ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ವಾಪಸ್ ಪಡೆದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜೂನ್ 16 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆಯನ್ನು ವಾಪಸ್ ಪಡೆದಿದೆ. 2018-19ನೇ ಸಾಲಿನಲ್ಲಿದ್ದ ಪಾಸುಗಳ ದರವೇ ಮುಂದುವರೆಯಲಿದೆ ಎಂದು ಸಂಸ್ಥೆ ಹೇಳಿದೆ.

ವಿದ್ಯಾರ್ಥಿಗಳ ಬಸ್ ಪಾಸ್‌ ದರವನ್ನು ಹೆಚ್ಚಳ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿತ್ತು. ಆದರೆ, ಕೆಎಸ್ಆರ್‌ಟಿಸಿ ಬಸ್ ಪಾಸ್ ದರ ಏರಿಕೆ ಮಾಡದ ಹಿನ್ನಲೆಯಲ್ಲಿ ಬಿಎಂಟಿಸಿ ಸಹ ತನ್ನ ಆದೇಶವನ್ನು ಶನಿವಾರ ವಾಪಸ್ ಪಡೆದಿದೆ.

ವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿ

ಸಾರಿಗೆ ಇಲಾಖೆಯಿಂದ ಮಾಹಿತಿ ಬಂದ ಹಿನ್ನಲೆಯಲ್ಲಿ ಬಸ್ ಪಾಸ್ ದರ ಏರಿಕೆಯನ್ನು ವಾಪಸ್ ಪಡೆದಿದೆ. ಕಳೆದ ವರ್ಷದ ದರವೇ ಮುಂದುವರೆಯಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್ ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ಇಲ್ಲಕೆಎಸ್ ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ಇಲ್ಲ

BMTC roll back the student bus pass fare hike

ಬಿಎಂಟಿಸಿ ಬಸ್ ಪಾಸ್ ದರ ಏರಿಕೆ ಮಾಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಬಸ್‌ಗಳ ದರ 100 ರಿಂದ 200 ರೂ.ಗೆ ಏರಿಕೆಯಾಗಿತ್ತು. ಬಸ್ ಪಾಸ್ ದರ ಏರಿಕೆ ವಾಪಸ್ ಪಡೆದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?

ವಿದ್ಯಾರ್ಥಿ ಬಸ್ ಪಾಸುಗಳಿಗೆ ಅರ್ಜಿಗಳನ್ನು ಬಿಎಂಟಿಸಿ ಸ್ವೀಕಾರ ಮಾಡುತ್ತಿದ್ದು, ಮುಂದಿನ ವಾರ ಪಾಸು ವಿತರಣೆಯನ್ನು ಆರಂಭಿಸಲಿದೆ. ಕಳೆದ ವರ್ಷ 3.5 ಲಕ್ಷ ವಿದ್ಯಾರ್ಥಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿತ್ತು. ಈ ವರ್ಷ ಅವುಗಳನ್ನು ನವೀಕರಣ ಮಾಡಲಾಗುತ್ತದೆ.

ವಿದ್ಯಾರ್ಥಿ ಸ್ಮಾರ್ಟ್‌ ಕಾರ್ಡ್ ವಿತರಣೆ ಮಾಡಲು ಬೆಂಗಳೂರಿನಲ್ಲಿ 90 ಕೌಂಟರ್‌ಗಳನ್ನು ಬಿಎಂಟಿಸಿ ತೆರಯಲಿದೆ. ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಟಿಟಿಎಂಸಿ ನಿಲ್ದಾಣದಲ್ಲಿ ಕೌಂಟರ್ ಕಾರ್ಯ ನಿರ್ವಹಣೆ ಮಾಡಲಿದೆ. ಮೆಜೆಸ್ಟಿಕ್‌ನಲ್ಲಿಯೇ 12 ಕೇಂದ್ರ ತೆರೆಯಲಾಗುತ್ತದೆ.

English summary
Bangalore Metropolitan Transport Corporation (BMTC) roll back the hike in student bus pass rates. Student bus pass rates will now be the same as last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X