ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ದರ ಇಳಿಕೆ

By Nayana
|
Google Oneindia Kannada News

ಬೆಂಗಳೂರು, ಜು.30: ಬಿಎಂಟಿಸಿ ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸುವ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಬಾಡಿಗೆ ದರವನ್ನು ಕಡಿಮೆ ಮಾಡಿದೆ. ಪರಿಷ್ಕೃತ ದರ ಆ.1ರಿಂದ ಜಾರಿಗೆ ಬರಲಿದೆ.

ಪ್ರವಾಸ, ಮದುವೆ ಇನ್ನಿತರೆ ಉದ್ದೇಶಗಳಿಗೆ ವೋಲ್ವೊ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ಕಿಮೀಗೆ 7ರಿಂದ 12 ರೂ ವರೆಗೆ ದರ ಕಡಿಮೆ ಮಾಡಿದೆ. ವೋಲ್ವೋ ವಾಹನಗಳ ಬಾಡಿಗೆ ದರಗಳನ್ನು ಕಡಿಮೆ ಮಾಡಿ, ವಾರದ ದಿನಗಳು ಮತ್ತು ವಾರಾಂತ್ಯದ ದಿನಗಳಲ್ಲಿ ಪ್ರತ್ಯೇಕ ದರ ವಿಧಿಸಲು ತೀರ್ಮಾನಿಸಲಾಗಿದೆ.

ಬಿಎಂಟಿಸಿ ವಜ್ರ ಪ್ರಯಾಣ ದರ ಶೇ 16.89ರಷ್ಟು ಹೆಚ್ಚಳಬಿಎಂಟಿಸಿ ವಜ್ರ ಪ್ರಯಾಣ ದರ ಶೇ 16.89ರಷ್ಟು ಹೆಚ್ಚಳ

ನಿಗಮದ ಬಳಿ 700ಕ್ಕೂ ಅಧಿಕ ಹವಾನಿಯಂತ್ರಿತ ಬಸ್‌ಗಳಿವೆ ಎಲೆಕ್ಟ್ರಾನಿಕ್ ಸಿಟಿ, ಹೊರ ವರ್ತುಲ ರಸ್ತೆ ಹೊರತುಪಡಿಸಿ ಇತರೆ ಮಾರ್ಗಗಳಲ್ಲಿ ಎಸಿ ಬಸ್‌ನಿಂದ ಆದಾಯ ನಿಗಮಕ್ಕೆ ಬರುತ್ತಿಲ್ಲ, ಈ ಬಸ್‌ಗಳಿಂದ 2016-17ರಲ್ಲಿ ಬಿಎಂಟಿಸಿಗೆ 5,721 ಲಕ್ಷ ನಷ್ಟವಾಗಿತ್ತು, 2017-18ರಲ್ಲಿ 50 ಕೋಟಿಗೂ ಅಧಿಕ ನಷ್ಟವಾಗಿದೆ. ಪ್ರಸ್ತುತ ಪ್ರತಿ ಕಿ.ಮೀಗೆ 79.90ರೂ. ವೆಚ್ಚವಾಗುತ್ತಿದ್ದು, ಕೇವಲ 65.33 ರೂ. ಆದಾಯ ಬರುತ್ತಿದೆ.

BMTC reduces rent on Volvo bus

ಜನವರಿಯಲ್ಲಿ ಎಸಿ ಬಸ್‌ಗಳ ದರ ಶೇ.37ರಷ್ಟು ಇಳಿಕೆ ಮಾಡಿದರೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ.ಹೆಚ್ಚಿನ ಎಸಿ ಬಸ್‌ಗಳನ್ನು ಹಲವು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಬಾಡಿಗೆ ಪಡೆಯುತ್ತವೆ.

ಎಸಿ ಬಸ್‌ಗಳನ್ನು ಜನರಿಗಾಗಿ ಓಡಿಸುವದಕ್ಕಿಂತ ಕಂಪನಿಗಳಿಗೆ ಬಾಡಿಗೆ ನೀಡುವುದುರಿಂದ ನಿಶ್ಚಿತ ಆದಾಯ ನಿಗಮಕ್ಕೆ ಬರುತ್ತದೆ. ಮತ್ತಷ್ಟು ಐಟಿ ಕಂಪನಿಗಳನ್ನು ಸೆಳೆಯುವುದು ನಿಗಮದ ಉದ್ದೇಶವಾಗಿದೆ. ಹೀಗಾಗಿ ಬೆಂಗಳೂರು ನಗರ ವ್ಯಾಪ್ತಿಯೊಳಗೆ ಮದುವೆ, ಪ್ರವಾಸ ಹಾಗೂ ಇತರೆ ಕಾರಣಕ್ಕೆ ಬಾಡಿಗೆ ಪಡೆಯುವ ಎಸಿ ಬಸ್‌ ಬಾಡಿಗೆ ದರವನ್ನು ಕಡಿತಗೊಳಿಸಿದೆ.

12 ಗಂಟೆಗೆ (175 ಕಿ.ಮೀ) 12,600 ರೂ. ಪಡೆಯಲಾಗುತ್ತಿತ್ತು, ವಾರಾಂತ್ಯದಲ್ಲಿ 12 ಗಂಟೆಗೆ(150 ಕಿ.ಮೀ) 9 ಸಾವಿರ ರೂ ನಿಗದಿಪಡಿಸಲಾಗಿದೆ.

English summary
BMTC has decided to reduce rent fare on Volvo bus from Rs.7 to Rs.12 per kilometer in casual contract system to promote state owned transport service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X