ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್ ರಸ್ತೆಯ ಬಿಎಂಟಿಸಿ ಬಸ್ ಪಾಸ್ ದರಗಳು

|
Google Oneindia Kannada News

ಬೆಂಗಳೂರು, ಮಾ. 26 : ಬಿಎಂಟಿಸಿ ನೈಸ್ ರಸ್ತೆಯಲ್ಲಿ ಬಸ್ ಸೇವೆಯನ್ನು ಆರಂಭಿಸಿದೆ. ಈ ರಸ್ತೆ ಮೂಲಕ ಸಂಚರಿಸುವ ಬಸ್ಸುಗಳಲ್ಲಿ ಯಾವುದೇ ರೀತಿಯ ಪಾಸುಗಳನ್ನು ಹೊಂದಿರುವವರು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ನೈಸ್ ರಸ್ತೆಗಾಗಿಯೇ ಟೋಲ್ ಶುಲ್ಕ ಸೇರಿ ಪ್ರತ್ಯೇಕ ಪಾಸ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೈಸ್ ರಸ್ತೆ ಮೂಲಕ ಸಂಚರಿಸುವ ಬಸ್ಸುಗಳ ಪಾಸುಗಳನ್ನು ಬಿಡುಗಡೆ ಮಾಡಿದೆ. ಸದ್ಯ, ಇರುವ ದಿನ, ಮಾಸಿಕ, ಗ್ರಾಮಾಂತರ, ವಾಯುವಜ್ರ ಸೇವೆಯ ಪಾಸು ಹೊಂದಿರುವ ಪ್ರಯಾಣಿಕರೂ ಈ ಮಾರ್ಗದಲ್ಲಿ ಸಂಚರಿಸಬಹುದು. [ಬಿಎಂಟಿಸಿ ಬಸ್ ಪಾಸು ಪಡೆಯುವುದು ಹೇಗೆ?]

BMTC

ನೈಸ್ ರಸ್ತೆಯ ಮೂಲಕ ಸಂಚರಿಸುವ ಬಿಎಂಟಿಸಿ ಬಸ್‌ಗಳ ಪ್ರಯಾಣಿಕರು ಸಾಮಾನ್ಯ ಪಾಸ್ ಹೊಂದಿದ್ದರೆ ಏ.1ರಿಂದ ಪ್ರತಿ ಟ್ರಿಪ್‌ಗೆ 25 ರೂ. ಹೆಚ್ಚುವರಿ ಟೋಲ್ ದರ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಟೋಲ್ ದರ ನಿಗದಿ ಪಡಿಸಿ ಬಿಡುಗಡೆ ಮಾಡಿರುವ ಪಾಸ್‌ಗಳನ್ನು ಖರೀದಿ ಮಾಡಬೇಕು. [ಬಿಎಂಟಿಸಿ APP ನೋಡಿದ್ದೀರಾ?]

ಯಾವ ಪಾಸು : ಸದ್ಯ ಇರುವ ಬಿಎಂಟಿಸಿ ದಿನದ ಪಾಸು 65 (ಗುರುತಿನ ಚೀಟಿ) ಮತ್ತು 70 ರೂ., ಕೆಂಪು ಹಲಗೆ 1,050, ಹಿರಿಯ ನಾಗರಿಕ 945, ಗ್ರಾಮಾಂತರ 1,300, ವಜ್ರ ಮಾಸಿಕ 2,250, ವಾಯು ವಜ್ರ 3,350 ಹೊಂದಿರುವವರು ಏ.1ರಿಂದ ಪ್ರತಿ ಟ್ರಿಪ್‌ಗೆ 25 ರೂ. ಪಾವತಿ ಮಾಡಬೇಕು. [ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸೇವೆ]

ನೈಸ್ ರಸ್ತೆ ಪಾಸು ದರ (ಟೋಲ್ ಶುಲ್ಕ ಸೇರಿ) : ದಿನದ ಪಾಸು 100, ದಿನದ ಪಾಸು 95 (ಗುರುತಿನ ಚೀಟಿ ಹೊಂದಿದ್ದರೆ), ವಜ್ರ ಸೇವೆಯ ದಿನದ ಪಾಸು (170), ಸಾಮಾನ್ಯ ಸೇವೆಯ ಮಾಸಿಕ ಪಾಸು 1,900, ವಜ್ರ ಮಾಸಿಕ ಪಾಸು 3000.

English summary
Bangalore Metropolitan Transport Corporation (BMTC) Nice road bus pass fare list. Recently BMTC introduced bus service in Nice road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X