ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಮುಷ್ಕರ ಅಂತ್ಯ, ಮಾರ್ಗಸೂಚಿ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ನಾಳೆಯಿಂದ ನೌಕರರು ಎಂದಿನಂತೆ ಹಾಜರಾಗುತ್ತಾರೆ ಎಂದು ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು ಘೋಷಿಸಿದ್ದಾರೆ. ಈ ನಡುವೆ ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಎಂಡಿ ಶಿಖಾ ಅವರು ''ಯಾರು ಯಾರು ಅಮಾನತಾಗಿಲ್ಲ ಎಲ್ಲರೂ ಎಂದಿನಂತೆ ಕೆಲಸಕ್ಕೆ ಹಾಜರಾಗಬಹುದು'' ಎಂದಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲರೂ ಕೆಲಸಕ್ಕೆ ಹೋಗಿ ಎಂದು ನ್ಯಾಯಾಲಯ ಹೇಳಿದೆ. ನಾಳೆಯಿಂದ ಎಲ್ಲರೂ ಕೆಲಸಕ್ಕೆ ಹಾಜರಾಗುತ್ತಾರೆ. ಆದರೆ, ಸರ್ಕಾರ ಯಾರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಯಾರನ್ನು ಅಮಾನತ್ತಿಡಲಿದೆ ನೋಡಬೇಕು" ಎಂದರು.

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯ : ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯ : ಕೋಡಿಹಳ್ಳಿ ಚಂದ್ರಶೇಖರ್

ಕೊರೊನಾ ಮಿತಿಮೀರಿ ಹೋಗುತ್ತಿರುವ ಸಂದರ್ಭದಲ್ಲಿ ಮುಷ್ಕರ ಬೇಡ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

 ಆಶ್ವಾಸನೆಗಳು ಇನ್ನೂ ಜಾರಿಯಾಗಿಲ್ಲವೇಕೆ

ಆಶ್ವಾಸನೆಗಳು ಇನ್ನೂ ಜಾರಿಯಾಗಿಲ್ಲವೇಕೆ

''ಇದು ಬರೀ ಸಂಬಳದ ವಿಚಾರವಲ್ಲ, ನೌಕರರ ಬೇಡಿಕೆ ಆಗ್ರಹಿಸಿ ನಡೆಸಿದ ಸತ್ಯಾಗ್ರಾಹ ಎಂದು ನಾಳೆ ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಲಾಗುತ್ತದೆ, 2941 ಜನ ಅಮಾನತಾಗಿದ್ದಾರೆ. 7666 ಸಿಬ್ಬಂದಿ ಶೋಕಾಸ್ ನೋಟಿಸ್ ನೀಡಿದ್ದಾರೆ, ಸುಮಾರು 8000 ಜನ ವರ್ಗಾವಣೆ ಮಾಡಿದ್ದಾರೆ, ಒಟ್ಟಾರೆ 20 ಸಾವಿರ ಜನರ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿತ್ತು. ಶೇ 10ರಷ್ಟು ಸಂಬಳ ಏರಿಕೆ ಭರವಸೆ ಸೇರಿದಂತೆ ಅನೇಕ ಆಶ್ವಾಸನೆಗಳು ಇನ್ನೂ ಜಾರಿಯಾಗಿಲ್ಲವೇಕೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

 ಮಾರ್ಗಸೂಚಿಗೆ ಅನುಗುಣವಾಗಿ ಬಸ್ ಸಂಚಾರ

ಮಾರ್ಗಸೂಚಿಗೆ ಅನುಗುಣವಾಗಿ ಬಸ್ ಸಂಚಾರ

6500 ಬಸ್‌ಗಳ ಪೈಕಿ ಈಗಾಗಲೇ 2500 ಬಸ್ ಸಂಚರಿಸುತ್ತಿವೆ. ಕೊವಿಡ್ 19 ಮಾರ್ಗಸೂಚಿಗೆ ಅನುಗುಣವಾಗಿ ಬಸ್ ಸಂಚಾರ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಜಾರಿಗೊಳಿಸಲಾಗುತ್ತಿದೆ.
ಮಾರ್ಗಸೂಚಿ ಪ್ರಕಾರ ಶೇ 50 ರಷ್ಟು ಮಾತ್ರ ಹಾಜರಾಗಲು ಅನುಮತಿ ಇದೆ. ಸದ್ಯ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಿಸಬೇಕು ಎಂದರು.

 ಬಸ್ ಸುಸ್ಥಿತಿಯಲ್ಲಿವೆ:

ಬಸ್ ಸುಸ್ಥಿತಿಯಲ್ಲಿವೆ:

ಮುಷ್ಕರ ಸಂದರ್ಭದಲ್ಲಿ ಡಿಪೋಗಳಲ್ಲಿದ್ದ ಬಸ್ ಸುಸ್ಥಿತಿಯಲ್ಲಿವೆ. ಬಿಎಂಟಿಸಿ ಗ್ಯಾರೇಜಿನಲ್ಲಿ ರಿಪೇರಿಯಲ್ಲಿದ ವಾಹನಗಳನ್ನು ಸುಸ್ಥಿತಿಗೆ ತರಲಾಗಿದ್ದು, ಈ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು. ಈ ನಡುವೆ ಬಸ್ ಪಾಸ್ ಪಡೆದವರು ಆತಂಕ ಪಡಬೇಕಾಗಿಲ್ಲ, ಈ ಹಿಂದೆ ಅನುಸರಿಸಿದಂತೆ, ಈ ಬಾರಿಯೂ ನಿಮ್ಮ ಪಾಸ್ ಅವಧಿಯನ್ನು ವಿಸ್ತರಿಸಲಾಗುತ್ತದೆ. ಈ ಬಗ್ಗೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಶಿಖಾ ಹೇಳಿದರು.

 ಅಮಾನತಾದವರ ಕತೆ ಏನು?

ಅಮಾನತಾದವರ ಕತೆ ಏನು?

ಯಾರು ಯಾರು ಅಮಾನತಾಗಿಲ್ಲ ಎಲ್ಲರೂ ಎಂದಿನಂತೆ ಕೆಲಸಕ್ಕೆ ಹಾಜರಾಗಬಹುದು. ಟ್ರೈನಿಗಳು, ಪ್ರೊಬೆಷನರಿ ಅವಧಿಯ ಸಿಬ್ಬಂದಿಗಳನ್ನು ಅಮಾನತಲ್ಲ, ಕೆಲಸದಿಂದ ತೆಗೆದು ಹಾಕಲಾಗಿದೆ. ಅವರು ಅಪೀಲ್ ಮಾಡಲು ಆಗುವುದಿಲ್ಲ. ಶೋಕಾಸ್ ನೋಟಿಸ್ ಪಡೆದಿರುವ ಸಿಬ್ಬಂದಿ ಸೂಕ್ತ ಕಾರಣ ನೀಡಿ, ನಮ್ಮ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ. ಅಮಾನತಾಗಿರುವವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಕೋರ್ಟ್ ಆದೇಶದ ಬಗ್ಗೆ ತಿಳಿದಿಲ್ಲ ಎಂದರು.

Recommended Video

ಬಸ್‌ ಮುಷ್ಕರದಿಂದ ಸಾರಿಗೆ ಇಲಾಖೆಗೆ 287 ಕೋಟಿ ರೂ ಆದಾಯ ನಷ್ಟ! | Oneindia Kannada

English summary
BMTC MD Shikha reaction on Bus Strike called off and following Covid 19 norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X