ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಲ್‌ ಫೈನಲ್‌ ಬಿಎಂಟಿಸಿಯಿಂದ ಹೆಚ್ಚುವರಿ ಸೇವೆ

By Ashwath
|
Google Oneindia Kannada News

ಬೆಂಗಳೂರು, ಮೇ.31: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂ. 1ರಂದು ನಡೆಯಲಿರುವ ಐಪಿಎಲ್ ಟಿ-20 ಕ್ರಿಕೆಟ್‌ನ ಫೈನಲ್ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನ ಸಂಜೆ 5ರ ನಂತರ ನಗರದ ವಿವಿಧ ಭಾಗಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಾಗೂ ಕ್ರಿಕೆಟ್‌ ಪಂದ್ಯಾಟ ಮುಗಿದ ಬಳಿಕ ರಾತ್ರಿ ಮನೆಗೆ ತೆರಳಲು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.

BMTC
ಬಸ್ಸಿನ ಮಾರ್ಗಗಳು : ಗೇಟ್ ನಂ 1 ರಿಂದ ಮಾಣಿಕ್ ಷಾ ಪರೇಡ್ ಗ್ರೌಂಡ್ಸ್ ನಿಂದ ಕಾಡುಗೋಡಿ ಬಸ್ ನಿಲ್ದಾಣ. ಗೇಟ್ ನಂ 2ರಿಂದ ಮಯೋಹಾಲ್ ನಿಂದ ಸರ್ಜಾಪುರ, ಗೇಟ್ 3 ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ. ಗೇಟ್ 4 ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್.

ಗೇಟ್ ನಂ 5 ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಗ್ಗಲೀಪುರ, ಗೇಟ್ ನಂ 6 ಚಿನ್ನಸ್ವಾಮಿ ಸ್ಟೇಡಿಯಂನಿಂದನಿಂದ ಕೆಂಗೇರಿ ಕೆಎಚ್ ಬಿ ಕ್ವಾಟ್ರಸ್, ಗೇಟ್ ನಂ 7 ಬಿಆರ್ ವಿ ಪರೇಡ್ ನಿಂದ ಜನಪ್ರಿಯ ಟೌನ್ ಶಿಪ್, ಗೇಟ್ ನಂ 8 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲ, ಗೇಟ್ ನಂ 9 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ ನ್ಯೂ ಟೌನ್.

ಗೇಟ್ ನಂ 10 ಬಿಆರ್ ವಿ ಪರೇಡ್ ಗ್ರೌಂಡ್ ನಿಂದ ಆರ್.ಕೆ.ಹೆಗ್ಡೆ ನಗರ, ಗೇಟ್ 11 ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರು, ಗೇಟ್ 12 ಮಯೋ ಹಾಲ್ ನಿಂದ ಹೊಸಕೋಟೆಗೆ ಬಸ್‌‌ಗಳು ಓಡಾಟ ನಡೆಸಲಿವೆ.

English summary
BMTC is operating extra buses including vajra buses in order to convene cricket fans travelling to Chinnaswamy Stadium from different parts of the city for watching IPL final match. In order to facilitate people to reach the stadium at 20.00 Hrs, BMTC is operating buses from different part of the city from 17.00 Hrs and to facilitate people to reach their destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X