಬರ್ 15ರ ಹೊತ್ತಿಗೆ 10 ಕಿ.ಮೀ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ 6 ಕಿ.ಮೀ ಉದ್ದದ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಬಸ್‌ಗಳ ಜೊತೆಗೆ ಖಾಸಗಿ ವಾಹನಗಳು ಸಂಚರಿಸುತ್ತವೆ. ಜೊತೆಗೆ ಮಳೆಯಿದ್ದ ಕಾರಣ ಮಾರ್ಕಿಂಗ್ ಮಾಡುವುದಕ್ಕೆ ಸಾಧ್ಯವಾಗಿಲ್ಲ.

ಹೀಗಾಗಿ ಬಸ್‌ ಪಥಕ್ಕಾಗಿ ಅಳವಡಿಸಬೇಕಿದ್ದ ಬುಲ್ಲಾರ್ಡ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಸ್ ಪಥ ಯೋಜನೆ ನಿಗದಿತ ಅವಧಿಯಲ್ಲಿ ಆರಂಭಿಸಲು ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ.

English summary
BMTC has delayed the separate bus lane and the trial will start from November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X