ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ 'ನಮ್ಮ ಪಾಸ್' ಬಳಸಿ ಕ್ಯಾಶ್ ಲೆಸ್ ವ್ಯವಹರಿಸುವ ಪ್ರಯಾಣಿಕರಿಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ ನೀಡುತ್ತಿದೆ

'ಬಿಎಂಟಿಸಿ ನಮ್ಮ ಪಾಸ್' ಮೂಲಕ ಕ್ಯಾಶ್‌ಲೆಸ್ ಪ್ರಯಾಣ ನಡೆಸಿದರೆ ಪ್ರತಿ ವಹಿವಾಟು ವೇಳೆಗೆ 30 ರೂ. ತನಕ ಶೇ.25 ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ. ಆದರೆ, ಅಮೆಜಾನ್ ಪೇ ಮೂಲಕ ಪಾವತಿಸಬೇಕು.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

ಬಿಎಂಟಿಸಿಯ ವಜ್ರ ಎಸಿ ಡೈಲಿ ಪಾಸ್‌ಗೆ 147 ರೂ. ವೆಚ್ಚವಾಗುತ್ತದೆ. ಈ ಆಫರ್ ಸೆಪ್ಟೆಂಬರ್ 30 ರ ತನಕ ವ್ಯಾಲಿಡಿಟಿ ಹೊಂದಿದೆ. ಈ ಆಫರ್ ಅವಧಿಯಲ್ಲಿ ಪ್ರತಿ ಬಳಕೆದಾರರಿಗೆ ಕೇವಲ ಎರಡು ಬಾರಿಯಷ್ಟೇ ಅವಕಾಶವಿದ್ದು, ಕ್ಯಾಶ್‌ಬ್ಯಾಕ್ ಅನ್ನು ಮೂರು ದಿನಗಳೊಳಗೆ ಅಮೆಜಾನ್ ಪೇ ಖಾತೆಗೆ ಜಮೆ ಮಾಡಲಾಗುತ್ತದೆ.

BMTC Namma Pass: 25% cashback for cashless travel

ಜೂನ್‌ನಲ್ಲಿ ಬೆಂಗಳೂರು ಮೂಲದ ಸ್ಟಾರ್ಟಪ್ ಸೀರಿಸ್-5 ಲ್ಯಾಬ್ಸ್ ಪ್ರೈ.ಲಿ. ಹಾಗೂ ಬಿಎಂಟಿಸಿ ಸೇರಿಕೊಂಡು ಡಿಜಿಟಲ್ ಪಾಸ್ ಸೌಲಭ್ಯ 'ಬಿಎಂಟಿಸಿ ನಮ್ಮ ಪಾಸ್' ಪರಿಚಯಿಸಿದ್ದರು. ಪ್ರಯಾಣಿಕರು ವೆಬ್‌ತಾಣಕ್ಕೆ ಭೇಟಿ ನೀಡಿ, ತಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಜತೆಗೆ ಸೆಲ್ಫಿ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಫೋನ್‌ಪೇ, ಪೇಟಿಎಂ ಮತ್ತು ಅಮೆಜಾನ್ ಪೇನಂಥ ಮೊಬೈಲ್ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಡೈಲಿ ಪಾಸ್‌ಗೆ ಪಾವತಿಸಬೇಕು.

ಪ್ರತಿದಿನ ಸುಮಾರು 50 ಪ್ರಯಾಣಿಕರು ಈ ಸೌಲಭ್ಯ ಬಳಸುತ್ತಿದ್ದಾರೆ. ಇದೀಗ ಸೀರಿಸ್-5 ಲ್ಯಾಬ್ಸ್ ಸಂಸ್ಥೆ ಮಾಸಿಕ ಡಿಜಿಟಲ್ ಪಾಸ್ ಹಾಗೂ ಹೆಚ್ಚು ಪಾವತಿ ವ್ಯಾಲೆಟ್‌ಗಳನ್ನು ಪರಿಚಯಿಸಲು ಯೋಜಿಸಿದೆ ಎಂದು ಸಂಸ್ಥೆಯ ಸಿಇಒ ಚಂದ್ರ ಭೂಷಣ್ ಹೇಳಿದ್ದಾರೆ.

English summary
Passengers using ‘BMTC Namma Pass’ will now be eligible for a cashback of 25% up to Rs 30 for each transaction for those paying through Amazon Pay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X