ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC : ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲ: ಕಟ್ಟಡವನ್ನೇ ಅಡಮಾನವಿಟ್ಟ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಉದ್ಯಾನ ನಗರಿಯ ಬಹುತೇಕ ಜನರು ದಿನನಿತ್ಯದ ಪ್ರಯಾಣಕ್ಕಾಗಿ ಬಳಸುವ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ), ಇದು ಈಗ ಸಾಲದ ಸುಳಿಯತ್ತ ಸಾಗುತ್ತಿದೆ. ಕೋಟಿ ಕೋಟಿ ಸಾಲ ಮಾಡಿದ್ದರಿಂದ ತನ್ನ ಕಟ್ಟಡವನ್ನೇ ಅಡವಿಡುವ ಹಂತಕ್ಕೆ ಹೋಗಿದೆ.

ರಾಜಧಾನಿ ಜನರ ಜೀವನಾಡಿಯಾದ, ದೇಶದ ನಂಬರ್ 1 ಸಾರಿಗೆ ಸಂಸ್ಥೆ ಬಿಎಂಟಿಸಿ ಸಾಲದ ಶೂಲದಿಂದ ಹೊರಬರಲು ಆಗುತ್ತಿಲ್ಲ. ಸಾಲಕ್ಕಾಗಿ ಸಂಸ್ಥೆಯ ಕಟ್ಟಡ ಹಾಗೂ ಸ್ಥಳವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ.

ಎಲ್ಲೆಲ್ಲಿ ಎಷ್ಟು ಸಾಲ?
2018ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ 100 ಕೋಟಿ ರೂ. ಸಾಲ ಪಡೆದಿದ್ದರೆ, 2018-19ರಲ್ಲಿ ಇದೇ ಬ್ಯಾಂಕ್‌ನಲ್ಲಿ ಮತ್ತೆ 19.95 ಕೋಟಿ ರೂ. ಸಾಲ ಪಡೆಯಲಾಗಿದೆ. 2018ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‌ನಲ್ಲಿ 125 ಕೋಟಿ ರೂ. ಸಾಲ ಮಾಡಿದ್ದರೆ, 2019-20ರಲ್ಲಿ ಅದೇ ಕೆನರಾ ಬ್ಯಾಂಕ್‌ನಲ್ಲಿ 160 ಕೋಟಿ ರೂ. ಸಾಲ ಮಾಡಲಾಗಿದೆ.

BMTC pledges Building to Get Loan; Here is the List of Banks Which BMTC Took Loans

2020-21ರಲ್ಲಿ ಕೆಯುಐಡಿಎಫ್‍ಸಿ ಬ್ಯಾಂಕ್‌ನಲ್ಲಿ 135.05 ಕೋಟಿ ರೂ. ಸಾಲ ಪಡೆದರೆ, 2020-21ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ 230 ಕೋಟಿ ರೂ. ಸಾಲ ಮಾಡಲಾಗಿದೆ. ಅಷ್ಟೇ ಅಲ್ಲದೆ 2020-21 ಕೆಯುಐಡಿಎಫ್‍ಸಿ ಬ್ಯಾಂಕ್‌ನಲ್ಲಿ 42 ಕೋಟಿ ರೂ. ಸಾಲ ಮಾಡಲಾಗಿದೆ. ಇನ್ನು ಮಾರ್ಚ್ 13, 2022ರವರೆಗೆ ಬಿಎಂಟಿಸಿ ಒಟ್ಟು ಕೆಯುಐಡಿಎಫ್‍ಸಿ ಬ್ಯಾಂಕ್‌ನಲ್ಲಿ 183 ಕೋಟಿ ರೂ. ಸಾಲ ಮಾಡಲಾಗಿದೆ.

Recommended Video

RCBಯ ಹೊಸ ಹಾಡು ಬರೆದದ್ದು ಯಾರು ಗೊತ್ತಾ | Oneindia Kannada
BMTC pledges Building to Get Loan; Here is the List of Banks Which BMTC Took Loans

ಈ ಮೇಲಿನ ಸಾಲದಲ್ಲಿ 160 ಕೋಟಿ ರೂ. ಹಾಗೂ 230 ಕೋಟಿ ರೂ. ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ.

English summary
Bengaluru Metropolitan Transport Corporation (BMTC) pledges Building to Get Bank Loan; Here is the List of Banks Which BMTC Took Loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X