ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ ತಿಂಗಳಿನಲ್ಲಿ ಬಿಎಂಟಿಸಿ ಇ ಬಸ್ ಸೇವೆ ಆರಂಭ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಗುತ್ತಿಗೆ ಆಧಾರದ ಮೇಲೆ ಬಸ್ ಸಂಚಾರ ಆರಂಭವಾಗಲಿದೆ.

ಮೊದಲ ಹಂತದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 80 ಎಲೆಕ್ಟ್ರಿಕ್ ಬಸ್‌ಗಳು ಉದ್ಯಾನ ನಗರಿ ಬೆಂಗಳೂರಿನ ರಸ್ತೆಗೆ ಇಳಿಯಲಿವೆ. ಈ ಪೈಕಿ 60 ಎಸಿ ಬಸ್ ಹಾಗೂ 20 ನಾನ್ ಎಸಿ ಬಸ್ ಗಳು ಸಂಚರಿಸಲಿವೆ. ಇ ಬಸ್ ಸಂಚಾರಕ್ಕಾಗಿ ಕೇಂದ್ರ ಸರ್ಕಾರದಿಂದ 74 ಕೋಟಿ ರು ಸಿಕ್ಕಿದೆ. ಈ ಪೈಕಿ 14 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳುಬೆಂಗಳೂರು: ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ನೂರಾರು ವಿಘ್ನಗಳು

ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿಗೆ ಗುತ್ತಿಗೆ ಸಿಕ್ಕಿದ್ದು, 150 ಬಸ್ ಗಳನ್ನು ನಿರ್ಮಿಸಿ, ಬಿಎಂಟಿಸಿಗೆ ನೀಡಲಿದೆ. ಗುತ್ತಿಗೆ ಪಡೆದ ಗೋಲ್ಡ್‌ಸ್ಟೋನ್‌ ಕಂಪನಿ ಫೈನಾನ್ಸಿಯಲ್‌ ಬಿಡ್‌ನಲ್ಲಿ 12 ಮೀಟರ್ ಉದ್ದದ 35 ಸೀಟುಗಳ ಬಸ್‌ಗೆ ಪ್ರತಿ ಕಿ.ಮೀಗೆ 37.5 ರೂ. ಬಿಡ್ ಮಾಡಿತ್ತು.

BMTCs electric buses to hit roads in October

ಎಲೆಕ್ಟ್ರಿಕ್‌ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ನೀಡಿಲ್ಲ.

Faster Adoption and Manufacturing of Electric Vehicles India (FAME India) ಅಡಿಯಲ್ಲಿ ಪ್ರತಿ ಬಸ್ ಮೇಲೆ 1 ಕೋಟಿ ರು ಸಬ್ಸಿಡಿಗಾಗಿ ಸಾರಿಗೆ ನಿಗಮ ಮನವಿ ಮಾಡಿತ್ತು. ಆದರೆ, 1 ಕೋಟಿ ರು ಎಸಿ ಬಸ್ ಗಳಿಗೆ ಹಾಗೂ ನಾನ್ ಎಸಿ ಬಸ್ ಗಳಿಗೆ 73 ಲಕ್ಷ ರು ಸಿಗಲಿದೆ.

ಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಎಲೆಕ್ಟ್ರಿಕ್‌ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ.

ಈಗಿರುವ ಬಿಎಂಟಿಸಿಯ ಹವಾನಿಯಂತ್ರಿತ ಮಾದರಿ ಬಸ್‌ಗಳ ಪ್ರಯಾಣದರವೇ ಇರುತ್ತದೆ. ಈ ಬಸ್ ಗಳಿಂದ ಸಾರಿಗೆ ಸಂಸ್ಥೆಗೆ ಉಳಿತಾಯವಾಗುವುದಲ್ಲದೆ, ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.

ಎಚ್ ಎಸ್ ಆರ್ ಲೇ ಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಬಸ್ ಚಾರ್ಜಿಂಗ್ ಪಾಯಿಂಟ್ ಇರಿಸಲಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಒಂದು ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತದೆ. ಮೊದಲ ಹಂತದ ಬಳಿಕ 500 ಬಸ್ ಗಳಿಗೆ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ.

English summary
The Centre has finally cleared subsidies for the city's e-buses project, bringing the Bangalore Metropolitan Transport Corporation (BMTC) a step closer to its ambitious plan of plying electric buses on the city’s roads. The first phase of this innovative transport initiative will see the introduction of 80 e-buses as early as this October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X