ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾತ್ರಿ ಬಸ್ ಸಂಚಾರ ಆರಂಭಿಸಿದ ಬಿಎಂಟಿಸಿ; ಮಾರ್ಗದ ವಿವರ

|
Google Oneindia Kannada News

ಬೆಂಗಳೂರು, ನವೆಂಬರ್ 15; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ರಾತ್ರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲು ಆರಂಭಿಸಿದೆ. ಕೋವಿಡ್‌ ಸಂದರ್ಭದಲ್ಲಿ ರಾತ್ರಿ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

ಬಿಎಂಟಿಸಿ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿವಿಧ ಮಾರ್ಗದಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಚಾರ ನಡೆಸಲಿದೆ ಎಂದು ಹೇಳಿದೆ.

ಬೆಂಗಳೂರು; ಬಿಎಂಟಿಸಿಯ ಬಿಎಸ್‌-6 ಬಸ್ ಮೊದಲ ನೋಟ ಬೆಂಗಳೂರು; ಬಿಎಂಟಿಸಿಯ ಬಿಎಸ್‌-6 ಬಸ್ ಮೊದಲ ನೋಟ

ಕೋವಿಡ್ ಲಾಕ್‌ಡೌನ್ ಸಡಿಲಗೊಂಡ ನಂತರದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ಹಾಗೂ ಕೊರೊನಾ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಬಸ್ ಸಂಚಾರ ನಡೆಸುತ್ತಿದೆ.

ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿ ಬಿಎಂಟಿಸಿ ಪಾಸ್ ಪಡೆಯುವುದು ಹೇಗೆ? ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿ ಬಿಎಂಟಿಸಿ ಪಾಸ್ ಪಡೆಯುವುದು ಹೇಗೆ?

 BMTC Resumed Night Bus Service In Bengaluru

ಬಿಎಂಟಿಸಿ ಸಂಸ್ಥೆಯು ನಗರದ ಮತ್ತು ನಗರದ ಹೊರವಲಯ ಪ್ರಯಾಣಿಕರಿಗೆ ರಾತ್ರಿ ಸಾರಿಗೆ ಸೇವೆಯ ಅವಶ್ಯಕತೆಯನ್ನು ಪರಿಗಣಿಸಿ ಸರ್ಕಾರದ ಮಾರ್ಗಸೂಚಿನ್ವಯ ಪ್ರಮುಖ ಬಸ್ ನಿಲ್ದಾಣದಿಂದ ಬಸ್‌ಗಳನ್ನು ಓಡಿಸುತ್ತಿದೆ.

ಬಿಎಂಟಿಸಿ ದುರಾಳ ನೀತಿಯಿಂದ ಇಕ್ಕಟ್ಟಿಗೆ ಸಿಲುಕಿದ ಚಾಲಕ ಮತ್ತು ನಿರ್ವಾಹಕರು!ಬಿಎಂಟಿಸಿ ದುರಾಳ ನೀತಿಯಿಂದ ಇಕ್ಕಟ್ಟಿಗೆ ಸಿಲುಕಿದ ಚಾಲಕ ಮತ್ತು ನಿರ್ವಾಹಕರು!

48 ಮಾರ್ಗಗಳಲ್ಲಿ ಒಟ್ಟು 70 ಸಾರಿಗೆಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಮಾರ್ಗಗಳ ವಿವರಗಳನ್ನು ಸಹ ಬಿಎಂಟಿಸಿ ಬಿಡುಗಡೆ ಮಾಡಿದೆ.

ಕೋವಿಡ್‌-19 ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಸೋಂಕು ಹರಡುವಿಕೆ ತಡೆಯಲು ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿತ್ತು. ಆದ್ದರಿಂದ ರಾತ್ರಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಬಿಎಂಟಿಸಿ ಕೋವಿಡ್ ಪರಿಸ್ಥಿತಿಗೂ ಮೊದಲು 130 ಬಸ್‌ಗಳನ್ನು ರಾತ್ರಿ ಪಾಳಿಯಲ್ಲಿ ಓಡಿಸುತ್ತಿತ್ತು. ಈಗಲೂ ಸಹ ಬಸ್ ಸಂಚಾರವನ್ನು ಹಂತ-ಹಂತವಾಗಿ ಹೆಚ್ಚಳ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾತ್ರಿ ಸಂಚಾರ ನಡೆಸುವ ಬಸ್‌ಗಳಲ್ಲಿ ಹಲವು ಬಸ್ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಚಾರ ನಡೆಸುತ್ತವೆ. ರಾತ್ರಿ ಪಾಳಯದ ಬಸ್‌ಗಳಲ್ಲಿ ಸಂಚಾರ ನಡೆಸುವಾಗ 1.5ರಷ್ಟು ಹೆಚ್ಚಿನ ದರವನ್ನು ನೀಡಬೇಕಿದೆ.

ಪ್ರಸ್ತುತ ಬಿಎಂಟಿಸಿ ನಗರದಲ್ಲಿ 5,200 ಬಸ್‌ಗಳನ್ನು ಓಡಿಸುತ್ತಿದೆ. ಸುಮಾರು ಆರು ತಿಂಗಳ ಬಳಿಕ ಸಂಸ್ಥೆ ಎಸಿ ಬಸ್‌ಗಳ ಸಂಚಾರವನ್ನು ಸಹ ನಗರದಲ್ಲಿ ಆರಂಭಿಸಿದೆ.

ಮೆಜೆಸ್ಟಿಕ್‌ನಿಂದ ಸಂಚಾರ ನಡೆಸುವ ಬಸ್‌ಗಳು; ಕೆಂಪೇಗೌಡ ಬಸ್ ನಿಲ್ದಾಣ-ಬನಶಂಕರಿ, ಕೆಂಪೇಗೌಡ ಬಸ್ ನಿಲ್ದಾಣ-ಎಜಿಎಸ್ ಲೇಔಟ್, ಕೆಂಪೇಗೌಡ ಬಸ್ ನಿಲ್ದಾಣ-ಸುಲ್ತಾನ್ ಪಾಳ್ಯ, ಕೆಂಪೇಗೌಡ ಬಸ್ ನಿಲ್ದಾಣ-ಉತ್ತರಹಳ್ಳಿ, ಕೆಂಪೇಗೌಡ ಬಸ್ ನಿಲ್ದಾಣ-ಜಂಬೂಸವಾರಿ ದಿಣ್ಣೆ, ಕೆಂಪೇಗೌಡ ಬಸ್ ನಿಲ್ದಾಣ-ಅಂಜನಾಪುರ, ಕೆಂಪೇಗೌಡ ಬಸ್ ನಿಲ್ದಾಣ-ಕೆಂಗೇರಿ ಸ್ಯಾಟಲೈಟ್ ಟೌನ್, ಕೆಂಪೇಗೌಡ ಬಸ್ ನಿಲ್ದಾಣ-ದೊಡ್ಡ ಬಸ್ತಿ, ಕೆಂಪೇಗೌಡ ಬಸ್ ನಿಲ್ದಾಣ- ಬಿಎಂಇಎಲ್ ಲೇಔಟ್ 5ನೇ ಹಂತ, ಕೆಂಪೇಗೌಡ ಬಸ್ ನಿಲ್ದಾಣ-ಬಿಡದಿ, ಕೆಂಪೇಗೌಡ ಬಸ್ ನಿಲ್ದಾಣ-ಬೆಂಗಳೂರು ವಿಶ್ವವಿದ್ಯಾಲಯ/ ಆಡಳಿತ ಕಚೇರಿ.

ಕೆಂಪೇಗೌಡ ಬಸ್ ನಿಲ್ದಾಣ-ತಾವರೆಕೆರೆ, ಕೆಂಪೇಗೌಡ ಬಸ್ ನಿಲ್ದಾಣ-ಚಿಕ್ಕಬಣಾವರ, ಕೆಂಪೇಗೌಡ ಬಸ್ ನಿಲ್ದಾಣ-ಪೀಣ್ಯ 2ನೇ ಹಂತ, ಕೆಂಪೇಗೌಡ ಬಸ್ ನಿಲ್ದಾಣ-ಲಗ್ಗೆರೆ, ಕೆಂಪೇಗೌಡ ಬಸ್ ನಿಲ್ದಾಣ-ನೆಲಮಂಗಲ, ಕೆಂಪೇಗೌಡ ಬಸ್ ನಿಲ್ದಾಣ-ಪೀಣ್ಯ 2ನೇ ಹಂತ, ಕೆಂಪೇಗೌಡ ಬಸ್ ನಿಲ್ದಾಣ-ಯಲಹಂಕ, ಕೆಂಪೇಗೌಡ ಬಸ್ ನಿಲ್ದಾಣ-ದೊಡ್ಡಬಳ್ಳಾಪುರ, ಕೆಂಪೇಗೌಡ ಬಸ್ ನಿಲ್ದಾಣ-ಥಣಿಸಂದ್ರ, ಕೆಂಪೇಗೌಡ ಬಸ್ ನಿಲ್ದಾಣ-ದೇವನಹಳ್ಳಿ, ಕೆಂಪೇಗೌಡ ಬಸ್ ನಿಲ್ದಾಣ-ಸರ್ಜಾಪುರ, ಕೆಂಪೇಗೌಡ ಬಸ್ ನಿಲ್ದಾಣ-ಅತ್ತಿಬೆಲೆ, ಕೆಂಪೇಗೌಡ ಬಸ್ ನಿಲ್ದಾಣ-ಆನೇಕಲ್.

ಕೆಂಪೇಗೌಡ ಬಸ್ ನಿಲ್ದಾಣ-ಬನ್ನೇರುಘಟ್ಟ ಮೃಗಾಲಯ, ಕೆಂಪೇಗೌಡ ಬಸ್ ನಿಲ್ದಾಣ-ಜಿಗಣಿ ಎಪಿಸಿ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ-ಹೊಸಕೋಟೆ, ಕೆಂಪೇಗೌಡ ಬಸ್ ನಿಲ್ದಾಣ-ಕಾಡುಗೋಡಿ, ಕೆಂಪೇಗೌಡ ಬಸ್ ನಿಲ್ದಾಣ-ಅತ್ತಿಬೆಲೆ, ಕೆಂಪೇಗೌಡ ಬಸ್ ನಿಲ್ದಾಣ-ಜನಪ್ರಿಯ ಟೌನ್‌ ಶಿಪ್.

ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿ ಬನಶಂಕರಿ ಟಿಟಿಎಂಸಿ, ಹೆಬ್ಬಾಳ, ಯಲಹಂಕ, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ ಟಿಟಿಎಂಸಿ, ಕೆ. ಆರ್. ಮಾರುಕಟ್ಟೆಯಿಂದಲೂ ವಿವಿಧ ಸ್ಥಳಗಳಿಗೆ ಬಸ್‌ಗಳು ಸಂಚಾರ ನಡೆಸಲಿವೆ.

Recommended Video

ಡಾ.ಸುಧಾಕರ್ ರಾಂಗ್ ಟ್ರೀಟ್ ಮೆಂಟ್ ನಿಂದ ಬಿಜೆಪಿಗೆ ಭಾರಿ ಮುಜುಗರ | Oneindia Kannada

English summary
After 20 months Bangalore Metropolitan Transport Corporation (BMTC) resumed its night service buses from November 14, 2021. Here are the bus route details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X