ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಗೆ ಬಸ್ ಟಿಕೆಟ್ ಮುದ್ರಿಸುವ ಶಕ್ತಿ ಇಲ್ಲ: ಟಿಕೆಟ್ ಇಲ್ಲದೇ ನಿರ್ವಾಹಕರ ಪರದಾಟ

|
Google Oneindia Kannada News

ಬೆಂಗಳೂರು, ಫೆ. 17: ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು! ಬಿಎಂಟಿಸಿ ಕೂಡ ಇದೇ ನೀತಿ ಅನುಸರಿಸಿ ಸಾರಿಗೆ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಮೊನ್ನೆಯಷ್ಟೇ ದೇಶಕ್ಕೆ ಮಾದರಿ ಎಲೆಕ್ಟ್ರಿಕ್ ಬಸ್‌ಗಳನ್ನು ರೋಡ್‌ಗೆ ಇಳಿಸಿವೆ. ಆದರೆ, ದಿನ ನಿತ್ಯ ಸಂಚರಿಸುವ ಸಾಮಾನ್ಯ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲು ಬಸ್ ಟಿಕೆಟ್‌ಗಳೇ ಇಲ್ಲ!

ಹೌದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಡಿರುವ ಎಡವಟ್ಟಿನಿಂದ ನಿರ್ವಾಹಕರು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್‌ಗಳಲ್ಲಿ ಖಾಲಿ ಸೀಟು ಇದ್ದರೂ ನಿರ್ವಾಹಕರು ಹತ್ತಿಸಿಕೊಳ್ಳಲಾಗುತ್ತಿಲ್ಲ. ಬಸ್ ಹತ್ತಿದರೂ ಪ್ರಯಾಣ ಮಾಡುವಂತಿಲ್ಲ. ಹೀಗಾಗಿ ಬಹುತೇಕ ಬಸ್‌ಗಳು ಖಾಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಗುಡ್ ನ್ಯೂಸ್: ಟಿಕೆಟ್ ದರ ಏರಿಕೆ ಇಲ್ಲ, ವಜಾಗೊಂಡ ಸಾರಿಗೆ ನೌಕರರ ನೇಮಕಗುಡ್ ನ್ಯೂಸ್: ಟಿಕೆಟ್ ದರ ಏರಿಕೆ ಇಲ್ಲ, ವಜಾಗೊಂಡ ಸಾರಿಗೆ ನೌಕರರ ನೇಮಕ

ಕಳೆದ ಹದಿನೈದು ದಿನದಿಂದ ಬಿಎಂಟಿಸಿ ಬಸ್ ನಿರ್ವಾಹಕರಿಗೆ ಟಿಕೆಟ್‌ಗಳೇ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಕರ ಪ್ರಯಾಣ ಮಾಡಲು ಬಸ್ ಹತ್ತಿದರೆ ಅವರನ್ನು ಅನಿವಾರ್ಯವಾಗಿ ಕೆಳಗೆ ಇಳಿಸಲಾಗುತ್ತಿದೆ. ಇನ್ನು ಹಣ ಪಡೆದು ಟಿಕೆಟ್ ಕೊಡದೇ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಕೇಸು ಬೀಳುತ್ತೆ ಈ ರಿಸ್ಕ್ ಯಾಕೆ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಬಸ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ.

BMTC not printed enough paper bus tickets: Conductors Faces Problems due to non availability

ಆಧುನೀಕರಣ ಹೆಸರಿನಲ್ಲಿ ಖರೀದಿಸಿದ ಇ ಟೆಕೆಟ್ ಯಂತ್ರಗಳು ಕಾರ್ಯ ನಿರ್ವಹಿಸದೇ ಮೂಲೆ ಗುಂಪಾಗಿವೆ. ಹೀಗಾಗಿ ಅನಿವಾರ್ಯವಾಗಿ ನಿರ್ವಾಹಕರು ಸಾಂಪ್ರದಾಯಿಕ ಟಿಕೆಟ್ ನೀಡಬೇಕಾಗಿದೆ. ಆದರೆ ಕಳೆದ ಹದಿನೈದು ದಿನದಿಂದ ಟಿಕೆಟ್‌ಗಳ ಕೊರತೆ ಎದುರಾಗಿದೆ. ಬಸ್ ನಿರ್ವಾಹಕರು ಟಿಕೆಟ್ ಇಂಡೆಂಟ್ ಹಾಕಿದರೂ ಅಷ್ಟು ಟಿಕೆಟ್ ಕೊಡಲಾಗುತ್ತಿಲ್ಲ. ಕೊಡುವ ಟಿಕೆಟ್ ಮುಗಿದ ಬಳಿಕ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗದೇ ನಿರ್ವಾಹಕರು ಪರದಾಡುತ್ತಿದ್ದಾರೆ. ಟಿಕೆಟ್‌ಗಳನ್ನು ಒದಗಿಸಿ ಎಂದು ಬಿಎಂಟಿಸಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಒದಗಿಸುತ್ತಿಲ್ಲ.

ಪೂರ್ಣ ವೇತನ ಇಲ್ಲದೇ ಸಾಲದ ಸುಳಿಯಲ್ಲಿ ಬಿಎಂಟಿಸಿ ನೌಕರರು: ಸಾರಿಗೆ ಮಂತ್ರಿಗಳೇ ಗಮನಿಸಿಪೂರ್ಣ ವೇತನ ಇಲ್ಲದೇ ಸಾಲದ ಸುಳಿಯಲ್ಲಿ ಬಿಎಂಟಿಸಿ ನೌಕರರು: ಸಾರಿಗೆ ಮಂತ್ರಿಗಳೇ ಗಮನಿಸಿ

ಹೀಗಾಗಿ ಅನಿವಾರ್ಯವಾಗಿ ಬಿಎಂಟಿಸಿ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗದೇ ನಷ್ಟಕ್ಕೆ ಸಿಲುಕುತ್ತಿವೆ. ಮೇಲಾಧಕಾರಿಗಳು ಬಿಎಂಟಿಸಿ ಬಸ್ ಟಿಕೆಟ್ ಅಭಾವದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಜತೆಗೆ ನಿರ್ವಾಹಕರು ಕೂಡ ಸಮಸ್ಯೆಗೆ ಸಿಲುಕುವಂತಾಗಿದೆ.

BMTC not printed enough paper bus tickets: Conductors Faces Problems due to non availability

ಅಧಿಕಾರಿಗಳ ಎಡವಟ್ಟು: ಬಿಎಂಟಿಸಿ ಬಸ್ ಗಳಿಗೆ ಅಗತ್ಯ ಇರುವಷ್ಟು ಟಿಕೆಟ್ ನೀಡುತ್ತಿಲ್ಲ. ಇಂಡೆಟ್ ಹಾಕಿ ವಾರ ಕಳೆದರೂ ಟಿಕೆಟ್ ಒದಗಿಸದೇ ಬಿಎಂಟಿಸಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಟಿಕೆಟ್ ಇಲ್ಲದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿಲ್ಲ. ಸಂಸ್ಥೆ ನೀಡಿದ್ದ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳು ಶೇ. 60 ರಷ್ಟು ಕೆಟ್ಟು ಹೋಗಿವೆ. ಹೀಗಾಗಿ ನಿರ್ವಾಹಕರು ಪರದಾಡುತ್ತಿದ್ದಾರೆ ಎಂದು ಬಿಎಂಟಿಸಿ ನಿರ್ವಾಹಕ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಒಂದು ಬಸ್ ಡಿಪೋಗೆ ಒಂದು ಸಾವಿರ ಟಿಕೆಟ್ ಬುಕ್ ಕಳಿಸಲು ಇಂಡೆಂಟ್ ಹಾಕಿದರೆ ನೂರು ಟಿಕೆಟ್ ಬುಕ್ ಕೊಡ್ತಿದ್ದಾರೆ. ಒಂದು ಡಿಪೋಗೆ ಒಂದು ಪಾಳಿಗೆ ಕನಿಷ್ಠ 500 ಟಿಕೆಟ್ ಬುಕ್ ಬೇಕಾಗುತ್ತವೆ. ಅದರಲ್ಲೂ ಸ್ಟೇಜ್ ಆಧಾರಿತವಾಗಿ ಮುದ್ರಿಸಿರುವ ಟಿಕೆಟ್ ನೀಡುತ್ತಿಲ್ಲ. ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ ಟಿಕೆಟ್ ನೀಡುತ್ತಿದ್ದಾರೆ. ಇದರಿಂದ ನಿರ್ವಾಹಕರ ಒಂದು ಟಿಕೆಟ್ ಬದಲಿಗೆ ಎರಡು ಮೂರು ಟಿಕೆಟ್ ಕೊಡಬೇಕಾಗಿದೆ. ಹಳೇ ಟಿಕೆಟ್‌ಗಳನ್ನು ಸಹ ಬೇಕಾದಷ್ಟು ಪೂರೈಸದ ಕಾರಣ ನಿರ್ವಾಹಕರು ಟಿಕೆಟ್ ಇರುವಷ್ಟು ಮಂದಿಯ ಪ್ರಯಾಣಕ್ಕೆ ಅವಕಾಶ ಕೊಡುತ್ತಿದ್ದಾರೆ. ಇದರಿಂದ ಬಿಎಂಟಿಸಿ ಸಂಸ್ಥೆಗೆ ನಷ್ಟವಾಗುತ್ತಿದೆ ಎಂದು ನಿರ್ವಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಬಸ್ ಇಳಿಸಿ ದಾಖಲೆ ಬರೆಯುತ್ತಿರುವ ಬಿಎಂಟಿಸಿ ಟಿಕೆಟ್ ಮುದ್ರಿಸಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಟಿಕೆಟ್ ಇಲ್ಲದೇ ನಿರ್ವಾಹಕರು ಪ್ರಯಾಣಿಕರು ಬಸ್ ಹತ್ತಲು ಬಿಡುತ್ತಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ಬಿಎಂಟಿಸಿ ಸಂಸ್ಥೆಗೆ ನಷ್ಟವಾಗುತ್ತಿದೆ ಎಂದು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಎಚ್ಚೆತ್ತು ಇದರಿಂದ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ನಿರ್ವಾಹಕರು ಒತ್ತಾಯಿಸಿದ್ದಾರೆ.

Recommended Video

Sadana Kadana : Priyank Kharge vs P Rajeev | Oneindia Kannada

English summary
BMTC not printed enough paper bus tickets: Conductors Faces Problems due to non availability of bmtc tickets. Officials not listening to the conductors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X