ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುಕ್ರವಾರ ಬಿಎಂಟಿಸಿ ಬಸ್‌ ದಿನ ಮಿಸ್ ಮಾಡ್ಬೇಡಿ

By Ashwath
|
Google Oneindia Kannada News

ಬೆಂಗಳೂರು, ಜು.3: ಸಾರ್ವಜನಿಕ ಸಾರಿಗೆ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ವಾಹನದಟ್ಟಣೆ ಕಡಿಮೆ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ತಿಂಗಳಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ತನ್ನ 53ನೇ ಬಸ್‌ ದಿನವನ್ನು ಜು.4 ಶುಕ್ರವಾರದಂದು ಆಚರಿಸಲಿದೆ.

ಈ ದಿನದ ಅಂಗವಾಗಿ ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಮತ್ತು ಹಳೇ ಮದ್ರಾಸ್‌ ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 7ರಿಂದ ರಾತ್ರಿ 10ರವರೆಗೂ ಸುಮಾರು 1,500ಕ್ಕೂ ಹೆಚ್ಚು ಸಾಮಾನ್ಯ ಪಾಳಿ ಅನುಸೂಚಿಗಳನ್ನು ವಿಸ್ತರಿಸಲಾಗುತ್ತಿದೆ. ಇದರಿಂದ ಅಂದು ಪ್ರಯಾಣಿಕರಿಗೆ ಹೆಚ್ಚುವರಿ ಸೇವೆ ದೊರೆಯಲಿದೆ ಎಂದು ಬಿಎಂಟಿಸಿ ತಿಳಿಸಿದೆ.[ಬಿಎಂಟಿಸಿ ಬಸ್ಸಿನ ಕ್ಷಣ-ಕ್ಷಣದ ಮಾಹಿತಿ ಇನ್ನು ಲಭ್ಯ]

bmtc bus day

ಹೊಸದಾಗಿ ಪರಿಚಯಿಸಲಾದ ಮಾರ್ಗಸೂಚಿಗಳು:
ಮಾರ್ಗಸಂಖ್ಯೆ 375-ಇ : ಕೆಂಗೇರಿ ಟಿಟಿಎಂಸಿಯಿಂದ ಮೈಲಸಂದ್ರ ಗೇಟ್, ಮೂಕಾಂಬಿಕಾನಗರ, ಬಿಜಿಎಸ್ ಹೆಲ್ತ್ ಸಿಟಿ, ಉತ್ತರಹಳ್ಳಿ, ಕದಿರೇನಹಳ್ಳಿ ವಿಲೇಜ್ ಮಾರ್ಗವಾಗಿ ಬನಶಂಕರಿ ಟಿಟಿಎಂಸಿಗೆ

ಹೊಸ ಮಾರ್ಗಸಂಖ್ಯೆ ಜಿ-3ಎ: ಶಿವಾಜಿನಗರ ಬಸ್ ನಿಲ್ದಾಣದಿಂದ ಮಹಾತ್ಮ ಗಾಂಧಿ ಪ್ರತಿಮೆ, ಕ್ಯಾಷ್ ಪಾರ್ಮಸಿ, ಬ್ರಿಗೇಡ್ ರಸ್ತೆ, ಆಡುಗೋಡಿ ಹಾಗೂ ಬೊಮ್ಮನಹಳ್ಳಿ ಮಾರ್ಗವಾಗಿ ಎಲೆಕ್ಟ್ರಾನಿಕ್ ವಿಪ್ರೋಗೇಟ್ ಗೆ 5.

ಮಾರ್ಗಸಂಖ್ಯೆ 340-ಎಎ : ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೋರೇಷನ್, ಶಾಂತಿನಗರ, ಲಕ್ಕಸಂದ್ರ, ಡೈರಿ ಸರ್ಕಲ್, ಆಡುಗೋಡಿ ಮುಂದುವರೆದು ಮಾರ್ಗಸಂಖ್ಯೆ 171 ರಲ್ಲಿ ಕೋರಮಂಗಲ ಕೊನೆ ನಿಲ್ದಾಣವರೆಗೆ ಬಂದು ನಂತರ ಜಕ್ಕಸಂದ್ರ, ಅಗರ, ಹೆಚ್ಎಸ್ಆರ್ ಬಡಾವಣೆ 24ನೇ ಮುಖ್ಯರಸ್ತೆ, ಸಿ.ಪಿ.ಡಬ್ಲ್ಯೂ.ಡಿ ಕ್ವಾಟರ್ಸ್ ಹಾಗೂ ಪರಂಗಿಪಾಳ್ಯ ಮಾರ್ಗವಾಗಿ ಹೆಚ್ಎಸ್ಆರ್ ಬಡಾವಣೆ 2ನೇ ಸೆಕ್ಟರ್ (ಹಳೇ ಕೇಂಬ್ರಿಡ್ಜ್ ಶಾಲೆ) [810 ಹೊಸ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ]

ಮಾರ್ಗಸಂಖ್ಯೆ 289-ಝಡ್: ಕೆಂಪೇಗೌಡ ಬಸ್ ನಿಲ್ದಾಣದಿಂದ ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ವೆಂಕಟಾಲ, ಸಾತನೂರು ಹಾಗೂ ಬಾಗಲೂರು ಮಾರ್ಗವಾಗಿ ಬಂಡಿಕೊಡಗೆಹಳ್ಳಿಗೆ.

English summary
The Bangalore Metropolitan Transport Corporation will observe its 53rd ‘Bus Day’ on Friday. It will be observed in the following corridors: Old Airport Road (ITPL), Sarjapur Road, Hosur Road, Bannerghatta Road, Kanakapura Road, Mysore Road, Magadi Road, Tumkur Road, Bellary Road, Thanisandra Road, Hennur Road and Old Madras Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X