ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"Nim bus" ಆ್ಯಪ್ ಹೆಸರು ಬದಲಾವಣೆಗೆ ಬಿಎಂಟಿಸಿ ನಿರ್ಧರಿಸಿದ್ದು ಏಕೆ?, ಇಲ್ಲಿದೆ ವಿವರ

ಪ್ರಯಾಣಿಕರ ಸಹಾಯಕ್ಕಾಗಿ ಬಿಡುಗಡೆಯಾಗಬೇಕಿದ್ದ "ನಿಮ್‌ ಬಸ್‌" ಆ್ಯಪ್‌ನ ಹೆಸರು ಬದಲಾವಣೆಗೆ ಬಿಎಂಟಿಸಿ ಮುಂದಾಗಿದೆ. ಹಾಗಾದರೆ ಈ ಆ್ಯಪ್‌ನಿಂದ ಪ್ರಯಾಣಿಕರಿಗೆ ಯಾವೆಲ್ಲ ಪ್ರಯೋಜನೆಗಳು ಆಗಲಿವೆ ಎಂದು ತಿಳಿಯಿರಿ.

|
Google Oneindia Kannada News

ಬೆಂಗಳೂರು, ಫೆಬ್ರವರಿ, 02: ಬಿಎಂಟಿಸಿ ಬಸ್ ಎಲ್ಲಿದೆ ಎಂದು ತಿಳಿಸುವ "Nim bus"ಅಪ್ಲಿಕೇಶನ್ ಪ್ರಾರಂಭ ಮಾಡಲು ಈಗಾಗಲೇ ಮೂರರಿಂದ ನಾಲ್ಕು ಬಾರಿ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಬಿಡುಗಡೆಗೂ ಮುನ್ನವೇ "ನಿಮ್‌ ಬಸ್‌" ಆ್ಯಪ್ ಹೆಸರು ಬದಲಾವಣೆಗೆ ಬಿಎಂಟಿಸಿ ಮುಂದಾಗಿದೆ.

ಡಿಸೆಂಬರ್ 23ರಂದು ಈ ಆ್ಯಪ್ ಅನ್ನು ಬಿಡುಗಡೆ ಮಾಡಲು ಬಿಎಂಟಿಸಿ ನಿರ್ಧರಿಸಿತ್ತು. ಆದರೆ ರಸ್ತೆ ಸಾರಿಗೆ ನಿಗಮವು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಮತ್ತು ಅದರ ನಿಖರತೆಯನ್ನು ಸುಧಾರಿಸಲು ಈ ಯೋಜನೆಯನ್ನು ಜನವರಿ 26ಕ್ಕೆ ಜಾರಿಗೆ ತರಲು ಮುಂದಾಗಿತ್ತು. ನಂತರವೂ ಕೂಡ ಆ್ಯಪ್ ಬಿಡುಗಡೆಯ ದಿನಾಂಕವನ್ನು ಮುಂದುಡುತ್ತಾ ಬಂದಿದ್ದು, ಬಿಡುಗಡೆಗೂ ಮುನ್ನವೇ ಹೆಸರು ಬದಲಾವಣೆ ಮಾಡಲು ಬಿಎಂಟಿಸಿ ನಿರ್ಧಿರಿಸಿದೆ.

ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏನು?, ಇಲ್ಲಿದೆ ವಿವರಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಸ್ಥಗಿತಕ್ಕೆ ಕಾರಣ ಏನು?, ಇಲ್ಲಿದೆ ವಿವರ

"Nim bus"ಅಪ್ಲಿಕೇಶನ್ ಬಳಕೆದಾರರಿಗೆ ಸರಿಯಾದ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಪ್ರಯಾಣ ತೊಂದರೆಯಿಂದ ಮುಕ್ತವಾಗಿಸಲು ಸಹಕಾರಿಯಾಗಲಿದೆ. ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಮಾಹಿತಿಯನ್ನು ಸಹ ಇಲ್ಲಿ ತಿಳಿಯಬಹುದಾಗಿದೆ. ಅದರ ಸಾಫ್ಟ್ ಲಾಂಚ್‌ನಲ್ಲಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು ಪ್ರವೇಶವನ್ನು ನೀಡಲಾಗುತ್ತು. ನಂತರ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಆ್ಯಪ್ ಅನ್ನು ಮತ್ತಷ್ಟು ಉತ್ತಮಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಇನ್ನು ಆ್ಯಪ್‌ಗೆ ಹಸದಾಗಿ ಹೆಸರಿಡಲು ಬಿಎಂಟಿಸಿ ಮುಂದಾಗಿದ್ದು, ಹೊಸ ಹೆಸರಿಗಾಗಿ ಹುಡುಕಾಟ ನಡೆಸುತ್ತಿದೆ. ಆದ್ದರಿಂದ ಆ್ಯಪ್ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಬಹುದಾಗಿದೆ.

 ಬಿಡುಗಡೆ ಆಗದ

ಬಿಡುಗಡೆ ಆಗದ "ನಿಮ್‌ ಬಸ್‌" ಆ್ಯಪ್

ಡಿಸೆಂಬರ್ 23 ರಂದು ಇದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಈ ದಿನಾಂಕವನ್ನು ಮುಂದೂಡಲಾಗಿತ್ತು. ಮತ್ತೆ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಿತ್ತು. ಆದರೆ, ಆ ದಿನವೂ ಆ್ಯಪ್ ಅನ್ನು ಬಿಡುಗಡೆ ಆಗಲಿಲ್ಲ. ಸೀಮಿತ ಜನರಿಗಷ್ಟೇ ಆ್ಯಪ್ ಬಳಕೆಗೆ ಬಿಎಂಟಿಸಿ ಅವಕಾಶ ನೀಡಿತ್ತು. ಈ ವೇಳೆ ಆ್ಯಪ್‌ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದವು. ಇದನ್ನು ಸರಿಪಡಿಸಿ, ಆ್ಯಪ್‌ಗೆ ಹೊಸ ಹೆಸರು ನೀಡಲು ಸಂಸ್ಥೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 ಯಾವೆಲ್ಲ ಮಹಿತಿಗಳು ಲಭ್ಯವಾಗಲಿವೆ?

ಯಾವೆಲ್ಲ ಮಹಿತಿಗಳು ಲಭ್ಯವಾಗಲಿವೆ?

ಬಹು ನಿರೀಕ್ಷಿತ "ನಿಮ್‌ ​ಬಸ್" ಆ್ಯಪ್​ನಲ್ಲಿ ಬಿಎಂಟಿಸಿ ಬಸ್​ಗಳ ಸಂಚಾರದ ವಿವರ ಲಭ್ಯವಾಗಲಿದೆ. ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್​ಒಎಸ್ ಎಚ್ಚರಿಕೆಯ ಸೌಲಭ್ಯವನ್ನು ಕಲ್ಪಸಲಾಗಿದೆ. ಅಷ್ಟೇ ಅಲ್ಲದೇ ವಿವಿಧ ಮಾರ್ಗಗಳು ಮತ್ತು ಟಿಕೆಟ್ ದರಗಳ ಮಾಹಿತಿಯನ್ನೂ ಕೂಡ ಈ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ.

 2019 ರಲ್ಲಿ ಮತ್ತೊಂದು ಆ್ಯಪ್ ಆರಂಭ

2019 ರಲ್ಲಿ ಮತ್ತೊಂದು ಆ್ಯಪ್ ಆರಂಭ

2016 ರಲ್ಲಿ ಸಾರಿಗೆ ನಿಗಮವು ತನ್ನ ಮೊದಲ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿತ್ತು. ಆದರೆ, ಈ ಆ್ಯಪ್ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ವಿಫಲಗೊಂಡಿತ್ತು. ಮತ್ತೆ 2019 ರಲ್ಲಿ ಮತ್ತೊಂದು ಆ್ಯಪ್ ಅನ್ನು ಆರಂಭಿಸಲಾಗಿತ್ತು. ಇದರಲ್ಲಿಯೂ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಆ್ಯಪ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯಶಸ್ವಿಯಾಗಿ ಆ್ಯಪ್ ಸಿದ್ಧಪಡಿಸಲು ಬಿಎಂಟಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.

 ಬಿಎಂಟಿಸಿ ಸಂಸ್ಥೆಯ ಎಂಡಿ ಹೇಳಿದ್ದೇನು?

ಬಿಎಂಟಿಸಿ ಸಂಸ್ಥೆಯ ಎಂಡಿ ಹೇಳಿದ್ದೇನು?

ಹಾಗೆಯೇ ಆ್ಯಪ್ ಬಳಕೆಯ ವೇಳೆ ಎದುರಾಗುತ್ತಿರುವ ಸಮಸ್ಯೆಗಳು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಎಂಟಿಸಿ ಎಂಡಿ ಸತ್ಯವತಿ ಮಾಹಿತಿ ನೀಡಿದ್ದಾರೆ. ಆ್ಯಪ್‌ನಲ್ಲಿರುವ ದೋಷಗಳನ್ನು ಸರಿಪಡಿಸುತ್ತಿದ್ದೇವೆ. ಹೀಗಾಗಿ ಆ್ಯಪ್ ಬಿಡುಗಡೆಗೆ ಸಮಯ ತೆಗೆದುಕೊಳ್ಳುತ್ತಿದೆ. ಅಲ್ಲದೆ ಹೊಸ ಹೆಸರಿಗೂ ಹುಡುಕಾಟವನ್ನು ನಡೆಸಲಾಗುತ್ತಿದೆ. "ನಿಮ್ಮ ಬಸ್" ಹೆಸರು ಆಕರ್ಷಕವಾಗಿಲ್ಲದ ಕಾರಣ, ಮತ್ತೊಂದು ನೂತನ ಹೆಸರಿಗೆ ಹುಡುಕಾಟ ಆರಂಭಿಸಿದ್ದೇವೆ. ಆ್ಯಪ್‌ಗೆ ಪ್ರಯಾಣಿಕರನ್ನು ಸೆಳೆಯುವತಂತಹ ಕನ್ನಡದ ಅತ್ಯಾಕರ್ಷಕ ಹೆಸರನ್ನು ನೀಡಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಆ್ಯಪ್‌ ಬಿಡುಗಡೆಗೂ ಮುನ್ನವೇ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲಿವೆ. ಈ ಬಾರಿಯಾದರೂ ಆ್ಯಪ್‌ ಹೆಸರು ಬದಲಾವಣೆ ಯಶಸ್ವಿಯಾಗಿ ಆಗುವುದೇ ಎನ್ನುವುದನ್ನು ಕಾದುನೋಡಬೇಕಿದೆ.

English summary
BMTC is decided to change the "Nim bus" app name, here see details, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X