ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ಹೊಸ ಮಾರ್ಗದಲ್ಲಿ ವಜ್ರ ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ಮೇ 26 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎರಡು ನೂತನ ಮಾರ್ಗಗಳಲ್ಲಿ ವಜ್ರ ಬಸ್ ಸೇವೆಯನ್ನು ಆರಂಭಿಸಿದೆ. ಮಾರ್ಗ ಸಂಖ್ಯೆ ವಿ401ಕೆ ಮತ್ತು ವಿ435ಇಯಲ್ಲಿ ಸೋಮವಾರಿಂದ ಸಂಚಾರ ಆರಂಭವಾಗಿದೆ. ಕೆಂಗೇರಿ ಮತ್ತು ಕಾಡುಗೋಡಿಗೆ ಪ್ರಯಾಣಿಸುವವರಿಗೆ ಈ ಸೇವೆಯನ್ನು ಆರಂಭಿಸಲಾಗಿದೆ.

ಈಗಾಗಲೇ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವಜ್ರ ಸೇವೆಯನ್ನು ಆರಂಭಿಸುತ್ತಿರುವ ಬಿಎಂಟಿಸಿ, ಮೇ 26ರ ಸೋಮವಾರದಿಂದ ಎರಡು ನೂತನ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಈ ಎರಡೂ ಮಾರ್ಗಗಳಲ್ಲಿ 25 ನಿಮಿಷಕ್ಕೆ ಒಂದರಂತೆ ವಜ್ರ ಬಸ್ಸುಗಳು ಸಂಚರಿಸಲಿವೆ.

Volvo Bus

ಮಾರ್ಗ ವಿ401ಕೆ : ವಿ401ಕೆ ಮಾರ್ಗ ಕೆಂಗೇರಿ ಟಿಟಿಎಂಸಿಯಿಂದ ಯಲಹಂಕದವರೆಗೆ ಸಂಪರ್ಕ ಕಲ್ಪಿಸುತ್ತದೆ. ನಾಗರಬಾಬಿ ಸರ್ಕಲ್, ವಿಜಯನಗರ, ರಾಜಾಜಿನಗರ, ಯಶವಂತಪುರ,ಬಿಇಎಲ್ ಸರ್ಕಲ್, ವಿದ್ಯಾರಣ್ಯಪುರ, ಮದರ್ ಡೈರಿ, ಯಲಹಂಕ ನ್ಯೂಟೌನ್ ಮೂಲಕ ವಜ್ರ ಬಸ್ ಸಂಚರಿಸಲಿದೆ. ಈ ಮಾರ್ಗದಲ್ಲಿ 25 ನಿಮಿಷಕ್ಕೆ ಒಂದರಂತೆ ಒಟ್ಟು 10 ಬಸ್ಸುಗಳು ಸಂಚರಿಸಲಿವೆ.

ಮಾರ್ಗ ವಿ435ಇ : ವಿ435ಈ ಮಾರ್ಗ ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ರಿಚ್ಮಂಡ್ ಸರ್ಕಲ್, ಹಲಸೂರು, ಬೆನ್ನಗಾನಹಳ್ಳಿ, ಕೆ.ಆರ್.ಪುರಂ ರೈಲ್ವೆ ನಿಲ್ದಾಣ, ಗರುಡಾಚಾರ್ ಪಾಳ್ಯ, ಹೂಡಿ ಜಂಕ್ಷನ್, ಐಟಿಪಿಎಲ್ ಮಾರ್ಗವಾಗಿ ಸಂಚರಿಸಲಿದೆ. ಪ್ರತಿ 25 ನಿಮಿಷಕ್ಕೆ ಒಂದರಂತೆ 8 ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣದರ ಏರಿಕೆ ಮಾಡಿರುವುದನ್ನು ಖಂಡಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಭಾನುವಾರ ಶಾಂತಿನಗರ ಬಸ್ ನಿಲ್ದಾಣದಿಂದ ಸಚಿವ ರಾಮಲಿಂಗಾ ರೆಡ್ಡಿ ನಿವಾಸದವರೆಗೆ ಜಾಥಾ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. [ಬಿಬಿಪಿವಿ ಪ್ರತಿಭಟನೆಯ ಚಿತ್ರಗಳು]

English summary
Bangalore Metropolitan Transport Corporation (BMTC) introduce new Vajra bus services on Route No V401K and V435E. This service will commence from Monday, May 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X