ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ 'ಈ' ಏರಿಯಾಗಳಿಗೆ BMTC ಬಸ್ ಬರಲ್ಲ.!

|
Google Oneindia Kannada News

ಬೆಂಗಳೂರು, ಮೇ 19: ಲಾಕ್ ಡೌನ್ 4.0 ಜಾರಿಗೆ ಬಂದ ಮೇಲೆ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಇಂದಿನಿಂದ ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳು ರಸ್ತೆಗಿಳಿದು, ಸಂಚಾರ ಆರಂಭಿಸಿವೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

BMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿBMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿ

ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ 2000 ಬಿ.ಎಂ.ಟಿ.ಸಿ ಬಸ್ ಗಳು ಓಡಾಟ ನಡೆಸಲಿವೆ. ಬೆಂಗಳೂರಿನ 198 ವಾರ್ಡ್ ಗಳ ಪೈಕಿ 181 ವಾರ್ಡ್ ಗಳಲ್ಲಿ ಮಾತ್ರ ಬಿ.ಎಂ.ಟಿ.ಸಿ ಬಸ್ ಗಳು ಓಡಾಡಲಿವೆ. ಉಳಿದ ವಾರ್ಡ್ ಗಳಲ್ಲಿ ಅರ್ಥಾತ್ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ವಾರ್ಡ್ ಗಳಲ್ಲಿ ಬಿ.ಎಂ.ಟಿ.ಸಿ ಸೇವೆ ಲಭ್ಯವಿರುವುದಿಲ್ಲ.

BMTC to not to operate in Containment Zones

ಬೆಂಗಳೂರಿನ ಕಂಟೇನ್ಮೆಂಟ್ ಝೋನ್ ಗಳ ಪಟ್ಟಿ ಇಲ್ಲಿದೆ:

* ಪಾದರಾಯನಪುರ

* ಹೊಂಗಸಂದ್ರ

* ಹಗದೂರು

* ಕೆ.ಆರ್ ಮಾರ್ಕೆಟ್
* ಹಂಪಿ ನಗರ

* ಹೂಡಿ

* ಭೈರಸಂದ್ರ

* ಯಶವಂತಪುರ

* ದೀಪಾಂಜಲಿನಗರ

* ಮಂಗಮ್ಮನ ಪಾಳ್ಯ

* ಬಿಳೇಕಹಳ್ಳಿ

* ಬೇಗೂರು

* ಬಿಟಿಎಂ ಲೇಔಟ್

* ಶಿವಾಜಿನಗರ

* ಮಲ್ಲೇಶ್ವರಂ

* ಹೆಚ್.ಬಿ.ಆರ್ ಲೇಔಟ್

* ಹೇರೋಹಳ್ಳಿ

ಈ ವಾರ್ಡ್ ಗಳಲ್ಲಿ ಬಿ.ಎಂ.ಟಿ.ಸಿ ಸೇವೆ ಇರುವುದಿಲ್ಲ.

English summary
BMTC to not to operate in Containment Zones. Have a look at the List of Containment Zones in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X