ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ ಮಾರ್ಕೆಟ್ ಬಳಿ, ವೃದ್ಧೆಯ ಕಾಲ ಮೇಲೆ ಹರಿದ ಬಿಎಂಟಿಸಿ ಬಸ್

|
Google Oneindia Kannada News

ಬೆಂಗಳೂರು, ಜನವರಿ 9: ಬಿಎಂಟಿಸಿ ಚಾಲಕರ ಅವಾಂತರ ನಗರದಲ್ಲಿ ಮುಂದುವರೆದಿದೆ.ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಕಂಗಾಲಾಗಿರುವ ಬೆನ್ನಲ್ಲೇ ಕೆಆರ್‌ ಮಾರುಕಟ್ಟೆ ಬಿಎಂಟಿಸಿ ನಿಲ್ದಾಣದಲ್ಲಿ ಅವಗಢವೊಂದು ಸಂಭವಿಸಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ನಿಲ್ದಾಣದಿಂದ ಬಸ್‌ನ್ನು ಹೊರ ತೆಗೆಯುತ್ತಿರುವಾಗ ಅಲ್ಲೇ ಕುಳಿತಿದ್ದ ವೃದ್ಧೆಯ ಕಾಲಿನ ಮೇಲೆ ಬಸ್ ಹರಿದಿದೆ. ಇದರಿಂದ ವೃದ್ಧೆ ತೀವ್ರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆಯ ಜೀವಕ್ಕೇ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ವೃದ್ಧೆ ತೀವ್ರ ಗಾಯಗೊಂಡಿರುವುದು ಖಚಿತವಾಗಿದೆ.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ನಿಲ್ದಾಣದಲ್ಲಿ ಹಾಜರಿದ್ದ ಇತರೆ ಪ್ರಯಾಣಿಕರು ಚಾಲಕನ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃದ್ಧೆಯ ಕಾಲ ಮೇಲೆ ಬಸ್‌ ಹರಿಯುತ್ತಿದ್ದಂತೆ ಬಿಎಂಟಿಸಿ ಬಸ್ ಚಾಲಕ ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ, ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ.

BMTC rushed on Old woman in KR Market

ಇನ್ನು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿರುವ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮೆಜೆಸ್ಟಿಕ್‌ಗೆ ಬಂದ ಪ್ರಯಾಣಿಕರು ಪರದಾಡುವಂತಾಗಿದೆ.

English summary
BMTC bua rushed on old woman in KR Market bus stand, she has been hospitalised by the localites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X