ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 17 ರಿಂದ ಬಿಎಂಟಿಸಿ ಸಂಚಾರ ಆರಂಭ ಸಾಧ್ಯತೆ!

|
Google Oneindia Kannada News

ಬೆಂಗಳೂರು, ಮೇ 12: ಈ ವಾರಾಂತ್ಯಕ್ಕೆ ಮೂರನೇ ಹಂತದ ಲಾಕ್‌ಡೌನ್‌ ಅಂತ್ಯವಾಗಲಿದೆ. ಮೇ 17ರ ಬಳಿಕ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಮತ್ತಷ್ಟು ಸಡಿಲಿಕೆ ಸಿಗಬಹುದು. ವಿಶೇಷವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮೇ 17ರ ನಂತರ ಬಿಎಂಟಿಸಿ ಸಂಚಾರ ಆರಂಭಿಸಲು ಮುಂದಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ನೌಕರರು ಕರ್ತವ್ಯಕ್ಕೆ ಹಾಜರಾಗಲು ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ ಎಂದು ನಿರ್ವಹಣಾ ಮಂಡಳಿ ಸೂಚಿಸಿದೆ.

ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ಕುಸಿತ; ಪ್ರತಿದಿನವೂ ನಷ್ಟ! ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ಕುಸಿತ; ಪ್ರತಿದಿನವೂ ನಷ್ಟ!

ಕೊರೊನಾ ವೈರಸ್ ಭೀತಿ ಇರುವುದರಿಂದ ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ಸಿಬ್ಬಂದಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಮುಂಜಾಗ್ರತೆಯಿಂದ ಪೂರ್ವ ತಯಾರಿ ಮಾಡಲು ಬಿಎಂಟಿಸಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

BMTC Might Be Re Start From May 17th

ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಡಿಪೋಗಳಿಂದ ನೌಕರರಿಗೆ ಆದೇಶ ಮಾಡಿರುವ ಕಾರಣ, ಬಿಎಂಟಿಸಿ ಆಸ್ಪತ್ರೆಗಳಲ್ಲಿ ನೌಕರರು ಆರೋಗ್ಯ ತಪಾಸಣೆಗೆ ಆಗಮಿಸಿದ್ದಾರೆ.

ಈಗಾಗಲೇ ಶಾಂತಿ‌ನಗರ ಆಸ್ಪತ್ರೆಯ ಮುಂಭಾಗದಲ್ಲಿ ಕಂಡಕ್ಟರ್ ಮತ್ತು ಡ್ರೈವರ್ ಗಳು ಕಾರೋಗ್ಯ ತಪಾಸಣೆಗಾಗಿ ಕಾಯುತ್ತಿದ್ದಾರೆ. ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿರುವುದರಿಂದ ನೌಕರರು ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ.

ಆದರೆ, ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿ ಆಗಲಿ ಅಥವಾ ಸಾರಿಗೆ ಇಲಾಖೆ ಆಗಲಿ ಅಧಿಕೃತ ಪ್ರಕಟಣೆ ಮಾಡಿಲ್ಲ. ಪ್ರಧಾನಿ ಮೋದಿ ಜೊತೆ ಸಿಎಂ ಮಾತುಕತೆ ಮುಗಿದಿದೆ. ಇದೀಗ, ಸಚಿವ ಸಂಪುಟದಲ್ಲಿ ಈ ವಿಚಾರಗಳನ್ನು ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಘೋಷಣೆಯಾಗಲಿದೆ.

English summary
BMTC might be re start from may 17th said source. so employees are going to check corona test before joining duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X