ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ, ಕೆಎಸ್‌ಆರ್‌‌ಟಿಸಿ

By Ashwath
|
Google Oneindia Kannada News

ಬೆಂಗಳೂರು, ಆ.4:ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳು ಲಾಭಗಳಿಸಿದೆ.

ಆ.4. ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವಿಷಯವನ್ನು ಬಹಿರಂಗಪಡಿಸಿದ್ದು ಬಿಎಂಟಿಸಿ 15 ಕೋಟಿ ರೂ. ಹಾಗೂ ಕೆಎಸ್‌ಆರ್‌ಟಿಸಿ 11 ಕೋಟಿ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.[ನಷ್ಟದ ಗಾಲಿ ಮೇಲೆ ಓಡುತ್ತಿದೆ ಬಿಎಂಟಿಸಿ ಬಸ್!]

ramalinga reddy

ವಾಯುವ್ಯ ಸಾರಿಗೆ 15 ಕೋಟಿ ರೂ. ಲಾಭಗಳಿಸಿದ್ದರೆ, ಈಶಾನ್ಯ ಸಾರಿಗೆ 35 ಕೋಟಿ ರೂ. ಲಾಭ ಗಳಿಸಿದೆ. ಡಿಸೇಲ್‌ ದರ ಪದೇ ಪದೇ ಹೆಚ್ಚಳವಾಗುತ್ತಿರುವುದರಿಂದ ಸದ್ಯಕ್ಕೆ ಪ್ರಯಾಣದ ದರ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.[ಖಾಸಗಿ ಬಸ್ ಗಳಿಂದ ನಷ್ಟವಾಗುತ್ತಿದೆ : ರಾಮಲಿಂಗಾರೆಡ್ಡಿ]

ಬೆಂಗಳೂರಿನಲ್ಲಿ ಸಿಎನ್‌ಜಿ ಆಧಾರಿತ ಬಸ್ ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ ಕೇಳಲಾಗಿದೆ. ಈ ವರ್ಷ 400 ಬಸ್‌ಗಳಿಗೆ ಕೋರಿಕೆ ಸಲ್ಲಿಸಲಾಗಿದ್ದು, ಅನುಮತಿ ಕೊಟ್ಟರೆ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಎಲ್ಲಾ ಬಿಎಂಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

2012-13ನೇ ಸಾಲಿನಲ್ಲಿ ಬಿಎಂಟಿಸಿ 147 ಕೋಟಿ ನಷ್ಟ ಅನುಭವಿಸಿತ್ತು. 2014ರ ಮಾರ್ಚ್‌ ಅಂತ್ಯದ ವರೆಗೆ ಸಂಸ್ಥೆ 140 ಕೋಟಿ ನಷ್ಟ ಅನುಭವಿಸಿದೆ. ಒಟ್ಟಾರೆ ಬಿಎಂಟಿಸಿ 307 ಕೋಟಿ ನಷ್ಟ ಅನುಭವಿಸಿತ್ತು.

ಪ್ರತಿನಿತ್ಯ ಡೀಸೆಲ್‌ ದರಕ್ಕೆ ಬಿಎಂಟಿಸಿ 2.60 ಕೋಟಿ ರೂ. ವೆಚ್ಚ ಮಾಡುತ್ತಿದೆ. 31,000ಕ್ಕೂ ಅಧಿಕ ಸಿಬ್ಬಂದಿ ವೇತನ ಪಾವತಿಗೆ ತಿಂಗಳಿಗೆ 51 ಕೋಟಿ ಮೀಸಲಿಡುತ್ತಿದೆ. ಬಿಡಿಭಾಗಗಳ ಬದಲಾವಣೆ ಸೇರಿ ನಿರ್ವಹಣಾ ವೆಚ್ಚ 15 ಕೋಟಿ ರೂ. ಆಗುತ್ತಿದೆ.

English summary
Karnatka Transport Minster R Ramalinga Reddy said "BMTC record Rs 15 crore and KSRTC 11 crore profit for Q1"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X