ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ; ಬಂತು ಸುತ್ತೋಲೆ

|
Google Oneindia Kannada News

Recommended Video

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ | Oneindia Kannada

ಬೆಂಗಳೂರು, ಸೆಪ್ಟೆಂಬರ್ 20 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರು ಬಸ್‌ಗಳಲ್ಲಿ ಹಾಡು ಕೇಳುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಆಧರಿಸಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಬಂದಿದೆ. ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವಾಗ ಎಫ್‌ಎಂ ಕೇಳುವುದು, ವಿಡಿಯೋ ನೋಡುವುದು, ಸಿನಿಮಾ ನೋಡುವುದು, ಹಾಡು ಕೇಳುವುದು ಸಾಮಾನ್ಯವಾಗಿದೆ. ಆದರೆ, ಇದರಿಂದಾಗಿ ಇತರ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಇನ್ಮುಂದೆ ಬಸ್ ಚಾಲಕರಿಗೂ ಸೀಟ್‌ಬೆಲ್ಟ್ ಕಡ್ಡಾಯ, ಇಲ್ದಿದ್ರೆ ಬೀಳುತ್ತೆ ದಂಡಇನ್ಮುಂದೆ ಬಸ್ ಚಾಲಕರಿಗೂ ಸೀಟ್‌ಬೆಲ್ಟ್ ಕಡ್ಡಾಯ, ಇಲ್ದಿದ್ರೆ ಬೀಳುತ್ತೆ ದಂಡ

ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಮೊಬೈಲ್‌ಗಳಲ್ಲಿ ಲೌಡ್ ಸ್ಪೀಕರ್‌ನಲ್ಲಿ ಹಾಡು ಕೇಳುವಂತಿಲ್ಲ. ಯಾವುದೇ ಕಾರ್ಯಕ್ರಮ ನೋಡುವಂತಿಲ್ಲ ಎಂದು ಬಿಎಂಟಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಮೋಟಾರು ವಾಹನ ನಿಯಮ 1986ರ ಉಲ್ಲಂಘನೆ ಎಂದು ಹೇಳಿದೆ.

ನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆ

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರು ಏನು ಮಾಡಬಾರದು ಎಂದು ಸುತ್ತೋಲೆಯಲ್ಲಿ ವಿವರಣೆಗಳನ್ನು ನೀಡಲಾಗಿದೆ. ಅವರ ವಿವರಗಳು ಚಿತ್ರದಲ್ಲಿವೆ.

ಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶ

ಕಡ್ಡಾಯವಾಗಿ ನಿಷೇಧ

ಕಡ್ಡಾಯವಾಗಿ ನಿಷೇಧ

ಬಿಎಂಟಿಸಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ತಮ್ಮ ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ಹೇಳಿದೆ.

ಪ್ರಯಾಣಿಕರಿಗೆ ತಿಳುವಳಿಕೆ

ಪ್ರಯಾಣಿಕರಿಗೆ ತಿಳುವಳಿಕೆ

ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕದಂತೆ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಯು ಜನರಿಗೆ ತಿಳಿವಳಿಕೆಯನ್ನು ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ಅಗತ್ಯ ಕ್ರಮಗಳನ್ನು ಕೈಗೊಳ್ಳಿ

ಅಗತ್ಯ ಕ್ರಮಗಳನ್ನು ಕೈಗೊಳ್ಳಿ

ಮೊಬೈಲ್‌ ಲೌಡ್ ಸ್ಪೀಕರ್‌ಗಳಲ್ಲಿ ಬಸ್‌ನಲ್ಲಿ ಹಾಡುಗಳನ್ನು ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವುದನ್ನು ತಡೆಯಲು ಜನರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಾಹನಗಳಲ್ಲಿ ಸ್ಟಿಕ್ಕರ್ ಆಳವಡಿಕೆ

ವಾಹನಗಳಲ್ಲಿ ಸ್ಟಿಕ್ಕರ್ ಆಳವಡಿಕೆ

ಬಸ್ಸುಗಳಲ್ಲಿ ಪ್ರಯಾಣಿಸುವ ಜನರಿಗೆ ಈ ಕುರಿತು ಮಾಹಿತಿ ನೀಡಲು ವಾಹನಗಳಲ್ಲಿ ಸ್ಟಿಕ್ಕರ್ ಅಂಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ತಾಂತ್ರಿಕ ಅಭಿಯಂತರರು ಹಾಗೂ ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

English summary
Bangalore Metropolitan Transport Corporation (BMTC) prohibited songs listen with loud speaker in bus. BMTC issued notification after PIL filed in Karnataka high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X