ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್‌ಗೆ ಚೆಂದದ ಹೆಸರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳು ಪ್ರತ್ಯೇಕ ಪಥದಲ್ಲಿ ನವೆಂಬರ್ 1 ರಿಂದ ಸಂಚಾರ ನಡೆಸಲಿವೆ. ಈ ಬಸ್‌ಗಳಿಗೆ ಚೆಂದದ ಹೆಸರನ್ನು ಇಡಲಾಗಿದ್ದು, ಲಾಂಛನ ಅನಾವರಣ ಮಾಡಲಾಗಿದೆ.

ಬೈಯಪ್ಪನಹಳ್ಳಿ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥದಲ್ಲಿ ಬಸ್ ಸಂಚಾರ ಮಾಡುತ್ತಿದೆ. ಅಕ್ಟೋಬರ್ 20ರಿಂದ ಬಸ್‌ಗಳ ಪ್ರಾಯೋಗಿಕ ಸಂಚಾರ ಆರಂಭಗೊಂಡಿದ್ದು, ಈ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್‌ಗಳಿಗೆ ಪ್ರತ್ಯೇಕ ಹೆಸರು, ಲಾಂಛನ ಬಿಡುಗಡೆ ಮಾಡಲಾಗಿದೆ.

ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ಆರಂಭಿಸಿದ ಬಿಎಂಟಿಸಿ ಬಸ್ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ಆರಂಭಿಸಿದ ಬಿಎಂಟಿಸಿ ಬಸ್

'ನಿಮ್ಮ ಬಸ್' ಉತ್ತಮ ಸಂಚಾರಕ್ಕಾಗಿ ಎಂಬ ಹೆಸರನ್ನು ಬಿಎಂಟಿಸಿ ಬಸ್‌ಗಳಿಗೆ ಇಡಲಾಗಿದೆ. ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ನಡೆಸುವ ಎಲ್ಲಾ ಬಸ್‌ಗಳ ಮೇಲೆ NIMBUS ಎಂದು ಬರೆಯಲಾಗುತ್ತದೆ ಮತ್ತು ಲಾಂಛನವನ್ನು ಚಿತ್ರಿಸಲಾಗುತ್ತದೆ.

ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ? ಬಿಎಂಟಿಸಿ ಪ್ರತ್ಯೇಕ ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ಏನಾಗುತ್ತೆ?

BMTC

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ 12 ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಯೋಗಿಕ ಸಂಚಾರ ಈಗಾಗಲೇ ಆರಂಭವಾಗಿದ್ದು, ನವೆಂಬರ್ 1 ರಿಂದ ಪ್ರತ್ಯೇಕ ಬಸ್ ಪಥದಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ.

ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್ ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

ರಸ್ತೆಯ ಎಡಭಾಗದಲ್ಲಿ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಬೇಕು. 3.5 ಮೀಟರ್ ಪ್ರತ್ಯೇಕ ಮಾರ್ಗವನ್ನು ಬಸ್‌ಗಳಿಗಾಗಿ ನಿರ್ಮಾಣ ಮಾಡಲಾಗಿದೆ. ಬೊಲ್ಲಾರ್ಡ್‌ಗಳನ್ನು ಹಾಕಿ ಪ್ರತ್ಯೇಕ ಪಥ ನಿರ್ಮಿಸಲಾಗಿದ್ದು, ಬೇರೆ ವಾಹನ ಈ ಮಾರ್ಗದಲ್ಲಿ ಸಂಚಾರ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ.

ಕೆ. ಆರ್. ಪುರದ ಟಿನ್ ಫ್ಯಾಕ್ಟರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ 18.5 ಕಿ. ಮೀ. ಉದ್ದದ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ. ನಗರದ ಉಳಿದ 11 ಮಾರ್ಗದಲ್ಲಿ ಪ್ರತ್ಯೇಕ ಪಥವನ್ನು ಶೀಘ್ರದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 6500 ಬಿಎಂಟಿಸಿ ಬಸ್‌ಗಳಿವೆ. ಇವುಗಳಲ್ಲಿ ಸುಮಾರು 6 ಸಾವಿರ ಬಸ್‌ಗಳು ಪ್ರತಿನಿತ್ಯ ರಸ್ತೆಗೆ ಇಳಿಯುತ್ತವೆ. ಸಂಚಾರ ದಟ್ಟಣೆಯಲ್ಲಿ ಬಸ್‌ಗಳು ಸಿಲುಕುವುದರಿಂದ ನಿಗದಿತ ಸಮಯಕ್ಕೆ ಅವುಗಳು ನಿಲ್ದಾಣ ತಲುಪುವುದು ತಡವಾಗುತ್ತಿದೆ. ಆದ್ದರಿಂದ, ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ.

English summary
BMTC named NIMBUS for the bus which run in bus priority lane in Bengaluru city. Trail run in bus priority lane began on October 20, 2019 bus running between K.R.Puram to Marathahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X