ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್

|
Google Oneindia Kannada News

ಬೆಂಗಳೂರು, ಫೆಬ್ರವರಿ 23 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಬೆಂಗಳೂರಿನಿಂದ ಸಂಪರ್ಕಿಸಲು ಬಿಎಂಟಿಸಿ ಎರಡು ಹೊಸ ರೂಟ್‌ಗಳನ್ನು ಪರಿಚಯಿಸಿದೆ. ಇದರಿಂದಾಗಿ ನಗರದ ದಕ್ಷಿಣ ಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಸಹಾಯಕವಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೂತನ ವಾಯುವಜ್ರ ಬಸ್‌ಗಳನ್ನು ಆರ್ಟ್ ಆಫ್‌ ಲೀವಿಂಗ್ ಮತ್ತು ಡಿಎಲ್‌ಎಫ್‌ ಅಪಾರ್ಟ್‌ಮೆಂಟ್‌ನಿಂದ ವಿಮಾನ ನಿಲ್ದಾಣಕ್ಕೆ ಓಡಿಸುತ್ತಿದೆ.

ಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶ

ಕೆಐಎಬಿ-13 ಮಾರ್ಗದ ಬಸ್ ವಿಮಾನ ನಿಲ್ದಾಣ ಮತ್ತು ಆರ್ಟ್ ಆಫ್ ಲೀವಿಂಗ್ ಕ್ಯಾಂಪಸ್ ನಡುವೆ ಸಂಚಾರ ನಡೆಸಲಿದೆ. ಈ ಬಸ್ 22 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ. ಬಸ್ ತಲಘಟ್ಟಪುರ, ರಘುವನಹಳ್ಳಿ ಕ್ರಾಸ್, ಕೋನಕುಂಟೆ ಕ್ರಾಸ್, ಬನಶಂಕರಿ ಬಸ್ ನಿಲ್ದಾಣ, ಮಿನರ್ವ ಸರ್ಕಲ್, ಮೈಸೂರು ಬ್ಯಾಂಕ್, ಮೇಖ್ರಿ ಸರ್ಕಲ್, ಹೆಬ್ಬಾಳ, ಕೋಗಿಲು ಕ್ರಾಸ್, ಹುಣಸೇಮಾರನಹಳ್ಳಿಯಲ್ಲಿ ನಿಲುಗಡೆಗೊಳ್ಳಲಿದೆ.

2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ 2022ರಿಂದ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ

BMTC New Two Routes South Bengaluru To Airport

ಕೆಐಎಬಿ-14 ಬಸ್ ವಿಮಾನ ನಿಲ್ದಾಣ ಮತ್ತು ಡಿಎಲ್‌ಎಫ್ ಅಪಾರ್ಟ್‌ಮೆಂಟ್ ನಡುವೆ 37 ಟ್ರಿಪ್ ಸಂಚಾರ ನಡೆಸಲಿದೆ. ಹುಳಿಮಾವು, ಐಐಎಂಬಿ, ಗುರಪ್ಪನಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್, ಬೆಂಗಳೂರು ಕ್ಲಬ್, ಮೇಖ್ರಿ ಸರ್ಕಲ್, ಹೆಬ್ಬಾಳ, ಹುಣಸೇಮಾರನಹಳ್ಳಿಯಲ್ಲಿ ನಿಲುಗಡೆಗೊಳ್ಳಲಿದೆ.

English summary
BMTC will now connect south of Bengaluru to the Kempegowda International Airport (KIA) with two new Vayu Vajra routes. Art of Living and DLF Apartment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X